ಚೆನ್ನೈ: ತಮಿಳುನಾಡಿನಲ್ಲಿ ಡಿಎಂಕೆ ಸರಕಾರಕ್ಕೆ ಸೂಕ್ತ ವಿಪಕ್ಷವಾಗಿ ಕಾರ್ಯನಿರ್ವಹಿಸ ಬೇಕಿದ್ದ ಎಐಎಡಿಎಂಕೆ ಪಕ್ಷ ಮಂಕಾಗಿದ್ದು, ಅದರ ಲಾಭವನ್ನು ಬಿಜೆಪಿ ಪಡೆಯುತ್ತಿದೆ. ತಮಿಳುನಾಡು ಬಿಜೆಪಿಯ ಅಧ್ಯಕ್ಷ ಅಣ್ಣಾಮಲೈ, ಈ ನಿಟ್ಟಿನಲ್ಲಿ ಬಿಜೆಪಿಯನ್ನು ಹುರಿಗೊಳಿಸುತ್ತಿದ್ದಾರೆ.
ಕೇಂದ್ರದ ವಿರುದ್ಧ ಡಿಎಂಕೆ ಪಕ್ಷವು ಮಾಡುವ ಪ್ರತಿಯೊಂದು ಟೀಕೆಗೆ, ಪ್ರತಿಯೊಂದು ಆರೋಪ, ಆಗ್ರಹಗಳಿಗೆ ಪ್ರತಿಯಾಗಿ ಪ್ರತಿ ಕಾರ್ಯತಂತ್ರಗಳನ್ನು ಕೈಗೊಳ್ಳುವ ಮೂಲಕ ಬಿಜೆಪಿಗೆ ಭದ್ರ ನೆಲೆ ಒದಗಿಸುವಲ್ಲಿ ಕಾರ್ಯನಿರತವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇವರ ಕಾರ್ಯವೈಖರಿಯನ್ನು ಗಮನಿಸಿದ ಎಐಎಡಿಎಂಕೆಯ ನಾಯಕ ಪೊನ್ನಿಯನ್, ಬಿಜೆಪಿ ತಮಿಳುನಾಡಿನಲ್ಲಿ ಗಟ್ಟಿಯಾಗಿ ಬೇರೂರ ತೊಡಗಿದೆ ಎಂದು ಬಹಿರಂಗವಾಗಿಯೇ ಹೇಳಿರುವುದು ಅಣ್ಣಾಮಲೈ ಸಂಘಟನ ಚಾತುರ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಹೇಳಲಾಗಿದೆ.