Advertisement

28ಕ್ಕೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

11:40 AM Jun 24, 2019 | Suhan S |

ಮಳವಳ್ಳಿ; ಕನ್ನಡ ಭಾಷೆ ಹಾಗೂ ಸಾಹಿತ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜೂ.28 ರಂದು ನಡೆಯುತ್ತಿರುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಶಾಸಕ ಡಾ. ಕೆ ಅನ್ನದಾನಿ ತಿಳಿಸಿದರು.

Advertisement

ತಾಲೂಕು ಕಚೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಮಂಟೇಸ್ವಾಮಿ ಮಹಾದ್ವಾರ, ಎಂ.ವಿ ವೆಂಕಟಪ್ಪ ಮಂಟಪ, ಮಳವಳ್ಳಿ ಸುಂದ್ರಮ್ಮ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಮ್ಮೇಳನದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌ ಪುಟ್ಟರಾಜು ನೆರೆವೇರಿಸುವರು. ಅಧ್ಯಕ್ಷತೆಯನ್ನು ಶಾಸಕ ಡಾ. ಕೆ.ಅನ್ನದಾನಿ ವಹಿಸಲಿದ್ದಾರೆ ಎಂದು ಹೇಳಿದರು.

ಮೆರವಣಿಗೆ: ಜಾನಪದ ಕಲಾಮೇಳದೊಂದಿಗೆ ಸಮ್ಮೇಳನದ ಅಧ್ಯಕ್ಷರನ್ನು ಮೆರವಣಿಗೆ ಮೂಲಕ ತಾಪಂ ವತಿಯಿಂದ ಅಂಬೇಡ್ಕರ್‌ ಭವನದವರೆಗೆ ಕರೆ ತರಲಾಗುವುದು, ಸಮ್ಮೇಳ ನಾಧ್ಯಕ್ಷರ ಮೆರವಣಿಗೆಯನ್ನು ಚಿತ್ರನಟ ನಿಖೀಲ್ಕುಮಾರಸ್ವಾಮಿ ಉದ್ಘಾಟಿಸುವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಸಿ.ಕೆ ರವಿಕುಮಾರ ಚಾಮಲಾಪುರ ಆಶಯ ನುಡಿ ನುಡಿಯುವರು. ಸಂಸದೆ ಎ ಸುಮಲತಾ ಪುಸ್ತಕ ಮಳಿಗೆ ಉದ್ಘಾಟಿಸುವರು. ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಯನ್ನು ಜಿಪಂ ಅಧ್ಯಕ್ಷೆ ನಾಗರತ್ಮಮ್ಮ ನೆರೆವೇರಿಸಲಿದ್ದು, ವಿಧಾನಪರಿಷತ್‌ ಸದಸ್ಯ ಮರಿತಿಬ್ಬೇಗೌಡರು ನಿಕಟಪೂರ್ವ ಅಧ್ಯಕ್ಷ ಮ.ಸಿ.ನಾರಯನ್‌ರನ್ನು ಅಭಿನಂದಿಸಲಿದ್ದಾರೆ. ಡಾ. ಎನ್‌.ಎಸ್‌.ಶಂಕರೇಗೌಡ ಸಮ್ಮೇಳನಾ ಧ್ಯಕ್ಷರ ಭಾಷಣ ಮಾಡಲಿದ್ದಾರೆ ಎಂದರು.

ಕವಿಗೋಷ್ಠಿ: ಮಧ್ಯಾಹ್ನ 1 ಗಂಟೆಗೆ ಮಳವಳ್ಳಿ ತಾಲೂಕು ದರ್ಶನ ಎಂಬ ವಿಷಯವಾಗಿ ಮೊದಲನೇ ಗೋಷ್ಠಿ, ಸಾಹಿತಿ ಡಾ. ಬಸಪ್ಪ ನೆಲಮಾಕನಗಳ್ಳಿ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ಸಂಜೆ 5 ಗಂಟೆಗೆ ಸಮ್ಮೇಳನದ ಸಮರೋಪ ಸಮಾರಂಭ ನಡೆಯಲಿದ್ದು, ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಸಾಧಕರಿಗೆ ಸನ್ಮಾನಿಸುವರು. ಸಮ್ಮೇಳನಾಧ್ಯಕ್ಷರಿಗೆ ವಿಧಾನಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಅಭಿನಂದನೆ ಸಲ್ಲಿಸುವರು. ಪ್ರೊ. ಜಿ.ಟಿ.ವೀರಪ್ಪ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.

ಪ್ರೋತ್ಸಾಹ: ಗ್ರಾಮೀಣ ಪ್ರದೇಶದಲ್ಲಿ ಹಲವಾರು ಕವಿಗಳು ಇಂದಿಗೂ ಕೂಡ ಎಲೆಮರೆಕಾಯಿ ಯಂತಿದ್ದಾರೆ, ಅವರನ್ನು ಗುರುತಿಸಿ ಪ್ರೋತ್ಸಾಹಿಸಲು ಸಾಹಿತ್ಯ ಸಮ್ಮೇಳನ ಸಹಾಯಕವಾಗಲಿದೆ. ಸಾಹಿತ್ಯ ಸಮ್ಮೇಳನದಲ್ಲಿ ನಾಡು, ನುಡಿ, ನೆಲ, ಜಲ, ರೈತರ ಸಮಸ್ಯೆಗಳು, ಕನ್ನಡ ಭಾಷೆ ಉಳಿವು ಸೇರಿದಂತೆ ಇತರೆ ವಿಷಯಗಳ ಬಗ್ಗೆ ವಿದ್ವಾಂಸರು ಹಾಗೂ ವಿಚಾರವಂತರಿಂದ ಗೋಷ್ಠಿಗಳು ನಡೆಯಲಿದ್ದು, ಸಾಹಿತಿಗಳು, ವಿದ್ಯಾರ್ಥಿಗಳು, ಕನ್ನಡ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ಕೋರಿದರು.

Advertisement

ಕಸಾಪ ಜಿಲ್ಲಾಧ್ಯಕ್ಷ ರವಿಚಾಮಲಪುರ, ತಾಲೂಕು ಅಧ್ಯಕ್ಷ ಕೊದೇನಕೊಪ್ಪಲು ದೇವರಾಜು, ಜಿಲ್ಲಾ ಕಾರ್ಯದರ್ಶಿ ಕೃಷ್ಣೇಗೌಡ, ವಕೀಲ ಮರಿಸ್ವಾಮಿ, ಸಂಘಟನೆ ಕಾರ್ಯದರ್ಶಿ ಜಯಶಂಕರೇಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next