Advertisement

ಉತ್ಸಾಹದಿಂದ ಪಾಲ್ಗೊಂಡ ಕ್ರೀಡಾಪಟುಗಳು

11:48 AM Oct 06, 2018 | |

ಮಹಾನಗರ: ದ.ಕ. ಜಿಲ್ಲಾ ಪಂಚಾಯತ್‌, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ತಾಲೂಕು ಪಂಚಾಯತ್‌, ಮಹಾನಗರ ಪಾಲಿಕೆ ಆಶ್ರಯದಲ್ಲಿ 2018-19ನೇ ಸಾಲಿನ ಮಂಗಳೂರು ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಶುಕ್ರವಾರ ಮಂಗಳ ಕ್ರೀಡಾಂಗಣದಲ್ಲಿ ನಡೆಯಿತು.

Advertisement

ನಗರದ ನೂರಕ್ಕೂ ಹೆಚ್ಚು ಕ್ರೀಡಾಪಟುಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಅದರಲ್ಲಿಯೂ ಆ್ಯತ್ಲೆಟಿಕ್‌- ಪುರುಷರಿಗೆ 100 ಮೀ., 200 ಮೀ, 400 ಮೀ., 800 ಮೀ., 1,500 ಮೀ., 5,000 ಮೀ., ಎತ್ತರ ಜಿಗಿತ, ಉದ್ದ ಜಿಗಿತ, ಗುಂಡು ಎಸೆತ, ಟ್ರಿಪಲ್‌ಜಂಪ್‌, ಜಾವೆಲಿನ್‌ ತ್ರೋ, ಚಕ್ರ ಎಸೆತ, 110ಮೀ. ಹರ್ಡಲ್ಸ್‌, 4×100 ಮೀ. ರಿಲೇ, 4×400 ಮೀ. ರಿಲೇ ಮತ್ತು ಮಹಿಳೆಯರಿಗೆ- 100ಮೀ., 200ಮೀ., 400ಮೀ., 800ಮೀ., 1500 ಮೀ., 3000ಮೀ., ಎತ್ತರ ಜಿಗಿತ, ಉದ್ದ ಜಿಗಿತ, ಗುಂಡು ಎಸೆತ, ಟ್ರಿಪಲ್‌ ಜಂಪ್‌, ಜಾವೆಲಿನ್‌ ತ್ರೋ, ಚಕ್ರ ಎಸೆತ, 100ಮೀ. ಹರ್ಡಲ್ಸ್‌, 4×100ಮೀ. ರಿಲೇ, 4×400 ಮೀ. ರಿಲೇ, ವಾಲಿಬಾಲ್‌, ಕಬಡ್ಡಿ, ಖೋ ಖೋ, ಬ್ಯಾಡ್ಮಿಂಟನ್‌ ಮತ್ತು ತ್ರೋಬಾಲ್‌ ಕ್ರೀಡೆಗಳು ನಡೆದವು.

ಸತತ ತರಬೇತಿಯಿಂದ ಸಾಧಿಸಿ
ದ.ಕ. ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷೆ ಕಸ್ತೂರಿ ಪಂಜ ಚಾಲನೆ ನೀಡಿ, ಕ್ರೀಡಾಪಟುಗಳು ತಮಗಿಷ್ಟವಾದ ಕ್ಷೇತ್ರದಲ್ಲಿ ಸಾಧನೆ ಮಾಡಲು ಸತತ ತರಬೇತಿ ಅಗತ್ಯವಿದೆ. ಸೂಕ್ತ ವೇದಿಕೆ ದೊರಕಿದಾಗ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದರು.

ಕಾರ್ಪೊರೇಟರ್‌ ಜಯಂತಿ ಆಚಾರ್‌, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್‌ ಡಿ’ಸೋಜಾ, ಸಹಾಯಕ ಯುವಸಬಲೀಕರಣ ಮತ್ತು ಕ್ರೀಡಾಧಿಕಾರಿ ಲಿಲ್ಲಿ ಪಾಯಸ್‌, ಗಿರೀಶ್‌ ಶೆಟ್ಟಿ, ಸುರೇಶ್‌ ರೈ, ಗಿರೀಶ್‌ ಶೆಟ್ಟಿ, ಪ್ರಶಾಂತ್‌ ಬೇಕಲ್‌, ನಾರಾಯಣ ಆಳ್ವ, ಕೆ.ಎಚ್‌. ನಾಯಕ್‌, ಹರೀಶ್‌ ರೈ ಉಪಸ್ಥಿತರಿದ್ದರು. ಶಿವಾನಿ ಅವರು ಕ್ರೀಡಾ ಪ್ರತಿಜ್ಞೆ ಬೋಧಿಸಿದರು.

ಪಂದ್ಯಾಟಗಳು
ಮಂಗಳೂರು ತಾಲೂಕು ಪುರುಷರ ಫ‌ುಟ್‌ಬಾಲ್‌ ಪಂದ್ಯಾಟವು ಅ.7ರಂದು ಬೆಳಗ್ಗೆ 9.30ಕ್ಕೆ ನೆಹರೂ ಮೈದಾನದಲ್ಲಿ ನಡೆಯಲಿದೆ. ಶಟಲ್‌ ಬ್ಯಾಡ್ಮಿಂಟನ್‌, ಹ್ಯಾಂಡ್‌ಬಾಲ್‌, ಹಾಕಿ, ಬಾಸ್ಕೆಟ್‌ಬಾಲ್‌, ಟೆನ್ನಿಸ್‌, ನೆಟ್‌ಬಾಲ್‌ ಹಾಗೂ ಟೇಬಲ್‌ ಟೆನಿಸ್‌ ಕ್ರೀಡೆಗಳನ್ನು ಪುರುಷರಿಗೆ ಮತ್ತು ಮಹಿಳೆಯರಿಗೆ ಜಿಲ್ಲಾ ಮಟ್ಟದಲ್ಲಿ ನಡೆಯಲಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next