ಕೊಲೊಂಬೋ: ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಲಂಕಾಗೆ ಮಾನವೀಯ ನೆರವು ನೀಡುತ್ತಿರುವ ಭಾರತವು ರವಿವಾರ ಅಕ್ಕಿ, ಔಷಧಗಳು, ಹಾಲಿನ ಪುಡಿ ಸೇರಿದಂತೆ ಅತ್ಯಾವಶ್ಯಕ ವಸ್ತುಗಳನ್ನು ಕಳುಹಿಸಿಕೊಟ್ಟಿದೆ. ಇವುಗಳನ್ನು ಹೊತ್ತ ಭಾರತೀಯ ನೌಕೆಯು ಕೊಲೊಂಬೋಗೆ ತಲುಪಿದೆ.
ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಅಲ್ಲಿನ ಪ್ರಧಾನಿ ರಣಿಲ್ ವಿಕ್ರಮಸಿಂಘೆ, “ಭಾರತದಿಂದ 200 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಶ್ರೀಲಂಕಾ ಸ್ವೀಕರಿಸಿದೆ. ಇದಕ್ಕಾಗಿ ನಾವು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಭಾರತದ ಜನತೆಗೆ ಹೃತ್ಪೂರ್ವಕ ಧನ್ಯವಾದ ತಿಳಿಸುತ್ತಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.
40,000 ಮೆ.ಟ. ಅಕ್ಕಿ, 500 ಮೆ.ಟ. ಹಾಲಿನ ಪುಡಿ ಮತ್ತು ಔಷಧಗಳನ್ನು ಕಳುಹಿಸುವುದಾಗಿ ಸ್ಟಾಲಿನ್ ಘೋಷಿಸಿದ್ದರು.