Advertisement

ತಂಬಿಲ ಶೂಟಿಂಗ್‌ ಪೂರ್ಣ

05:45 PM Apr 10, 2019 | Sriram |

ತುಳು ಚಿತ್ರರಂಗದ ಚೊಚ್ಚಲ ಮಹಿಳಾ ನಿರ್ದೇಶಕಿ ಎಂಬ ಹೆಸರು ಪಡೆದ ಅಶ್ವಿ‌ನಿ ಕೋಟ್ಯಾನ್‌ ಆ್ಯಕ್ಷನ್‌ ಕಟ್‌ ಹೇಳಿರುವ “ತಂಬಿಲ’ ಸಿನೆಮಾ ಈಗ ಶೂಟಿಂಗ್‌ ಪೂರ್ಣಗೊಳಿಸಿದ್ದು, ಬಿಡುಗಡೆಯ ಹೊಸ್ತಿಲಲ್ಲಿದೆ.

Advertisement

“ನಮ್ಮ ಕುಡ್ಲ’ ಸಿನೆಮಾದ ಮೂಲಕ ತುಳು ಚಿತ್ರರಂಗದ ಮೊದಲ ಮಹಿಳಾ ನಿರ್ದೇಶಕಿ ಎಂಬ ಹೆಗ್ಗಳಿಕೆ ಪಡೆದುಕೊಂಡ ಅಶ್ವಿ‌ನಿ ಕೋಟ್ಯಾನ್‌ ಈಗ “ತಂಬಿಲ’ ಮಾಡುತ್ತಿದ್ದಾರೆ. ಧಾರ್ಮಿಕ ಹಿನ್ನೆಲೆಯ ಸ್ಪರ್ಶದೊಂದಿಗೆ ಸಾಗುವ ಕೌಟುಂಬಿಕ ಕಥೆಯಿರುವ ಈ ಸಿನೆಮಾವು ಮಹಿಳೆಯರನ್ನು ಗಮನದಲ್ಲಿಟ್ಟು ಅವರ ನಿರೀಕ್ಷೆಯಿಂದ ರೆಡಿ ಮಾಡಲಾಗಿದೆ.

ವಿಶೇಷವೆಂದರೆ, ಕರಾವಳಿಯಲ್ಲಿ ಆಂÂಕರ್‌ ಆಗಿ ಹೆಸರು ಮಾಡಿರುವ ಲಕ್ಷಿ$¾àಶ ಸುವರ್ಣ ಈ ಸಿನೆಮಾದಲ್ಲಿ ಮುಖ್ಯ ರೋಲ್‌ನಲ್ಲಿದ್ದಾರೆ. ಈ ಸಿನೆಮಾಕ್ಕೆ ಸಚಿನ್‌ ಸುವರ್ಣ ಅವರ ಕಥೆ, ಚಿತ್ರಕಥೆಯಿದೆ. ಸಂಕಲನದ ಜವಾಬ್ದಾರಿಯನ್ನೂ ಅವರೇ ವಹಿಸಿಕೊಂಡಿದ್ದಾರೆ. ವಿದ್ಯಾ ಸುವರ್ಣ, ಲೋಕೇಶ್‌ ಪೂಜಾರಿ ಮತ್ತು ಸಾಯಿ ನೋಂಡಾ ಅವರು ಈ ಸಿನೆಮಾ ನಿರ್ಮಿಸಿದ್ದಾರೆ. ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ನಿರೀಕ್ಷೆ ಮೂಡುವ ರೀತಿಯಲ್ಲಿ ಸಿನೆಮಾ ಸಿದ್ಧªಗೊಳಿಸಲಾಗಿದೆ ಎಂಬುದು ಸಿನೆಮಾ ತಂಡದ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next