Advertisement

ತಾಲಿಬಾನ್‌ಗೆ ಅಮೆರಿಕದ ನೆರವು ಬೇಡವಂತೆ!

07:44 PM Oct 09, 2021 | Team Udayavani |

ಇಸ್ಲಾಮಾಬಾದ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಆಡಳಿತ ಆರಂಭವಾದ ಮೇಲೆ ಉಗ್ರಕೃತ್ಯ ಹೆಚ್ಚಾಗಿದೆ. ಈ ಉಗ್ರರನ್ನು ನಿಗ್ರಹಿಸಲು ಅಮೆರಿಕದ ಸಹಾಯ ಪಡೆಯಲು ತಾಲಿಬಾನ್‌ ಆಡಳಿತ ನಿರಾಕರಿಸಿದೆ! ಅಫ್ಘಾನ್‌ ತಾಲಿಬಾನ್‌ ವಶವಾದ ಬಳಿಕ ಇದೇ ಮೊದಲ ಬಾರಿಗೆ ಕತಾರ್‌ ರಾಜಧಾನಿ ದೋಹಾದಲ್ಲಿ ತಾಲಿಬಾನ್‌-ಅಮೆರಿಕ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯುತ್ತಿದೆ.

Advertisement

ಈ ಹಿನ್ನೆಲೆಯಲ್ಲಿ ತಾಲಿಬಾನ್‌ ಆಡಳಿತ ಅಮೆರಿಕದ ನೆರವು ಯಾಚಿಸಬಹುದೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಇಸ್ಲಾಮಿಕ್‌ ಸ್ಟೇಟ್‌ ಉಗ್ರವಾದಿ ಗುಂಪು ಹಲವು ದಾಳಿಗಳನ್ನು ಇತ್ತೀಚೆಗೆ ನಡೆಸಿದೆ. ಅದರಲ್ಲಿ ಪ್ರಮುಖವಾಗಿದ್ದು ಮಸೀದಿಯೊಂದರ ಮೇಲೆ ಬಾಂಬ್‌ ಹಾಕಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 46 ಮಂದಿ ಶಿಯಾ ಮುಸ್ಲಿಮರ ಸಾವಿಗೆ ಕಾರಣವಾಗಿದ್ದು. ಇಷ್ಟಾದರೂ ತಾನೇ ಈ ಗುಂಪನ್ನು ಸ್ವತಂತ್ರವಾಗಿ ನಿಗ್ರಹಿಸುತ್ತೇನೆ, ಅಮೆರಿಕದ ಸಹಾಯ ಬೇಡವೆಂದು ತಾಲಿಬಾನ್‌ ಹೇಳಿಕೊಂಡಿದೆ.

ಒಂದು ಕಾಲದಲ್ಲಿ ತಾಲಿಬಾನ್‌ ಶತ್ರುವಾಗಿದ್ದ ಅಮೆರಿಕ ಇತ್ತೀಚೆಗೆ ಅಫ್ಘಾನಿಸ್ತಾವನ್ನು ತೊರೆದಿದೆ.

ಇದನ್ನೂ ಓದಿ :ಸೊರಬ: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿ, ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು

Advertisement

Udayavani is now on Telegram. Click here to join our channel and stay updated with the latest news.

Next