Advertisement

ಗೈರಾದ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳಿ

04:54 PM Apr 10, 2021 | Team Udayavani |

ಶಿರಹಟ್ಟಿ: ಸಭೆಗೆ ಗೈರಾದ ವಿವಿಧ ಇಲಾಖೆಗಳ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಶಾಸಕ ರಾಮಣ್ಣ ಲಮಾಣಿ ತಾಪಂ ಇಒ ಡಾ|ಎನ್‌.ಎಚ್‌. ಓಲೇಕಾರ ಅವರಿಗೆ ಸೂಚಿಸಿದರು.

Advertisement

ತಾಪಂ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕರು ಮಾತನಾಡಿದರು. ಜಿಪಂ ಸದಸ್ಯೆ ರೇಖಾ ಅಳವಂಡಿ ಮಾತನಾಡಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ ಜಲಜೀವನ ಮಿಷನ್‌ ಯೋಜನೆ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ, ಆರ್‌ಡಬ್ಲ್ಯುಎಸ್‌ ಎಇಇಯೊಂದಿಗೆ ತಮ್ಮನ್ನುಆಹ್ವಾನಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದಶಾಸಕ ರಾಮಣ್ಣ ಲಮಾಣಿ ಹಾಗೂತಾಪಂ ಇಒ ಓಲೇಕಾರ, ಮುಂದೆ ಹೀಗಾಗದಂತೆ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಎಲ್ಲ ರೈತರಿಗೂ ವಿಮೆ ಸೌಲಭ್ಯ ಸಿಗಲಿ: ಕೃಷಿ ಇಲಾಖೆ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಜಿಪಂಸದಸ್ಯ ಎಸ್‌.ಪಿ.ಬಳಿಗಾರ, ಬೆಳೆ ವಿಮಾ ಕಂತು ತುಂಬಿದ ಪ್ರತಿಯೊಬ್ಬ ರೈತರಿಗೂಬೆಳೆ ವಿಮೆ ಸಿಗುವಂತಾಗಬೇಕು. ಸೌಲಭ್ಯದಿಂದ ಯಾರೂ ವಂಚಿತರಾಗಬಾರದು. ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕೆಂದು ಸಹಾಯಕ ನಿರ್ದೆಶಕ ಮಹೇಶ ಬಾಬು ಅವರಿಗೆ ಸೂಚಿಸಿದರು.

ಪಿಡಿಒಗಳು ಸ್ಪಂದಿಸುತ್ತಿಲ್ಲ: ನರೇಗಾ ಯೋಜನೆಯಡಿ ತಯಾರಿಸಿದಕ್ರಿಯಾ ಯೋಜನೆಗಳ ಅನುಮೋದನೆ ಆಗುತ್ತಿಲ್ಲ. ಈ ಬಗ್ಗೆ ಶಿರಹಟ್ಟಿ-ಲಕ್ಷ್ಮೇಶ್ವರ ತಾಪಂ ಇಒಗಳ ಗಮನಕ್ಕೂ ತರಲಾಗಿದೆ. ಗ್ರಾಪಂ ಮಟ್ಟದಲ್ಲಿಪಿಡಿಒಗಳು ಇಲಾಖೆಯೊಂದಿಗೆಸ್ಪಂದಿಸುತ್ತಿಲ್ಲ. ಈ ಬಗ್ಗೆ ಅವರಿಗೆ ಸೂಕ್ತನಿರ್ದೆಶನ ನೀಡಬೇಕೆಂದು ಹಿರಿಯತೋಟಗಾರಿಕೆ ನಿರ್ದೆಶಕ ಸುರೇಶ ಕುಂಬಾರ ಹೇಳಿದರು.

Advertisement

ಹಲವು ತಿಂಗಳುಗಳಿಂದ ಶಾಸಕ ರಾಮಣ್ಣ ಲಮಾಣಿ ಅಧ್ಯಕ್ಷತೆಯಲ್ಲಿತ್ರೈಮಾಸಿಕ ಕೆಡಿಪಿ ಸಭೆಗಳುಜರುಗಿರಲಿಲ್ಲ. ಆದರೆ, ನಡೆದ ಈ ಸಭೆಯಲ್ಲಿ 2-3 ಇಲಾಖೆಗಳ ಮೇಲೆಚರ್ಚೆಗಳು ನಡೆದವು. ಈ ನಡುವೆ ಸಭೆಯ ಮಧ್ಯೆಯೇ ಶಾಸಕ ರಾಮಣ್ಣಲಮಾಣಿ ತಾಪಂ ಸದಸ್ಯರನ್ನು ಸನ್ಮಾನಿಸಿ ಸಭೆಯಿಂದ ಹೊರನಡೆದಿದ್ದರಿಂದ ಸಭೆಗಂಭೀರತೆ ಕಳೆದುಕೊಂಡಿತು. ಕೆಡಿಪಿಸಭೆಯಲ್ಲಿ ಯಾವುದೇ ಗಂಭೀರ

ಚರ್ಚೆಯಾಗಲಿಲ್ಲ. ಆದರೆ, ಶಿರಹಟ್ಟಿಮತ್ತು ಲಕ್ಷ್ಮೇಶ್ವರ ತಾಪಂ ಸದಸ್ಯರಸನ್ಮಾನಕ್ಕೆ ಮಾತ್ರ ಸೀಮಿತವಾದಂತೆ ಕಂಡು ಬಂದಿತು.

ಸಭೆಯಲ್ಲಿ ಶಿರಹಟ್ಟಿ ತಾಪಂ ಅಧ್ಯಕ್ಷಈಶಪ್ಪ ಲಮಾಣಿ, ಲಕ್ಷ್ಮೇಶ್ವರ ತಾಪಂಅಧ್ಯಕ್ಷ ಪರಸಪ್ಪ ಇಮ್ಮಡಿ, ಉಪಾಧ್ಯಕ್ಷೆಪವಿತ್ರಾ ಶಂಕಿನದಾಸರ, ಹುಸೇನಬಿಅತ್ತಿಗೇರಿ, ಜಿಪಂ ಸದಸ್ಯರಾದ ಎಸ್‌ .ಪಿ.ಬಳಿಗಾರ, ರೇಖಾ ಅಳವಂಡಿ,ದೇವಕ್ಕ ಲಮಾಣಿ, ತಹಶೀಲ್ದಾರ್‌ಜೆ.ಬಿ.ಮಜ್ಜಗಿ, ತಾಪಂ ಇಒಗಳಾದಡಾ| ಎನ್‌.ಎಚ್‌.ಓಲೇಕಾರ, ಆರ್‌.ವೈ. ಗುರಿಕಾರ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next