Advertisement

ನಿಖಿಲ್‌- ಕೈ ಕಾರ್ಯಕರ್ತರ ನಡುವೆ ಮಾತಿನ ಘರ್ಷಣೆ

12:36 PM Mar 27, 2021 | Team Udayavani |

ಕನಕಪುರ: ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಮತ್ತು ಕಾಂಗ್ರೆಸ್‌ಕಾರ್ಯಕರ್ತರ ನಡುವೆ ನಡೆದಿರುವ ಘರ್ಷಣೆ ತಡವಾಗಿ ಬೆಳಕಿಗೆ ಬಂದಿದ್ದು ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

ತಾಲೂಕಿನ ರಾಮನಗರ ವಿಧಾನಸಭಾ ಕ್ಷೇತ್ರದ ಮರಳವಾಡಿ ಹೋಬಳಿ ಚೀಲೂರು ಗ್ರಾಮದಲ್ಲಿ ನಡೆದ ಪೌರಾಣಿಕ ನಾಟಕ ಪ್ರದರ್ಶನದ ವೇಳೆ ಮಾ.23ರ ಸಂಜೆ ಈ ಘಟನೆ ನಡೆದಿದೆ.

ಕಾರ್ಯಕ್ರಮಕ್ಕೆ ಆಗಮಿಸಿದ ನಿಖೀಲ್‌ ಕುಮಾರ ಸ್ವಾಮಿ ಗ್ರಾಮಸ್ಥರ ಒತ್ತಾಯದ ಮೇರೆಗೆ ಕುಮಾರಸ್ವಾಮಿ ಯವರು ಮುಖ್ಯಮಂತ್ರಿಗಳಾಗಿದ್ದ ಜಾರಿಗೊಳಿಸಿದ್ದ ಯೋಜನೆಗಳ ಕುರಿತು ಮಾತ ನಾಡುವಾಗ ಸ್ಥಳೀಯ ಕೆಲವು ಕಾಂಗ್ರೆಸ್‌ ಕಾರ್ಯಕರ್ತರು, ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ನಿಖಿಲ್‌ ಕುಮಾರಸ್ವಾಮಿ ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ವಾಗ್ಧಾಳಿ ನಡೆಸಿದರು.

ಮುಂದಿನ ವಿಧಾನಸಭಾ ಚುನಾವಣೆಗೆ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಬಿಡುವಿಲ್ಲದೇ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆಂದು ತಿಳಿದು ಬಂದಿದೆ. ಈ ಕ್ಷೇತ್ರ ವ್ಯಾಪ್ತಿಗೆ ಮರಳವಾಡಿ ಮತ್ತು ಹಾರೋಹಳ್ಳಿ ಹೋಬಳಿ ಬರಲಿವೆ. ಈ ವೇಳೆ ಎಚ್ಡಿಕೆ ಕುರಿತು ನಿಖಿಲ್‌ ಅವರು ಮಾತನಾಡುತ್ತಿದ್ದಾಗ, ಕಾಂಗ್ರೆಸ್‌ ಕಾರ್ಯಕರ್ತರು ಇದು ರಾಜಕೀಯ ವೇದಿಕೆಯಲ್ಲ ಎಂದು ವಿರೋಧ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನಿಖಿಲ್‌, ಭಾಷಣ ಮಾಡೋಕೆ ನಾನಿಲ್ಲಿ ಬಂದಿಲ್ಲ. ಸಂಬಂಧ ಬೆಳೆಸೋಕೆ ಬಂದಿರೋದು. ಇಲ್ಲಿಗೇ ಬಂದು ನಾನೇನು ಭಾಷಣ ಮಾಡಬೇಕಿಲ್ಲ,ನೀವು ಮಾತನಾಡಿ ನೀವೇನು ಕಿತ್ತು ದಬ್ಟಾಕಿದ್ದೀರಾ? ಬಂದು ಹೇಳಿ. ನಮ್ಮ ತಂದೆ ತಾಯಿ ಈ ಜಿಲ್ಲೆಯ ಜನತೆಜೊತೆ ಸಂಬಂಧ ಇಟ್ಟುಕೊಂಡಿದ್ದಾರೆ, ಇವರು ನಮ್ಮ ಕುಟುಂಬದವರು. ಹೀಗಾಗಿ ನಮ್ಮ ಕುಟುಂಬದವರ ಜತೆ ನಾನು ಮಾತನಾಡುತ್ತೇನೆ ಎಂದು ಏರು ಧ್ವನಿಯಲ್ಲೇ ಕಿಡಿಕಾರಿದರು.

Advertisement

ಯುವಕ ಸಿಟ್ಟು ಮಾಡಿಕೊಂಡ ಎಂದು ತಪ್ಪಾಗಿ ತಿಳಿದುಕೊಳ್ಳಬೇಡಿ. ಬಿಸಿ ರಕ್ತ.. ನಮಗೆ ಆವೇಶಾನೂ ಇದೆ, ತಾಳ್ಮೆಯೂ  ಇದೆ. ಇಂಥ ಸಂದರ್ಭ ಸೃಷ್ಟಿಯಾಗಿದ್ದಕ್ಕೆನಾನು ನಿಮ್ಮ ಬಳಿ ಕ್ಷಮೆ ಕೇಳುತ್ತೇನೆ. ನಾನೀಗ ಹೊರಡುತ್ತೇನೆ ಎಂದು ವೇದಿಕೆಯಿಂದ ನಿರ್ಗಮಿಸಿದರು.  ಈ ಬೆನ್ನಲ್ಲೇ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಜೆಡಿಎಸ್‌ ಕಾರ್ಯಕರ್ತರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ಶುರುವಾಗಿವೆ. ಘಟನೆ ಸತ್ಯಾಸತ್ಯತೆ ಬಗ್ಗೆ ಗ್ರಾಮದ ಜೆಡಿಎಸ್‌ ಕಾರ್ಯಕರ್ತ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾನೆ. ನಿಖಿಲ್‌ ಕುಮಾರಸ್ವಾಮಿ ಅವರ ಬಗ್ಗೆಕಾಂಗ್ರೆಸ್‌ ಕಾರ್ಯಕರ್ತ ನವೀನ್‌ಗೌಡ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿ ಬಿಟ್ಟಿದ್ದಾನೆ.ವಿಡಿಯೋ ತುಣುಕನ್ನು ಎಡಿಟ್‌ ಮಾಡಿ ಜಾಲತಾಣದಲ್ಲಿಹಾಕಿದ್ದಾರೆ. ಕಾಂಗ್ರೆಸ್‌ ಕಾರ್ಯಕರ್ತರು ಉದ್ದೇಶಪೂರ್ವಕವಾಗಿ ಬಂದು ನಿಖಿಲ್‌ ಕುಮಾರಸ್ವಾಮಿ ಮಾತನಾಡಬಾರದು ಎಂದು ತಗಾದೆ ತೆಗೆದಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಮತ್ತೂಂದೆಡೆ ಕಾಗ್ರೆಸ್‌ ಕಾರ್ಯಕರ್ತರ ಆಕ್ರೋಶ: ಇದು ಪಕ್ಷತೀತವಾಗಿ ಗ್ರಾಮದಲ್ಲಿ ನಡೆದಿರುವ ಕಾರ್ಯಕ್ರಮ. ಇಲ್ಲಿ ಕಾರ್ಯಕ್ರಮದ ಬಗ್ಗೆಮಾತನಾಡಬೇಕೇ ಹೊರತು ರಾಜಕೀಯದ ಬಗ್ಗೆ ಅಲ್ಲ.ಇಲ್ಲಿ ರಾಜಕೀಯದ ಬಗ್ಗೆ ಮಾತನಾಡಬೇಡಿ ಎಂದು ನಾವು ಆಕ್ಷೇಪ ವ್ಯಕ್ತಪಡಿಸಿದಾಗ ನಿಖಿಲ್‌ ಕುಮಾರಸ್ವಾಮಿ ಉದ್ವೇಗಕ್ಕೆ ಒಳಗಾಗಿ ಮಾತನಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಮಗನಾಗಿ ಈ ರೀತಿ ಮಾತನಾಡಬಾರದು ಎಂದು ಖಂಡನೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next