ಸೆಲೆಬ್ರೆಟಿ ಲೋಕದಲ್ಲಿ ಹಾಗೆಯೇ. ನಟಿಯರ ಖಾಸಗಿ ಜೀವನದ ಬಗ್ಗೆ ಗಾಸಿಪ್ ಗಳು ಆಗಾಗ ಪ್ರಚಾರ ಪಡೆಯುತ್ತದೆ. ನಟಿಮಣಿಯರ ಲವ್ ಲೈಫ್, ವಿವಾಹದ ಕುರಿತಾದ ಸುದ್ದಿಗಳಿಗೆ ಬೇಗನೇ ಮೈಲೇಜ್ ಸಿಗುತ್ತದೆ. ಈ ಬಾರಿ ತಮನ್ನಾ ಮದುವೆ ಗಾಸಿಪ್ ಗಳ ಸರದಿ.
ಬಾಹುಬಲಿ ಚೆಲುವೆ, ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರ ಮದುವೆಯ ಬಗ್ಗೆ ವದಂತಿಗಳು ಹೊರಹೊಮ್ಮುತ್ತಿವೆ. ಮುಂಬೈ ಮೂಲದ ಯುವ ಉದ್ಯಮಿಯೊಬ್ಬರಿಗೆ ನಟಿ ‘ಯಸ್’ ಹೇಳಿದ್ದಾರೆ ಎಂದು ವರದಿಯಾಗಿದೆ. ಆದರೆ ತಮನ್ನಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವದಂತಿಗಳಿಗೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:ಬೀಚ್‌ನಲ್ಲಿ ಪ್ರವಾಸಿಗರ ಸುರಕ್ಷೆಗೆ ಗರಿಷ್ಠ ಆದ್ಯತೆ ನೀಡಿ: ಕೂರ್ಮಾ ರಾವ್
ತಮನ್ನಾ ಭಾಟಿಯಾ ಅವರು ತಮ್ಮ ಹಳೆಯ ವಿಡಿಯೋವೊಂದನ್ನು ಇನ್ಸ್ಟಾ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು ಹುಡುಗನಂತೆ ವೇಷ ಧರಿಸಿದ್ದು, ಅದರಲ್ಲಿ “ನನ್ನ ಬ್ಯುಸಿನೆಸ್ ಮ್ಯಾನ್ ಪತಿಯನ್ನು ಪರಿಚಯಿಸುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ವಿವಾಹ ವದಂತಿಯನ್ನು ತಮ್ಮದೇ ಶೈಲಿಯಲ್ಲಿ ತಳ್ಳಿಹಾಕಿದರು.
Related Articles
ನಟಿ ತಮನ್ನಾ ಅವರು ವಿವಿಧ ಭಾಷೆಗಳಲ್ಲಿ ಮುಂಬರುವ ಪ್ರಾಜೆಕ್ಟ್‌ಗಳಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ. ತಮನ್ನಾ ಇತ್ತೀಚೆಗೆ ತಮ್ಮ ಚಲನಚಿತ್ರವಾದ ‘ಪ್ಲಾನ್ ಎ ಪ್ಲಾನ್ ಬಿ’ ಪ್ರಚಾರದಲ್ಲಿ ಕಾಣಿಸಿಕೊಂಡರು.
ತಮನ್ನಾ ಅವರು ತಮ್ಮ ‘ಭೋಲಾ ಶಂಕರ್’ ಚಿತ್ರದ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ, ಇದರಲ್ಲಿ ಅವರು ಮೆಗಾಸ್ಟಾರ್ ಚಿರಂಜೀವಿ ಅವರೊಂದಿಗೆ ಪರದೆಯನ್ನು ಹಂಚಿಕೊಳ್ಳಲಿದ್ದಾರೆ. ಮಲಯಾಳಂ ಚಿತ್ರ ಬಾಂದ್ರಾದಲ್ಲಿಯೂ ತಮನ್ನಾ ಕಾಣಿಸಿಕೊಳ್ಳಲಿದ್ದಾರೆ. ಬೋಲೆ ಚೂಡಿಯಾ, ಗುರ್ತುಂಡ ಸೀತಾಕಾಲಂ ಮತ್ತು ಜೀ ಕರ್ದಾ ಅವರ ಮುಂಬರುವ ಚಿತ್ರಗಳು.