Advertisement

ಮೂಗರಿಗೆ ಧ್ವನಿಯಾಗಲಿದೆ ಈ ಗ್ಲೌಸ್‌ಗಳು!

11:00 PM Nov 29, 2021 | Team Udayavani |

ನವದೆಹಲಿ: ಜೋಧಪುರದ ಐಐಟಿ (ಭಾರತೀಯ ತಾಂತ್ರಿಕ ಸಂಸ್ಥೆ) ಸಂಶೋಧಕರು ವಿಶಿಷ್ಟ ಸಾಧನವೊಂದನ್ನು ಸಿದ್ಧಪಡಿಸಿದ್ದಾರೆ. ಇದು ಮೂಗರಿಗೆ ನೆರವಾಗುತ್ತದೆ. ಅರ್ಥಾತ್‌ ಇದನ್ನು ಬಳಸುವ ಮೂಗರ ಕೈಸನ್ನೆಗಳು ಧ್ವನಿಯಾಗಿ ಬದಲಾಗುತ್ತವೆ!

Advertisement

ಈ ಸಾಧನವನ್ನು ಎರಡೂ ಕೈಗಳಿಗೆ ಗ್ಲೌಸ್‌ನಂತೆ ಧರಿಸಬೇಕು. ಬೆಲೆ 5000 ರೂ.ಗಳಿಗಿಂತ ಕಡಿಮೆ. ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌), ಯಾಂತ್ರಿಕ ಕಲಿಕೆ (ಮಷಿನ್‌ ಲರ್ನಿಂಗ್‌) ಸಾಧನಗಳನ್ನು ಈ ಗ್ಲೌಸ್‌ನಲ್ಲಿ ಅಳವಡಿಸಲಾಗಿರುತ್ತದೆ. ಅವು ಯಾವುದೇ ಸನ್ನೆಗಳನ್ನು ಧ್ವನಿಯಾಗಿ ಬದಲಾಯಿಸುತ್ತವೆ. ಇಲ್ಲಿ ಯಾವ ಭಾಷೆಯನ್ನು ಬೇಕಾದರೂ ಬಳಸುವ ವ್ಯವಸ್ಥೆಯಿದೆ.

ಕಾರ್ಯ ನಿರ್ವಹಣೆ ಹೇಗೆ?:
ಈ ಕೈಗ ವಸನ್ನು ಎರಡೂ ಕೈಗಳಿಗೆ ತೊಟ್ಟುಕೊಳ್ಳಬೇಕು. ಬಳಕೆದಾರ ಮೊದಲ ಆದ್ಯತೆಯಾಗಿ ಬಳಸುವ ಕೈಗಳ ಎಲ್ಲ ಬೆರಳುಗಳು, ಮಣಿಕಟ್ಟುಗಳ ಚಲನೆಯನ್ನು ಅಲ್ಲಿನ ಸಂವೇದಿಗಳು (ಸೆನ್ಸರ್‌ಗಳು) ವಿದ್ಯುತ್ಕಾಂತೀಯ ಸಂಕೇತಗಳನ್ನಾಗಿ ಬದಲಾಯಿಸುತ್ತವೆ. ಮತ್ತೊಂದು ಕೈಯಲ್ಲಿರುವ ಗ್ಲೌಸ್‌ಗಳಿಂದಲೂ ಇಂತಹದ್ದೇ ಸಂದೇಶಗಳು ಸೃಷ್ಟಿಯಾಗುತ್ತವೆ.

ಇದನ್ನೂ ಓದಿ:ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ

ಇವೆಲ್ಲ ಸಂಕೇತ ಸಂಸ್ಕರಣಾ ಘಟಕಕ್ಕೆ ತಲುಪುತ್ತವೆ. ಪ್ರತಿ ಸಂಕೇತಗಳಿಗೆ ಪೂರಕವಾಗಿ ಈ ಮುನ್ನವೇ ಒಂದು ಸಂದೇಶವನ್ನು ಸಿದ್ಧಪಡಿಸಲಾಗಿರುತ್ತದೆ. ಕೃತಕ ಬುದ್ಧಿಮತ್ತೆಯ ಮೂಲಕ ಇವು ಧ್ವನಿಸಂದೇಶಗಳಾಗಿ ಬದಲಾಗುತ್ತವೆ. ಈ ಧ್ವನಿ ಸಂದೇಶ ಬೇಕಾದರೆ ಸಂಬಂಧಪಟ್ಟ ಬಳಕೆದಾರನ ಧ್ವನಿಗೆ ತಕ್ಕಂತೆಯೂ ಬದಲಾಯಿಸಿಕೊಳ್ಳುವ ವ್ಯವಸ್ಥೆಯಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next