Advertisement
ಹಾಗಾದರೆ ಮಾತು ಎಂದರೇನು ?:
Related Articles
Advertisement
ಆದರೆ ಒಳ್ಳೆಯ ಮಾತುಗಳ ಫಲವತ್ತತೆಯೇ ಬೇರೆ. ನನ್ನ ಬದುಕಿನದೇ ಒಂದು ಉದಾಹರಣೆ ತೆಗೆದುಕೊಂಡರೆ, ನಾನಾಗ 10ನೇ ತರಗತಿ ಓದುತ್ತಿದ್ದೆ. ಆಗಾಗ ನನ್ನೊಳಗೆ ಆಕ್ರಮಿಸಿಕೊಳ್ಳುತ್ತಿದ್ದ ಶ್ರವಣದೋಷದ ನೋವು, ಖನ್ನತೆ ಬಳಲಿಕೆಗಳು ಅಷ್ಟಿಷ್ಟಲ್ಲ .
ಬದುಕಿನ ಬಗೆಗೆ ಆಶಾಭಾವವನ್ನೇ ಕಳೆದುಕೊಂಡಿದ್ದೆ. ರಮೇಶ್ ಮಕ್ಕಳ್ಳಿ ಎಂಬ ವಿಜ್ಞಾನ ಗುರುಗಳು ನನ್ನೊಳಗಿನ ನಕಾರಾತ್ಮಕತೆಯನ್ನು ಧನಾತ್ಮಕ ಮಾತುಗಳಿಂದ ಹೊರತೆಗೆದರು.
ಬರವಣಿಗೆಯ ಮೂಲಕ ಜಗತ್ತನ್ನೇ ಗೆಲ್ಲುವ ಶಕ್ತಿಯಿದೆ. ಕವನ, ಕಥನ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು, ನೈಪನ್ ಹಾಲ್ಟ… ಎಂಬ ವಿಜ್ಞಾನಿಗೆ ಕೈ, ಕಾಲು, ಕಿವಿ ಬಾಯಿ ಯಾವುದೂ ಇಲ್ಲ. ಆತ ಬೇಕಾದಷ್ಟು ಸಂಶೋಧನ ಗ್ರಂಥ ಬರೆದಿದ್ದಾರೆ. ಬ್ರೇನ್ ಮಾತ್ರ ಕೆಲಸ ಮಾಡುತ್ತದೆ. ಹೆದರದಿರು, ಬದುಕಲು ಬೇಕಾದಷ್ಟು ದಾರಿಗಳಿವೆ ಹುಡುಕಬೇಕು ಅಷ್ಟೇ ಎಂದಿದ್ದರು. ಈ ಮಾತು ನನ್ನ ಬದುಕಿನ ಮೇಲೆ ಎಷ್ಟು ಪರಿಣಾಮ ಬೀರಿತೆಂದರೆ ಅದಕ್ಕೆ ನನ್ನ ಇಂದಿನ ಬರವಣಿಗೆಯೇ ಸಾಕ್ಷಿ. ಹೀಗೆ ಮಾತುಗಳು ಪ್ರಾಮಾಣಿಕವಾಗಿದ್ದಲ್ಲಿ, ಸತ್ಯಕ್ಕೆ ಹತ್ತಿರವಾಗಿದ್ದಲ್ಲಿ ನುಡಿದವರಿಗೆ ಸಾರ್ಥಕ ಭಾವ ತಂದುಕೊಟ್ಟರೆ ಆಲಿಸಿದವರಿಗೆ ಮುಂದಿನ ಬದುಕು ಸುಂದರ ಉಡುಗೂರೆಯಾಗುತ್ತದೆ.
ಆಪ್ತ ಸಲಹೆ, ಸೂಚನೆಯ ಮಾತುಗಳು ಎಲ್ಲರ ಜೀವನದಲ್ಲೂ ಅವಶ್ಯ ಇರುತ್ತದೆ. ಯಾಕೆಂದರೆ ಬದುಕಿನ ದಾರಿ ಯಾವತ್ತೂ ಹೂವಿನಿಂದ ತುಂಬಿರುವುದಿಲ್ಲ. ಆಗೊಮ್ಮೆ-ಈಗೊಮ್ಮೆ ಕಾಲಿಗೆ ಸಿಕ್ಕಿಕೊಂಡ ಮುಳ್ಳುಗಳನ್ನು ಒಬ್ಬರಿಗೊಬ್ಬರು ಅನುವಾಗಿ ಹೊರ ತೆಗೆಯಬೇಕಾಗುತ್ತದೆ. ಜತೆಗೆ ನಾವಿದ್ದೇವೆ ಎಂಬ ಸಣ್ಣ ಭರವಸೆಯ ಮಾತು ಎದುರಿಗಿರುವ ಬೆಟ್ಟದಷ್ಟಿರುವ ಕಷ್ಟವನ್ನು ಮರೆಸುತ್ತದೆ.
ದಿನ ಕೊನೆಯ ಸಂಜೆಯಲ್ಲಿ ನಮ್ಮವರೊಂದಿಗೆ ಒಂದಷ್ಟು ಹರಟುತ್ತ ಚಹಾ ಹೀರೋಣ. ಯಾರು ಸಿಕ್ಕರೂ ಅವರೊಂದಿಗೆ ನಗುನಗುತ್ತಾ ಮಾತನಾಡೋಣ. ಉತ್ತಮ ಬಾಂದವ್ಯಕ್ಕೆ ಮಾತುಗಳೇ ಸೇತುವೆ. ಅದೇ ಮಾತುಗಳು ಸಮಯ ಸಂದಭೋìಚಿತವಾಗಿ ವಿವೇಚನೆ ಚಿಂತನೆಗಳಿಗೆ ಒಳಪಟ್ಟಿರಲಿ. ಆ ಮಾತುಗಳಲ್ಲಿ ಭಾವಗಳು ಉಸಿರಾಡಲಿ, ನಾವಾಡುವ ಮಾತುಗಳು ನಮ್ಮ ವ್ಯಕ್ತಿತ್ವದ ಕನ್ನಡಿಯಾಗಿರುತ್ತವೆ ಮತ್ತು ವ್ಯಕ್ತಿಯ ಸಾಮಾಜಿಕ ಸ್ತರದ ಮೇಲೆ ತನ್ನ ಪ್ರಭಾವಳಿಯನ್ನುಂಟುಮಾಡುತ್ತದೆ ಎನ್ನುವುದನ್ನು ಮರೆಯದಿರೋಣ.
ಬಸವಣ್ಣನವರು ಮಾತಿನ ಮಹತ್ವವನ್ನು ವಚನದಲ್ಲಿ ಮನೋಜ್ಞವಾಗಿ ಕಟ್ಟಿಕೊಟ್ಟಿರುವಂತೆ ಮಾತು ಸ್ವತ್ಛ ಮುತ್ತಿನ ಹಾರದಂತೆಯೂ, ಪ್ರಕಾಶಮಾನವಾದ ಬೆಲೆಯುಳ್ಳ ಮಾಣಿಕ್ಯದಂತೆಯೂ, ಸ್ಪಟಿಕದ ಸಲಾಕೆಯಂತೆಯೂ, ಲಿಂಗವೇ ಮೆಚ್ಚಿ ಅಹುದಹುದು ಎನ್ನುವಂತೆ ಮಾತುಗಳು ಬದುಕ ಚಾವಡಿಗೆ ಬೆಳಕಾಗಲಿ ಮಾತುಗಳು ಎಂದೂ ಕೃತಕವಾಗದೆ ಹೃದಯ ಮೆಲ್ಲುವ ಸವಿ ಬೆಲ್ಲವಾಗಲಿ !
ಮಧು ಕಾರಗಿ
ಬಿಇಎಂಎಸ್ ಕಾಲೇಜು, ಬ್ಯಾಡಗಿ