ಕಾಬೂಲ್: ಅಫ್ಘಾನಿಸ್ತಾನದಲ್ಲಿ ಹೆಣ್ಣು ಮಕ್ಕಳಿಗೆ ಒಂದರಿಂದ ಆರನೇ ತರಗತಿ ವರೆಗಿನ ಶಿಕ್ಷಣಕ್ಕೆ ತಾಲಿಬಾನ್ ಅನುಮತಿ ನೀಡಿದೆ.
Advertisement
ಆರನೇ ತರಗತಿಯಿಂದ ಕೆಳ ಹಂತದ ಶಿಕ್ಷಣಕ್ಕಾಗಿ ಹೆಣ್ಣು ಮಕ್ಕಳಿಗಾಗಿ ಶಾಲೆಗಳು ಮತ್ತು ಶಿಕ್ಷಣ ಕೇಂದ್ರವನ್ನು ಆರಂಭಿಸುವಂತೆ ಸೂಚಿಸಲಾಗಿದೆ. ಸದ್ಯ ಮಹಿಳೆಯರಿಗೆ ವಿಶ್ವವಿದ್ಯಾಲಯ ಪ್ರವೇಶಕ್ಕೆ ನಿಷೇಧವಿದೆ.
ತಾಲಿಬಾನ್‌ನ ಈ ನಿರ್ಧಾರವನ್ನು ಮುಸ್ಲಿಂ ದೇಶಗಳು ಸೇರಿದಂತೆ ಅನೇಕ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿತ್ತು.
ಮಹಿಳೆಯರು ಬೀದಿಗಿಳಿದು ತಾಲಿಬಾನ್ ದುರಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಹೆಣ್ಣು ಮಕ್ಕಳಿಗಾಗಿ ಪ್ರಾಥಮಿಕ ಶಾಲೆ ಆರಂಭಿಸಲು ತಾಲಿಬಾನ್ ಅನುವು ಮಾಡಿಕೊಟ್ಟಿದೆ.