ಕಾಬೂಲ್: ಹೊಟ್ಟೆಗೆ ಹಿಟ್ಟಿಲದಿದ್ದರೂ, ಜುಟ್ಟಿಗೆ ಮಲ್ಲಿಗೆ ಎನ್ನುವ ಮಾತು ತಾಲಿಬಾನ್ ಸರ್ಕಾರಕ್ಕೆ ಹೇಳಿ ಮಾಡಿಸಿದಂತಿದೆ. ಅಫ್ಘಾನಿಸ್ತಾನದಲ್ಲಿ ಜನರು ಬಡತನ, ಸಾಲದಿಂದ ಒದ್ದಾಡುತ್ತಿದ್ದರೆ, ಇತ್ತ ಸರ್ಕಾರ, ಇರುವ ಹಣವನ್ನೂ ವ್ಯಯಿಸಿ, ಚೀನದಿಂದ ಬ್ಲೋಫಿಶ್ ಡ್ರೋನ್ ಖರೀದಿಗೆ ಮುಂದಾಗಿದೆ.
ಕೃತಕ ಬುದ್ಧಿಮತ್ತೆ ಅಳವಡಿಕೆಯ ಮೂಲಕ, ಗನ್‌ಗಳಿಂದ ಫೈರಿಂಗ್ ಮಾಡುವ, ಗ್ರೆನೇಡ್‌ಗಳನ್ನು ಎಸೆಯುವ ಸಾಮರ್ಥ್ಯವಿರುವ ಬ್ಲೋಫಿಶ್ ಡ್ರೋನ್‌ಗಳನ್ನು ಚೀನದಿಂದ ಖರೀದಿಸುವುದಕ್ಕೆ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ.
ಸದ್ಯಕ್ಕೆ ಅಲ್‌ಖೈದಾ ಸಂಘಟನೆಯೊಂದಿಗೆ ತಾಲಿಬಾನ್ ಸಂಬಂಧ ಹದಗೆಟ್ಟಿದ್ದು, ಉಗ್ರ ಸಂಘಟನೆಯ ಭಯೋತ್ಪಾದಕ ಚಟುವಟಿಕೆಗಳನ್ನು ತಡೆಗಟ್ಟಲು ಈ ಡ್ರೋನ್ ಅಗತ್ಯವೆಂದು ಚೀನ ಪ್ರತಿಪಾದಿಸಿದೆ. ಆದರೆ, ಈ ಬಗ್ಗೆ ಅಮೆರಿಕ ಆತಂಕ ವ್ಯಕ್ತ ಪಡಿಸಿದ್ದು, ತಾಲಿಬಾನ್‌ಗೆ ಡ್ರೋನ್‌ಗಳ ರಫ್ತು ನಿರ್ಣಯ ಸರಿಯಲ್ಲ ಎಂದಿದೆ.