Advertisement
ಆಲೂರಿನಿಂದ ಕಂದಲಿ5 ಕಿ.ಮೀ,ಮಗ್ಗೆ 23 ಕಿ.ಮೀ., ಮತ್ತು ಬಾಳ್ಳುಪೇಟೆ 15ಕಿ.ಮೀ. ಅಂತರದಲ್ಲಿದೆ. ಕಂದಲಿ ಕೇಂದ್ರದಿಂದ ಅರ್ಧಭಾಗ, ಬಾಳ್ಳುಪೇಟೆ ಕೇಂದ್ರದಿಂದ ಶೇ. 25. ವಿದ್ಯುತ್‌ಪಡೆಯಲಾಗುತ್ತಿದೆ. ಮಗ್ಗೆ ಕೇಂದ್ರ ಸಂಪೂರ್ಣತಾಲೂಕಿಗೆ ಸರಬರಾಜು ಮಾಡುತ್ತಿದ್ದರೂಅಡಚಣೆಗಳು ಹೆಚ್ಚಾಗಿದೆ. ಕಸಬಾ ಹೋಬಳಿಗೆವಿದ್ಯುತ್ತನ್ನು ಮೂರು ಕೇಂದ್ರಗಳಿಂದ ಪಡೆಯಬೇಕು.ಈ ಕೇಂದ್ರಗಳು ತಾಲೂಕು ಕೇಂದ್ರಕ್ಕೆದೂರವಿರುವುದರಿಂದ ಕ್ಷೀಣ ವಿದ್ಯುತ್ ಪ್ರವಾಹದಜತೆಗೆ ಅಡಚಣೆಗಳೂ ನಿರಂತರವಾಗಿದೆ. ಮಗ್ಗೆ ಕೇಂದ್ರಬಹುತೇಕ ಕಾಫಿ ತೋಟ ಸೇರಿದಂತೆ ಕಾಡುಪ್ರದೇಶವಾಗಿದೆ.
Related Articles
Advertisement
ಇಲ್ಲದಿದ್ದರೆ ಸಂಕಷ್ಟ ತಪ್ಪಿದ್ದಲ್ಲ. ಕಂದಲಿ ಸ್ಟೇಷನ್‌ಹತ್ತಿರವಿರುವುದರಿಂದ ಪಟ್ಟಣಕ್ಕೆ ಮಾತ್ರ ನಿರಂತರವಿದ್ಯುತ್ ಕೊಡುತ್ತಿದ್ದರೂ, ಕಂದಲಿ, ಹಾಸನವ್ಯಾಪ್ತಿಯಲ್ಲಿ ಅಡಚಣೆಯಾದರೆ ಇಲ್ಲಿಯೂಅಡಚಣೆಯಾಗುತ್ತದೆ ಎಂಬು ಸಾರ್ವಜನಿಕರದೂರಾಗಿದೆ.ಬೇರೆ ತಾಲೂಕುಗಳಲ್ಲಿ 4ರಿಂದ 5 ಎಂಯುಎಸ್‌ಎಸ್ ಪವರ್‌ಸ್ಟೇಷನ್‌ಗಳಿವೆ.
ಅದರೆ, ಆಲೂರುತಾಲೂಕಿನಲ್ಲಿ ಮಗ್ಗೆ ಗ್ರಾಮದಲ್ಲಿ ಮಾತ್ರ ಪವರ್‌ಸ್ಟೇಷನ್ ಇದೆ. ಅದರಲ್ಲೂ ಮಗ್ಗೆ ಗ್ರಾಮದ ಭಾಗದಲ್ಲಿಕಾಡಾನೆಗಳ ಉಪಟಳ ಹೆಚ್ಚಿರುವುದರಿಂದ ದಿನದ 24ಗಂಟೆಯೂ ವಿದ್ಯುತ್ ಹರಿಸಬೇಕಾದ ಅನಿವಾರ್ಯವಿದೆ.ಆದ್ದರಿಂದ ಆಲೂರು ತಾಲೂಕಿಗೆ ಇನ್ನೂ ಮೂರ್ನಲ್ಕುಪವರ್ ಸ್ಟೇಷನ್ ಸ್ಥಾಪನೆ ಮಾಡಿದರೆ ಬೇರೆ ಹೋಬಳಿಗಳಿಗೂ ವಿದ್ಯುತ್ ಪೂರೈಕೆ ಸುಗಮವಾಗುತ್ತದೆ.
ಟಿ.ಕೆ.ಕುಮಾರಸ್ವಾಮಿ ಆಲೂರು