ಕಾಬೂಲ್: ಯುದ್ಧಪೀಡಿತ ಅಫ್ಘಾನಿಸ್ಥಾನದಲ್ಲಿ ಆಡಳಿತ ನಡೆಸುತ್ತಿರುವ ತಾಲಿಬಾನ್ ಅಧಿಕಾರಿಗಳಿಗೆ ಎಲಾನ್ ಮಸ್ಕ್ ಒಡೆತನದ ಟ್ವಿಟರ್‌ನಲ್ಲಿ ಬ್ಲೂಟಿಕ್ ಇರುವ ಅಧಿಕೃತ ಖಾತೆಯನ್ನು ಒದಗಿಸಲಾಗಿದೆ.
ತಾಲಿಬಾನ್ ಸರ್ಕಾರದ ಪ್ರಮುಖ ಆಡಳಿತಗಾರರು ಹಾಗೂ ನಾಲ್ವರು ಬೆಂಬಲಿಗರ ಟ್ವಿಟರ್ ಖಾತೆಗೆ ಬ್ಲೂಟಿಕ್ (ದೃಢೀಕೃತ ಖಾತೆ) ಮಾನ್ಯತೆ ನೀಡಲಾಗಿದ್ದು, ಇದರಲ್ಲಿ ಸರ್ಕಾರದ ಮಾಹಿತಿ ಪ್ರಸಾರ ಇಲಾಖೆಯ ಮುಖ್ಯಸ್ಥರಾದ ಹೆದಯತುಲ್ಲಾ ಹೆದೆಯತ್ ಅವರ ಖಾತೆಯೂ ಸೇರಿದೆ.
ಇವರಿಗೆ 1.87 ಲಕ್ಷ ಫಾಲೋವರ್ಸ್‌ಗಳಿದ್ದಾರೆ. ಸರ್ಕಾರದ ನಿತ್ಯ ಚಟುವಟಿಕೆಗಳ ಬಗ್ಗೆ ಹೆದೆಯತ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಇವರ ಜತೆಗೆ ಮಾಧ್ಯಮ ನಿಗಾ ಇಲಾಖೆ ಮುಖ್ಯಸ್ಥರಾದ ಅಬ್ದುಲ್ ಹಕ್ ಮೊಹಮ್ಮದ್ ಅವರ ಖಾತೆಗೂ ಬ್ಲೂ ಟಿಕ್ ನೀಡಲಾಗಿದ್ದು, ಸರ್ಕಾರದ ಇಂಥ ಸಾಕಷ್ಟು ಅಧಿಕಾರಿಗಳಿಗೆ ಬ್ಲೂಟಿಕ್ ನೀಡಲಾಗಿದೆ.