Advertisement

ಬೇಡ್ತಿ-ವರದಾ ಜೋಡಣೆ ಕೈಬಿಡಿ

04:32 PM Apr 07, 2021 | Team Udayavani |

ಶಿರಸಿ: ರಾಜ್ಯ ಸರಕಾರ ಬಜೆಟ್‌ನಲ್ಲಿ ಪ್ರಸ್ತಾಪಿಸಿದ ಬೇಡ್ತಿ ವರದಾ ನದಿ ಜೋಡಣೆ ಕೈಬಿಡಬೇಕು ಎಂದು ತಾಲೂಕುಪಂಚಾಯಿತಿ ಮಾಸಿಕ ಸಭೆಯಲ್ಲಿ ರಾಜ್ಯ ಸರಕಾರವನ್ನು ಆಗ್ರಹಿಸಲಾಯಿತು.

Advertisement

ಮಂಗಳವಾರ ಅಧ್ಯಕ್ಷೆ ತಾಪಂ ಸಭಾಂಗಣದಲ್ಲಿ ಶ್ರೀಲತಾ ಕಾಳೇರಮನೆಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಸರ್ವಾನುಮತದಲ್ಲಿಠರಾಯಿಸಲು ನಿರ್ಧರಿಸಲಾಯಿತು.ಹಸಿರು ಸ್ವಾಮೀಜಿ ಸ್ವರ್ಣವಲ್ಲಿ ಶ್ರೀಗಳುಕೈಗೊಂಡ ನಿರ್ಧಾರಕ್ಕೆ ನಾವು ಬದ್ಧರಿದ್ದೇವೆ.ಬೇಡ್ತಿ ನದಿಗೆ ಉತ್ತರ ಕರ್ನಾಟಕ ಭಾಗದಗಲೀಜು ಸೇರುತ್ತಿದೆ. ಹೀಗಿರುವಾಗ ಅದನ್ನ ಕುಡಿಯುವ ನೀರಿಗೆ ಬಳಸಲುಹೇಗೆ ಸಾಧ್ಯವಾಗುತ್ತದೆ ಎಂದು ತಾಪಂ ಉಪಾಧ್ಯಕ್ಷ ಚಂದ್ರು ಎಸಳೆ ಪ್ರಸ್ತಾಪಿಸಿದರು.

ಪರಿಸರ ಹೆಸರಿನಲ್ಲಿ ಅಭಿವೃದ್ಧಿಗೆಹಿನ್ನಡೆಯಾಗಬಾರದು ಎಂದ ಸದಸ್ಯರು,ಕುಮಟಾ -ಶಿರಸಿ ರಸ್ತೆಗೆ ಯಾವುದೇರೀತಿಯಲ್ಲಿ ಅಡ್ಡಿಯಾಗಬಾರದು ಎಂದು ಮನವಿ ಮಾಡಿದರು.

4 ಗ್ರಾಮ ಪಂಚಾಯಿತಿ ವ್ಯಾಪ್ತಿ ಹೊಂದಿರುವ ದಾಂಡೇಲಿಗೆ 11 ತಾಪಂಸದಸ್ಯ ಸ್ಥಾನ ನೀಡಲಾಗಿದೆ. ಆದರೆ32 ಗ್ರಾಪಂಗಳಿರುವ ಶಿರಸಿ ತಾಲೂಕಿಗೆ ಕೇವಲ 10 ತಾಪಂ ಸದಸ್ಯ ಸ್ಥಾನನೀಡಲಾಗಿದೆ. ಕಳೆದ ಸಲದ 13 ಸದಸ್ಯಸ್ಥಾನದಲ್ಲಿ 3ಸ್ಥಾನ ಕಡಿಮೆ ಮಾಡಲಾಗಿದೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಅವೈಜ್ಞಾನಿಕ ಜೋಡಣೆಗೆ ಅಸಮಾಧಾನ ವ್ಯಕ್ತಪಡಿಸಿದರು.

ಬನವಾಸಿಯಲ್ಲಿ ಗ್ರಿಡ್‌ ಕಾಮಗಾರಿ ನಡೆಯದೇ ಇರುವ ಬಗ್ಗೆ ಅಧ್ಯಕ್ಷೆ ಶ್ರೀಲತಾ ಕಾಳೇರಮನಿಅಸಮಾಧಾನ ವ್ಯಕ್ತಪಡಿಸಿ ಇನ್ನೂ ಟೆಂಡರ್‌ಕರೆಯಲಾಗಿಲ್ಲ ಎಂದರು. ಡಿಪಿಆರ್‌ಸಿದ್ಧವಾಗಿದೆ. ಟೆಂಡರ್‌ ಕರೆಯೋದುಬಾಕಿಯಿದೆ ಎಂದು ಹೆಸ್ಕಾಂ ಅಧಿಕಾರಿಧರ್ಮಾ ತಿಳಿಸಿದರು. ಕೊವಿಡ್‌ ಲಸಿಕೆನೀಡಲಾಗುತ್ತಿದೆ. ಲಸಿಕೆ ಕೊರತೆಯಿಂದಕೆಲ ದಿನ ತೊಂದರೆಯಾಗಿದೆ. ಇದೀಗ ಆರೂವರೆ ಸಾವಿರ ಡೋಸ್‌ ಬಂದಿದೆ. ನಿತ್ಯ 1500ಮಂದಿಗೆ ಲಸಿಕೆ ನೀಡಲಾಗುತ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ| ವಿನಾಯಕ ಭಟ್ಟ ತಿಳಿಸಿದರು.

Advertisement

ಅಧಿಕಾರಿ ರಾಮಚಂದ್ರ ಗಾಂವಕರ ಮಾತನಾಡಿ, ಮೇಯೊಳಗೆ ತಾಪಂಕಾಮಗಾರಿ ಆರಂಭವಾಗಬಹುದು.ಶೀಘ್ರ ಟೆಂಡರ್‌ ಕರೆಯಲಾಗುತ್ತಿದೆ.ಕುಡಿಯುವ ನೀರಿನ ಯೋಜನೆಗೆ ಜನರ ವಂತಿಗೆ ಶೇ. 10 ಕೊಡುತ್ತಿಲ್ಲ. ಬೋರ್‌ಹೊಡೆದರೂ ನೀರು ಬರುತ್ತಿಲ್ಲ ಎಂದರು.ಕಲಗಾರ ಗ್ರಾಮದ ಬಾಂದಾರ ಒಂದುವರ್ಷದಿಂದ ಟೆಂಡರ್‌ ಪ್ರಕ್ರಿಯೆ ನಡೆಸದೇಇರುವ ಬಗ್ಗೆ ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹಳದೋಟ ಆಕ್ಷೇಪಿಸಿದರು. ಇಓ ಏಫ್‌.ಜಿ.ಚಿನ್ನಣ್ಣವರ, ಸದಸ್ಯರಾದ ನಾಗರಾಜ್‌ ಶೆಟ್ಟಿ, ನರಸಿಂಹ ಬಕ್ಕಳ, ಸುರೇಶ ನಾಯ್ಕ, ವಿನಾಯಕ ಹೆಗಡೆ, ರತ್ನಾ ಶೆಟ್ಟಿ ಇದ್ದರು.

ಮೇ ದಲ್ಲಿ ತಾಪಂ ಸದಸ್ಯರ ಐದು ವರ್ಷದ ಅವ ಧಿ ಪೂರ್ಣವಾಗುತ್ತಿರುವಹಿನ್ನೆಲೆಯಲ್ಲಿ ಮಂಗಳವಾರದ ಸಭೆಕೊನೆ ಸಭೆಯಾಯಿತು. ಆರ್ಥಿಕವರ್ಷದ ಪ್ರಥಮ ಸಭೆ ಇದಾಗಿದ್ದರೂ13 ಸದಸ್ಯರಿಗೆ ಇದು ಕೊನೆ ಸಭೆ ಆಗಿತ್ತು.ಸದಸ್ಯರು ಭಾವುಕರಾಗಿ ಮಾತನಾಡಿದರು.ಅಧ್ಯಕ್ಷೆ ಕಾಳೇರಮನೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next