Advertisement
ಬಳಿಕ ಮಳೆ ಅಲ್ಪ ವಿರಳವಾದ ರಸ್ತೆಗೆ ಒಂದಿಷ್ಟು ಪ್ಯಾಚ್ ವರ್ಕ್ ಮೂಲಕ ತೇಪೆ ಹಚ್ಚಲಾಯಿತು.ದೊಡ್ಡ ಹೊಂಡಗಳಿಗೆ ಅಲ್ಪ ಡಾಮರು ಸುರಿದು ಇದರ ಮೇಲೆ ಜಲ್ಲಿ ಹಾಕಿ ರೋಲರ್ ಚಲಿಸಿ ಹೊಂಡ ಮುಚ್ಚಲಾಯಿತು. ಇದು ಮತ್ತೆ ಮಳೆ ಸುರಿದಾಗ ಎದ್ದು ಹಿಂದಿನಂತೆ ಹೊಂಡವಾಗಿ ಪರಿಣಮಿಸಿದೆ. ಲಕ್ಷಗಟ್ಟಲೆ ವ್ಯಯಿಸಿದ ರಸ್ತೆ ದುರಸ್ತಿ ಕಾಮಗಾರಿ ವ್ಯರ್ಥವಾಗಿದೆ. ಹೊಂಡಗಳ ಪ್ಯಾಚ್ ವರ್ಕಿಗೆ ಲೋಕೋಪಯೋಗಿ ಇಲಾಖೆ ವತಿಯಿಂದ ಯಿಂದ ಸುಮಾರು 14 ಲಕ್ಷ ವೆಚ್ಚವಾಗಿದೆಯಂತೆ. ಆದರೆ ಇಷ್ಟೊಂದು ಮೊತ್ತದ ಕಾಮಗಾರಿ ನಡೆದಿಲ್ಲವೆಂಬ ಆರೋಪ ಸಾರ್ವಜನಿಕರದು.ಇದೀಗ ಕಾಸರಗೋಡಿನಿಂದ ಕುಂಬಳೆ ತನಕ ಬಳಿಕ ಕುಂಬಳೆ ಆರಿಕ್ಕಾಡಿ ಮೊಗ್ರಾಲ್,ಉಪ್ಪಳದಿಂದ ಮಂಜೇಶ್ವರ ತಲಪ್ಪಾಡಿ ತನಕ ರಸ್ತೆಯಲ್ಲಿ ಭಾರೀ ಹೊಂಡಗಳು ಸೃಷ್ಟಿಯಾಗಿದೆ.ಕೊಪ್ಪರ ಬಜಾರ್ ಎಂಬಲ್ಲಿ ದೊಡ್ಡ ಹೊಂಡದಿಂದ ರಸ್ತೆ ಅಪಘಾತವಾಗದಂತೆ ವಾಹನಗಳಿಗೆ ಎಚ್ಚರಿಕೆಗಾಗಿ ಸ್ಥಳೀಯರು ಬಾಳೆ ಇನ್ನಿತರ ಸಸಿಗಳನ್ನು ನೆಟ್ಟಿರುವರು.
Related Articles
ಕರ್ನಾಟಕ ಗಡಿಭಾಗವಾದ ತಲಪ್ಪಾಡಿ ತನಕ ಚತುಷ್ಪಥ ರಸ್ತೆ 60 ಮೀಟರ್ ಅಗಲದಲ್ಲಿ ಪೂರ್ಣಗೊಂಡಿದೆ.ಆದರೆ ಬಳಿಕ ಕೇರಳದಲ್ಲಿ 40 ಮೀಟರ್ ಅಗಲದ ಚತುಷ್ಪಥ ರಸ್ತೆಗೆ ಇನ್ನೂ ಕಾಲಕೂಡಿ ಬಂದಿಲ್ಲ. ರಾಜ್ಯವನ್ನಾಳುವ ಎಡಬಲ ಉಭಯ ರಂಗಗಳ ಆಡಳಿತೆಯ ಸರಕಾರದ ನಿಧಾನವೇ ಪ್ರಧಾನ ನಿಲುವು ಯೋಜನೆಗೆ ತಡೆಯಾಗಿದೆ.ರಾಜ್ಯ ಸರಕಾರ ಸ್ಥಳ ಸ್ವಾಧೀನ ಪಡಿಸಿ ಕೊಡದ ಕಾರಣ ಪ್ರಥಮ ಹಂತದ ಟೆಂಡರ್ ರದ್ದಾಗಿದೆ.ಸಂತ್ರಸ್ತರಿಗೆ ಸ್ಥಳಕ್ಕೆ ನಿಗದಿ ಪಡಿಸಿದ ದುಪ್ಪಟ್ಟು ,ತ್ರಿಪ್ಪಟ್ಟು ಪರಿಹಾರ ಧನ ಮಂಜೂರುಗೊಳಿಸಿದರೂ ಆಮೆ ನಡಿಗೆಯಲ್ಲಿ ಸ್ಥಳ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ.ಆದುದರಿಂದ ಹೆದ್ದಾರಿ ಚತುಷ್ಪಥ ಕಾಮಗಾರಿ ಇನ್ನಷ್ಟು ವಿಳಂಬವಾಗಲಿದೆ.
Advertisement
ಎಂದೋ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದಲ್ಲಿ ರಸ್ತೆ ಹೊಂಡದ ಸಮಸ್ಯೆಗೆ ಪರಿಹಾರವಾಗುತ್ತಿತ್ತು.ಆದರೆ ರಾಜ್ಯ ಸರಕಾರ ಈ ಯೋಜನೆ ನಿರ್ವಹಣೆಗೆ ಕೇಂದ್ರ ಸರಕಾರದತ್ತ ಆರೋಪ ಹೊರಿಸುತ್ತಿದೆ.ಆದುದರಿಂದ ಯೋಜನೆ ಇನ್ನಷ್ಟು ವಿಳಂಬವಾಗಲಿದೆ.
ಕ್ರಮ ಕೈಗೊಳ್ಳಲಾಗುವುದುಹೆದ್ದಾರಿ ಹೊಂಡಗಳನ್ನು ತಕ್ಷಣ ಮುಚ್ಚಲು ರಾಜ್ಯ ಸರಕಾರದ ಲೊಕೋಪಯೋಗಿ ಇಲಾಖೆಯ ಸಚಿವರಿಗೆ ಮತ್ತು ಅಧಿಕಾರಿಗಳಿಗೆ ಮನವಿ ನೀಡಲಾಗಿದೆ. ಇಲ್ಲದಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
– ಎ.ಎಂ. ಸಿದ್ಧಿಖ್ ರಹ್ಮಾನ್, ಅಧ್ಯಕ್ಷರು ಮೊಗ್ರಾಲ್ ದೇಶೀಯವೇದಿ ಸಂಘಟನೆ ತಕ್ಷಣ ದುರಸ್ತಿ
ಹೆದ್ದಾರಿ ಕಾಮಗಾರಿ ದುರವಸ್ಥೆ ಕುರಿತು ಕೇರಳದ ರಾಜ್ಯಪಾಲರಿಗೆ ತಾನು ದೂರು ನೀಡಿದುದಕ್ಕೆ ರಾಜ್ಯಪಾಲರು ಹೆದ್ದಾರಿ ದುರಸ್ತಿ ಕಾಮಗಾರಿ ತಕ್ಷಣ ನಡೆಸಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗೆ ಆದೇಶ ನೀಡಿರುವ ಲಿಖೀತ ಉತ್ತರವನ್ನು ತನಗೆ ಕಳುಹಿಸಿರುವರು.
– ಶ್ರೀನಂದ ಕುಮಾರ್, ಸಾಮಾಜಿಕ ಕಾರ್ಯಕರ್ತ ಹೊಸಂಗಡಿ - ಅಚ್ಯುತ ಚೇವಾರ್