ತಾಳಿಕೋಟೆ: ದೇಶದ ಸರ್ವಜನಾಂಗಕ್ಕೂ ಆಹಾರ ಒದಗಿಸುವ ಕೃಷಿಕನ ಬದುಕು ಬಹಳ ಶ್ರೇಷ್ಠ. ಅಂತಹ ರೈತನ ಬದುಕು ಮತ್ತು ಕೃಷಿ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸುವ ಕಾರ್ಯ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದು ಪ್ರಗತಿಪರ ರೈತ ಡಾ| ಬಸವರಾಜ ಅಸ್ಕಿ ಹೇಳಿದರು.
ಕೊಣ್ಣೂರ ಗ್ರಾಮದ ಜಿಪಂ ಸದಸ್ಯೆ ಜ್ಯೋತಿ ಅಸ್ಕಿ ಅವರ ತೋಟದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಆಯೋಜಿಸಿದ್ದ ಕೃಷಿ ನಡಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೃಷಿಕನ ಬದುಕು ಮತ್ತು ಅಲ್ಲಿ ಬೆಳೆಯುವ ಫಲವತ್ತತೆ ಬೆಳೆಗಳ ಬಗ್ಗೆ ಹಾಗೂ ದೇಶ ರಕ್ಷಣೆ ಎಷ್ಟು ಕಷ್ಟವಿದೆ ಅಷ್ಟೇ ಕಷ್ಟದ ಬದುಕು ರೈತನಿದೆ. ಈ ಬಗ್ಗೆ ಮಕ್ಕಳಲ್ಲಿ ಜ್ಞಾನಾರ್ಜನೆ ಮೂಡಿಸುವಂತಹ ಕೆಲಸ ಮಾಡುತ್ತಿರವುದು ಸಂತೋಷದಾಯಕವಾಗಿದೆ ಎಂದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಎಚ್. ಯರಝರಿ ಮಾತನಾಡಿ, ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಿಂದಲೇ ಕೃಷಿ ಎಂಬುದನ್ನು ಪಠ್ಯದಲ್ಲಿ ಸೇರಿಸಲು ಚಿಂತನೆ ನಡೆದಿದೆ. ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆ ಮೇಲು ಹಿಂದೆ ಬದುಕಲು ಕೃಷಿ ಅಳವಡಿಸಿಕೊಳ್ಳಲಾಗುತ್ತಿತ್ತು, ಆದರೆ ಇಂದಿನ ದಿನಮಾನದಲ್ಲಿ ವೈಜ್ಞಾನಿಕ ಕೃಷಿಯತ್ತ ಒತ್ತು ನೀಡಲಾಗುತ್ತಿದೆ. ಬೆಳೆಗಳಲ್ಲಿಯೇ ಹೊಸ ಹೊಸ ತಳಿಯ ಬೆಳೆಗಳು ಹುಟ್ಟುಕೊಂಡವಲ್ಲದೇ ಹೆಚ್ಚು ಹೆಚ್ಚು ಪೋಷಕಾಂಶಗಳು ಬೇಕಾದವು. ಇವು ನಮ್ಮ ಸಾವಯವ ಪೋಷಕಾಂಶಗಳ ಮೂಲಕ ಏನು ಒದಗಿಸುತ್ತಿದ್ದೇವೋ ಅವು ಸಾಕಾಗುತ್ತಿದ್ದಿಲ್ಲ. ಆದ್ದರಿಂದ ರಾಸಾಯನಿಕ ಗೊಬ್ಬರ ತಯಾರಿಸಲಾರಂಭಿಸಿದರು. ಅವುಗಳ ಮೂಲಕ ಇಲ್ಲಿವರೆಗೆ ಬೆಳಗಳಿಗೆ ಪೋಷಕಾಂಶಗಳನ್ನು ಒದಗಿಸಲಾಗುತ್ತಿದೆ. ರಾಸಾಯನಿಕ ಗೊಬ್ಬರಕ್ಕೂ ಮುಂಚೆ ನಮ್ಮ ಮಣ್ಣಿನಲ್ಲಿ ಅಗಾಧ ಶಕ್ತಿ ಅಡಗಿತ್ತು. ಜೋಳ ಮತ್ತು ಕಡಲೆ, ಇನ್ನಿತರ ಬೆಳೆಗಳನ್ನು ಬೆಳೆದು ಮನೆಗೆ ತಂದು ಸ್ವಚ್ಛ ಮಾಡುವ ಸಮಯದಲ್ಲಿ ಗರ್ಬಿಣಿಯರು ಮಣ್ಣಿನ ಕಾಳುಗಳನ್ನು ತಿನ್ನುವ ಮುಖಾಂತರ ಹೊಟ್ಟೆಯಲ್ಲಿದ್ದ ಕೂಸಿಗೂ ಪೋಷಕಾಂಶ ಕೊಡುವಂತಹ ಕೆಲಸ ಮಾಡುತ್ತಿದ್ದರು. ಅಂತಹ ಶಕ್ತಿ ನಮ್ಮ ಮಣ್ಣಿನಲ್ಲಿ ಅಡಗಿದೆ ಎಂದರು.
ನಿವೃತ್ತ ನ್ಯಾಯಾಧೀಶ ಜೆ.ಡಿ. ಇನಾಮದಾರ ಮಾತನಾಡಿ, ರೈತನ ಮಗನಾಗಿ ಹುಟ್ಟಿದ ನಾನು ಕೃಷಿ ಕಡೆಗೆ ಎಂದಿಗೂ ಭಾಗವಹಿಸಿದ್ದಿಲ್ಲ. ಕೃಷಿಯಿಂದ ಆಗುವ ಲಾಭಗಳ ಕುರಿತು ಸ್ಕೌಟ್ಸ್ ಮತ್ತು ಗೈಡ್ಸ್‌ನವರು ಆಯೋಜಿಸಿದ ಕಾರ್ಯಕ್ರಮದಿಂದ ತಿಳಿದುಕೊಂಡಿದ್ದೇನೆ. ಸ್ವಲ್ಪ ನೀರಿನಲ್ಲಿಯೇ ದೊಡ್ಡ ಮಟ್ಟದ ಕೃಷಿಯನ್ನು ಮಾಡಿಕೊಂಡಿರುವ ಡಾ| ಬಸವರಾಜ ಅಸ್ಕಿ ಅವರ ಕಾರ್ಯವನ್ನು ನೋಡಿದರೆ ವಿಚಿತ್ರವಾಗಿದ್ದರೂ ಸತ್ಯವಾಗಿ ಕಾಣಿಸುತ್ತಿದೆ. ಇಂತಹ ಸಾವಯವ ಕೃಷಿಯ ಕಡೆಗೆ ಹೆಚ್ಚಿಗೆ ಒಲವನ್ನು ತೋರಲು ಮತ್ತು ಮಕ್ಕಳಿಗೆ ಕೃಷಿ ಬಗ್ಗೆ ಮಾಹಿತಿ ಒದಗಿಸಲು ಸ್ಕೌಟ್ಸ್ ಮತ್ತು ಗೈಡ್ಸ್‌ನವರು ಕೃಷಿಯ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶ್ಲಾಘನೀಯ ಎಂದರು.
ಪ್ರಗತಿಪರ ರೈತ ಶಂಕರಗೌಡ ಅಸ್ಕಿ ಸಾವಯಕ ಕೃಷಿ ಮತ್ತು ವೈಜ್ಞಾನಿಕ ಕೃಷಿ ನಡುವೆ ಇರುವ ವ್ಯತ್ಯಾಸಗಳ ಕುರಿತು ವಿವರಿಸಿದರು. ಕ್ಷೇತ್ರ ಶಿಕ್ಷಣಾಧಿ ಕಾರಿ ರೇಣುಕಾ ಕಲುºರ್ಗಿ ಅಧ್ಯಕ್ಷತೆ ವಹಿಸಿದ್ದರು. ಸ್ಕೌಟ್ಸ್ ಮತ್ತು ಗೈಡ್ಸ್ ಉಪಾಧ್ಯಕ್ಷ ಡಿ.ಬಿ. ವಡವಡಗಿ ಪ್ರಾಸ್ತಾವಿಕ ಮಾತನಾಡಿದರು. ಈ ವೇಳೆ ಪ್ರಗತಿಪರ ರೈತ ಡಾ| ಬಸವರಾಜ ಅಸ್ಕಿ ಅವರಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಅಭಿನಂದಾನ ಪತ್ರ ನೀಡಿ ಸನ್ಮಾನಿಸಲಾಯಿತು. ದೈಹಿಕ ಶಿಕ್ಷಣ ಪರಿವೀಕ್ಷಕ ಎಚ್.ಎಲ್. ಕರಡ್ಡಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಂಗಮೇಶ ಹೊಲ್ದೂರ, ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯದರ್ಶಿ ಜಿ.ಎಚ್. ಚವ್ಹಾಣ, ಎಸ್.ಆರ್. ಸುಲ್ಪಿ, ಜ್ಯೋತಿ ನಾರಿ, ವಿದ್ಯಾವತಿ ಬದಿ, ಎಸ್.ಬಿ. ನದಾಫ್, ಡಿ.ಬಿ. ಬಿರಾದಾರ ಎಂ.ಎಸ್. ಅಸ್ಕಿ, ಜಿ.ಜಿ.ಅಸ್ಕಿ, ವಿದ್ಯಾಧರ, ದ್ಯಾಮಣ್ಣ ಸೋಮನಾಳ, ಗ್ರಾಪಂ ಸದಸ್ಯ ಬಸು ಕೂಡಗಿ, ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ನಾಯ್ಕೋಡಿ, ಶಂಕರಗೌಡ ಅಸ್ಕಿ, ಸುಭಾಷ್ ಸಾತ್ಯಾಳ, ಚಂದ್ರಶೇಖರ ಐನಾಪುರ, ಕೆ.ಎಸ್. ಅಸ್ಕಿ, ಚಿದಾನಂದ ಕೋಟಿ, ಚಿದಾನಂದ ಜಾಲಾಪುರ, ವಿನಯ ಹುಲ್ಲೂರ, ಸಂತೋಷ
ಹುಲ್ಲೂರ, ಶಂಕರ ಹೂಗಾರ, ಸಿದ್ದು ಕುಂಬಾರ, ಗುಂಡಪ್ಪ ಗಣಿ ಇದ್ದರು. ಜಿ.ಎಚ್. ಚವ್ಹಾಣ ಸ್ವಾಗತಿಸಿದರು. ವಿದ್ಯಾವತಿ ಬದಿ ನಿರೂಪಿಸಿದರು. ಎಸ್.ಆರ್. ಸುಲ್ಪಿ ವಂದಿಸಿದರು.