ಚೆನ್ನೈ/ಹೊಸದಿಲ್ಲಿ: ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಅವರಿಗೆ ಝಡ್ ಪ್ಲಸ್ ದರ್ಜೆಯ ಭದ್ರತೆ ನೀಡಲು ಕೇಂದ್ರ ಸರಕಾರ ತೀರ್ಮಾನಿಸಿದೆ.
Advertisement
ಅವರಿಗೆ ಮಾವೋವಾದಿಗಳು ಮತ್ತು ಧಾರ್ಮಿಕ ಮೂಲಭೂತವಾದಿಗಳಿಂದ ಬೆದರಿಕೆ ಇರುವ ಬಗ್ಗೆ ಗುಪ್ತಚರ ಮೂಲಗಳು ಮಾಹಿತಿ ಖಚಿತಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಝಡ್ ಪ್ಲಸ್ ಭದ್ರತೆಯ ಹಿನ್ನೆಲೆಯಲ್ಲಿ ಬಿಜೆಪಿ ನಾಯಕನಿಗೆ ಸಿಆರ್‌ಪಿಎಫ್ನ ಕಮಾಂಡೋಗಳು ಭದ್ರತೆ ನೀಡಲಿದ್ದಾರೆ. ಇದುವರೆಗೆ ಅವರಿಗೆ ವೈ ದರ್ಜೆಯ ಭದ್ರತಾ ವ್ಯವಸ್ಥೆ ಇತ್ತು.