Advertisement

ಮದರಸಗಳಲ್ಲಿ ತಾಲಿಬಾನಿಗಳು ಸೃಷ್ಠಿಯಾಗುತ್ತಾರೆ, ಅಫ್ಘಾನ್ ಸ್ಥಿತಿ ನಮಗೂ ಬರಬಹುದು: ಸಿ.ಟಿ.ರವಿ

01:43 PM Aug 31, 2021 | Team Udayavani |

ಕಲಬುರಗಿ: ಓಲೈಕೆ ರಾಜಕಾರಣದಿಂದ ಇನ್ನಷ್ಟು ಪಾಕಿಸ್ತಾನಗಳು ಸೃಷ್ಟಿಯಾಗುತ್ತವೆ. ಮದರಸಗಳಲ್ಲಿ ತಾಲಿಬಾನಿಗಳು ಸೃಷ್ಠಿಯಾಗುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳು ಬಹುಸಂಖ್ಯಾತರು ಇರುವವರಗೆ ಮಾತ್ರ ಅಂಬೇಡ್ಕರ್ ಸಂವಿಧಾನ ಉಳಿಯುತ್ತದೆ. ಹಿಂದೂಗಳು ಅಲ್ಪಸಂಖ್ಯಾತರಾದರೆ ಗಾಂಧಾರ ಕಾಲದ ಸ್ಥಿತಿ ಬರುತ್ತದೆ. ಅಂಬೇಡ್ಕರ್ ಸಂವಿಧಾನ ಉಳಿಸಬೇಕೆನ್ನುವರು ಈ‌ ಸತ್ಯವನ್ನು ಮರೆಯಬಾರದು ಎಂದರು.

ನಮ್ಮ ಮೂಲ ನಂಬಿಕೆಯಲ್ಲಿಯೇ ಸಮಭಾವವಿದೆ. ಸಮಭಾವ ಜನ ಬಹುಸಂಖ್ಯಾತರು ಇದ್ದಾಗ ಸಮಾನತೆ, ಮಹಿಳೆ ಸ್ವತಂತ್ರ ಇರುತ್ತದೆ. ಇಲ್ಲದಿದ್ದರೆ ಅಫ್ಘಾನಿಸ್ತಾನದ ಸ್ಥಿತಿ ನಮಗೂ ಬರುತ್ತದೆ ಎಂದರು.

ದೇಶ ಮೊದಲು ಎನ್ನುವ ತತ್ವದ ಮೇಲೆ ರಾಜಕಾರಣ ಮಾಡಿ. ಆದರೆ ಕಾಂಗ್ರೆಸ್ ದೇಶ ಮೊದಲು ಎಂಬ ತತ್ವ ಮರೆತಿದೆ. ದೇಶ ಭಕ್ತ‌ ಸಂಘಟನೆ ಜೊತೆ ತಾಲಿಬಾನಿಗಳನ್ನು ಹೋಲಿಕೆ ಮಾಡುತ್ತಿದ್ದಾರ ಎಂದು ಸಿಟಿ ರವಿ ಕಿಡಿಕಾರಿದರು.

ಇದನ್ನೂ ಓದಿ:ಜಸ್ಟೀಸ್ ನಾಗರತ್ನ ಬಿ.ವಿ.ಸೇರಿ 9 ಮಂದಿ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾಗಿ ಪ್ರಮಾಣ

Advertisement

ಸಿದ್ದರಾಮಯ್ಯ ವಿಶ್ರಾಂತಿಗೆ ಹೋದಾಗ ಕಾಂಗ್ರೆಸ್ ಗೆಲ್ಲಬಾರದು ಸಂದೇಶ ನೀಡುತ್ತಾರೆ. ಕೆಲವೊಮ್ಮೆ ನೇರವಾಗಿ, ಕೆಲವು ಸಲ ಹಿಂಬಾಲಕರ ಮೂಲಕ‌ ಸಂದೇಶ ನೀಡುತ್ತಾರೆ. ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಯಾವ ಚುನಾವಣೆ ಗೆಲ್ಲಬಾರದು ಎಂಬ ಸಂದೇಶವಿದು. ಸಿದ್ದರಾಮಯ್ಯರ ಅಪೇಕ್ಷೆಯನ್ನು ಈ ಬಾರಿ ಜನ ಇಡೇರಿಸಲಿದ್ದಾರೆ ಎಂದರು.

ಇಪ್ಪತ್ತು ವರ್ಷದಿಂದ ಕಾಂಗ್ರೆಸ್ ಹೊಸ ನಾಯಕರ ಹುಡುಕಾಟದಲ್ಲಿದೆ. ರಾಜ್ಯದ ಅಧ್ಯಕ್ಷರಿಗೆ ತನ್ನ ತಂಡವನ್ನೇ ಕಟ್ಟಿಕೊಳ್ಳಲಾಗಿಲ್ಲ. ಆದರೂ ಕಾಂಗ್ರೆಸ್ ನವರು ಹಗಲುಗನಸು ಕಾಣುತ್ತಿದ್ದಾರೆ. ಇಲ್ಲದೇ ಇರುವ ಸಿಎಂ ಹುದ್ದೆಗೆ ನಾಲ್ಕೈದು ಜನ ಹಗಲು ಕನಸು ಕಾಣುತ್ತಿದ್ದಾರೆ ಎಂದು ಸಿ.ಟಿ.ರವಿ ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next