Advertisement

ಸೇನಾ ಹೆಲಿಕಾಪ್ಟರ್‌ನಲ್ಲಿ ತನ್ನ ಪತ್ನಿಯನ್ನು ಕರೆತಂದ ತಾಲಿಬಾನಿ ಸೈನಿಕ

09:01 PM Jul 04, 2022 | Team Udayavani |

ಕಾಬೂಲ್‌: ತಾಲಿಬಾನಿ ಸೈನಿಕನೊಬ್ಬ ಸೇನಾ ಹೆಲಿಕಾಪ್ಟರ್‌ನಲ್ಲಿ ತನ್ನ ಪತ್ನಿಯನ್ನು ಮನೆಗೆ ಕರೆದುಕೊಂಡು ಬಂದಿರುವ ಘಟನೆ ಅಫ್ಘಾನಿಸ್ತಾನದಲ್ಲಿ ನಡೆದಿದೆ.

Advertisement

ತಾಲಿಬಾನ್‌ನ ಹಕ್ಕಾನಿ ಬ್ರ್ಯಾಂಚ್‌ನ ಕಮಾಂಡರ್‌, ಶನಿವಾರ ವಿವಾಹವಾಗಿದ್ದು, ಖೋಸ್ಟ್‌ ಪ್ರಾಂತ್ಯದಲ್ಲಿರುವ ತನ್ನ ಮನೆಗೆ ಲೊಗಾರ್‌ ಜಿಲ್ಲೆಯಿಂದ ಪತ್ನಿಯನ್ನು ಕರೆತಂದಿದ್ದಾನೆ.

ಆತ ಯುವತಿಯ ಕುಟುಂಬಕ್ಕೆ 12,00,000 ಅಫ್ಘಾನಿಯನ್ನು ವಧುದಕ್ಷಿಣೆಯಾಗಿ ಕೊಟ್ಟು ಮದುವೆಯಾಗಿದ್ದಾನೆ ಎಂದು ವರದಿ ಮಾಡಲಾಗಿದೆ.

ಹೆಲಿಕಾಪ್ಟರ್‌ನಲ್ಲಿ ಆತ, ಪತ್ನಿಯೊಂದಿಗೆ ಬಂದಿಳಿಯುತ್ತಿರುವ ವಿಡಿಯೋ ಕೂಡ ವೈರಲ್‌ ಆಗಿದೆ. ಆದರೆ ತಾಲಿಬಾನ್‌ ಮಾತ್ರ ಈ ಆರೋಪವನ್ನು ತಳ್ಳಿ ಹಾಕಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next