Advertisement

ವಿಧಾನಸಭೆ ಬಳಿಕವೇ ತಾ.ಪಂ.-ಜಿ.ಪಂ ಚುನಾವಣೆ?

12:44 AM Sep 26, 2022 | Team Udayavani |

ಬೆಂಗಳೂರು: ಮುಂಬರುವ ರಾಜ್ಯ ವಿಧಾನಸಭೆಯ ಚುನಾವಣೆಗೆ “ಉಪಾಂತ್ಯ’ ಎಂದೇ ಪರಿಗಣಿಸಲಾಗಿದ್ದ ತಾ.ಪಂ.- ಜಿ.ಪಂ. ಚುನಾ ವಣೆ ಗಳು 2023ರ ಮೇ ಒಳಗೆ ನಡೆಯವುದಕ್ಕೆ ಸಾಧ್ಯವೇ ಇಲ್ಲ. ರಾಜ್ಯ ಸರಕಾರದಲ್ಲಿನ ಈಗಿನ ಬೆಳ ವಣಿಗೆಗಳನ್ನು ಗಮನಿಸಿದರೆ ವಿಧಾನಸಭೆ ಚುನಾವಣೆ ಬಳಿಕವಷ್ಟೇ ತಾ.ಪಂ. ಮತ್ತು ಜಿ.ಪಂ. ಚುನಾವಣೆಗಳು ನಡೆಯಲಿವೆ.

Advertisement

ಒಂದು ಕಡೆ ಕ್ಷೇತ್ರಗಳ ಗಡಿ ನಿಗದಿಗೆ ಸೀಮಾ ನಿರ್ಣಯ ಆಯೋಗ ಇನ್ನೂ ಮೂರು ತಿಂಗಳು ಕಾಲಾವಕಾಶ ಕೇಳಿದೆ. ಇನ್ನೊಂದಡೆ ಕ್ಷೇತ್ರಗಳು ನಿಗದಿಯಾದ ಅನಂತರ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಲು ರಾಜ್ಯ ಸರಕಾರ ಮೂರು ತಿಂಗಳು ಮಿತಿ ಹಾಕಿಕೊಂಡಿದೆ.

ಈ ರೀತಿ ಇನ್ನೂ ಆರು ತಿಂಗಳು ಅಂದರೆ 2023ರ ಮಾರ್ಚ್‌ ತನಕ ಕ್ಷೇತ್ರಗಳ ನಿಗದಿ, ಮೀಸಲಾತಿ ಪ್ರಕ್ರಿಯೆ ನಡೆಯುತ್ತದೆ.

ಕ್ಷೇತ್ರಗಳ ಗಡಿ ನಿಗದಿಯಾಗಿ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮತದಾರರ ಪಟ್ಟಿ ಸಿದ್ಧಪಡಿಸಿಕೊಳ್ಳಲು ರಾಜ್ಯ ಚುನಾವಣ ಆಯೋಗಕ್ಕೆ ಕನಿಷ್ಠ ಒಂದು ತಿಂಗಳು ಬೇಕು. ಮೀಸಲಾತಿ ಅಂತಿಮ ಅಧಿಸೂಚನೆ ಹೊರಡಿಸಿದ ಬಳಿಕ ಚುನಾವಣ ವೇಳಾ ಪಟ್ಟಿ ಹೊರಡಿಸಲು ಒಂದೂವರೆ ತಿಂಗಳು ಬೇಕಾಗುತ್ತದೆ. ಕನಿಷ್ಠ ಎರಡು ಹಂತಗಳಲ್ಲಿ ಚುನಾವಣೆ ನಡೆಸಿದರೂ ಅದಕ್ಕೂ ಕನಿಷ್ಠ 1 ತಿಂಗಳು ಬೇಕಾಗುತ್ತದೆ. ಈ ಮಧ್ಯೆ ವಿಧಾನಸಭೆ ಚುನಾವಣೆ ಪ್ರಕ್ರಿಯೆ ಆರಂಭವಾದರೆ ತಾ.ಪಂ., ಜಿ.ಪಂ. ಚುನಾವಣ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗುತ್ತದೆ.

ತಾ.ಪಂ. ಹಾಗೂ ಜಿ.ಪಂ. ಕ್ಷೇತ್ರ ಗಳಿಗೆ ಸದಸ್ಯರ ಸಂಖ್ಯೆ ಹಾಗೂ ಜನಸಂಖ್ಯೆ ನಿಗದಿಪಡಿಸುವ ಕರ್ನಾ ಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ಕ್ಷೇತ್ರಗಳ ಮರು ವಿಂಗಡಣೆಗೆ ಸಾಕಷ್ಟು ಕಾಲಾವಕಾಶ ಬೇಕಾಗು ತ್ತದೆ. ಆದ್ದರಿಂದ ಆಯೋಗದ ಅವಧಿಯನ್ನು ಮೂರು ತಿಂಗಳು ವಿಸ್ತರಿಸುವಂತೆ ಸೀಮಾ ನಿರ್ಣಯ ಆಯೋಗ ಸೆ. 19ರಂದು ರಾಜ್ಯ ಸರಕಾರಕ್ಕೆ ಮನವಿ ಮಾಡಿದೆ. ಈ ಮಧ್ಯೆ ತಾ.ಪಂ., ಜಿ.ಪಂ. ಕ್ಷೇತ್ರಗಳ ಗಡಿ ನಿರ್ಣಯ ಮತ್ತು ಮೀಸಲಾತಿ ನಿಗದಿ ಪ್ರಕ್ರಿಯೆಯನ್ನು 12 ವಾರಗಳಲ್ಲಿ ಪೂರ್ಣಗೊಳಿಸುವಂತೆ 2022ರ ಮೇ 24ರಂದು ನೀಡಿದ್ದ ಗಡುವನ್ನು ಇನ್ನೂ 6 ತಿಂಗಳು ವಿಸ್ತರಿಸುವಂತೆ ಸರಕಾರ ಹೈಕೋರ್ಟ್‌ಗೆ ಮನವಿ ಮಾಡಿದೆ.

Advertisement

ಸೀಮಾ ನಿರ್ಣಯ ಆಯೋಗ ರಚನೆಯಾದ ಅನಂತರ ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದಿದೆ. ಆಯೋಗದ ರಚನೆಗಿಂತ ಮುನ್ನ 30 ಜಿಲ್ಲೆಗಳು 233 ತಾಲೂಕುಗಳು ಇದ್ದವು. ಅನಂತರ 31 ಜಿಲ್ಲೆ, 238 ತಾಲೂಕು ಆಗಿದೆ. ಈ ಮಧ್ಯೆ ಅನೇಕ ಗ್ರಾ.ಪಂ.ಗಳು ನಗರ ಸ್ಥಳೀಯ ಸಂಸ್ಥೆಗಳಾಗಿ ಮೇಲ್ದರ್ಜೆಗೇರಿವೆ. ಹೀಗಾಗಿ
ಇನ್ನಷ್ಟು ಸಮಯ ಬೇಕೆಂದು ಆಯೋಗ ಹೇಳಿದೆ.

ಸೀಮಾ ನಿರ್ಣಯ ಆಯೋಗ ಹೇಳಿದ್ದು
– ಜಿಲ್ಲಾಧಿಕಾರಿಗಳಿಂದ ಹೊಸದಾಗಿ ಪ್ರಸ್ತಾವನೆ ತರಿಸಿಕೊಳ್ಳಲು 30 ದಿನ ಕಾಲಾವಕಾಶ ಬೇಕು.
– ಪ್ರಸ್ತಾವನೆಗಳ ಪರಿಶೀಲನೆಗೆ 15 ದಿನ.
– ಕ್ಷೇತ್ರ ಮರುವಿಂಗಡಣೆ ಪ್ರಸ್ತಾವನೆ ಗಳಿಗೆ ಆಕ್ಷೇಪಣೆಗಳ ಆಹ್ವಾನ ಮತ್ತು ಅವುಗಳ ಪರಿಶೀಲನೆಗೆ 15 ದಿನ.
– ಕರಡು ಅಧಿಸೂಚನೆ ಮೇಲಿನ ಸಲಹೆ ಗಳನ್ನು ಅಂತಿಮಗೊಳಿಸಲು 15 ದಿನ.
– ಆಕ್ಷೇಪಣೆಗಳ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಅದಾಲತ್‌ಗಳನ್ನು ನಡೆಸಲು 15 ದಿನ.
– ಅಂತಿಮ ವರದಿ ಸಲ್ಲಿಸಲು ಒಂದು ವಾರ ಬೇಕು.

ಸರಕಾರ ಹೇಳಿದ್ದು
ತಾ.ಪಂ., ಜಿ.ಪಂ. ಕ್ಷೇತ್ರಗಳ ನಿಗದಿ ಹಾಗೂ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಲು 6 ತಿಂಗಳು ಕಾಲಾವಕಾಶ ಬೇಕು. ಈ ಕಾಲಾವಕಾಶ ಲಭಿಸದಿದ್ದರೆ ತಾಲೂಕು, ಜಿಲ್ಲೆಗಳ ಸಂಖ್ಯೆ ಹೆಚ್ಚಾದ್ದರಿಂದ ಕಾನೂನು ಬದಲಾವಣೆ ಮತ್ತು ಇನ್ನಿತರ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತಾ.ಪಂ., ಜಿ.ಪಂ. ಕ್ಷೇತ್ರಗಳನ್ನು ಮರು ವಿಂಗಡಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಇಡೀ ಚುನಾವಣ ಪ್ರಕ್ರಿಯೆ ಅನೂರ್ಜಿತಗೊಳ್ಳುತ್ತದೆ.

ಚುನಾವಣ ಆಯೋಗ ಹೇಳಿದ್ದು
ಕ್ಷೇತ್ರಗಳ ನಿಗದಿಯ ಅನಂತರ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ತಾ.ಪಂ., ಜಿ.ಪಂ. ಚುನಾವಣೆಗೆ ಮತ ದಾರರ ಪಟ್ಟಿ ಪ್ರಕಟಿಸಲು ಕನಿಷ್ಠ ಒಂದು ತಿಂಗಳು ಬೇಕು. ಅನಂತರ ಚುನಾವಣ ಅಧಿಸೂಚನೆ, ಚುನಾ ವಣ ವೇಳಾ ಪಟ್ಟಿ ಪ್ರಕಟನೆಗೆ ಸಮಯ ಬೇಕಾಗುತ್ತದೆ. ಉಳಿದಂತೆ ಎಲ್ಲ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ.

- ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next