ಚೆನ್ನೈ : ತಮಿಳು ನಾಡಿನ ವಿಧಾನ ಸಭಾ ಕ್ಷೇತ್ರದ ಮತ ಎಣಿಕೆ ಮೊದಲ ಹಂತದಲ್ಲಿ ಡಿಎಂಕೆ ಪಕ್ಷ ಎಐಎಡಿಎಂಕೆ ಪಕ್ಷವನ್ನು ಹಿಂದಿಕ್ಕಿದೆ. ಸದ್ಯಕ್ಕೆ ಎರಡೂ ಪಕ್ಷಗಳ ಮುಖಂಡರು ತಮ್ಮ ತಮ್ಮ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಒಂದೆಡೆ ತಮಿಳುನಾಡು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಅವರು ತಮ್ಮ ತವರು ಕ್ಷೇತ್ರ ಸೇಲಂ ಜಿಲ್ಲೆಯ ಎಡಪ್ಪಡಿಯಲ್ಲಿ ಮುನ್ನಡೆ ಸಾಧಿಸಿದರ, ಇನ್ನೊಂದೆಡೆ ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್ ಇಲ್ಲಿನ ಕೊಲತೂರ್ ಕ್ಷೇತ್ರದಲ್ಲಿ ಮುಂದಿದ್ದಾರೆ.
ಓದಿ : ಭಾನುವಾರದ ನಿಮ್ಮ ರಾಶಿಫಲದಲ್ಲಿ ಏನಿದೆ : ಯಾರಿಗೆ ಶುಭ-ಯಾರಿಗೆ ಲಾಭ
ಸದ್ಯದ ಬೆಳವಣಿಗೆಯನ್ನು ಗಮನಿಸಿದರೆ, ಡಿಎಂಕೆ 128 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೇ, ಎಐಎಡಿಎಂಕೆ 92 ಕ್ಷೇತ್ರಗಳಲ್ಲಿ ಮುಂದಿದೆ. ಕುರಿಂಜಿಪಾಡಿ, ನೆಯೆವೆಲಿ, ವಿರುಧಾಚಲಂ ಕ್ಷೇತ್ರಗಳಲ್ಲಿ ಡಿಎಂಕೆ ಮುಂದಿದೆ.
ಧರಪುರಂನಲ್ಲಿ ಬಿಜೆಪಿಯ ರಾಜ್ಯ ಘಟಕದ ಮುಖ್ಯಸ್ಥ ಎಲ್ ಮುರುಗನ್ ಮತ್ತು ಎಐಎಡಿಎಂಕೆ ಮುಖಂಡರು ಮತ್ತು ರಾಜ್ಯ ಸಚಿವರಾದ ಕೆ ಸಿ ವೀರಮಣಿ ಮತ್ತು ಬೆಂಜಮಿನ್ ಇಲ್ಲಿ ಜೋಲಾರ್ ಪೆಟ್ ಮತ್ತು ಮಧುರಾವೊಯಲ್ ಕ್ಷೇತ್ರದಲ್ಲಿ ಮುನ್ನೆಡೆ ಕಾಯ್ದುಕೊಳ್ಳುತ್ತಿರುವುದು ಕಂಡು ಬರುತ್ತಿದೆ.
ಓದಿ : ಪಶ್ಚಿಮಬಂಗಾಳದಲ್ಲಿ ಟಿಎಂಸಿ, BJP ತೀವ್ರ ಸ್ಪರ್ಧೆ, ಎಡಪಕ್ಷ, ಕಾಂಗ್ರೆಸ್ ಮೈತ್ರಿಗೆ ಮುಖಭಂಗ!