Advertisement
ಹೆಣ್ಣುಮಕ್ಕಳು ಎಂದಾಗ ಕೆಲವರ ಮನಸ್ಸಲ್ಲಿ ಆಕೆ ಏನು ಸಾಧನೆ ಮಾಡುತ್ತಾಳೆ? ಎನ್ನುವುದೊಂದು ಭಾವನೆ ಇದ್ದೆ ಇರುತ್ತದೆ. ಆದರೆ ನಮ್ಮ ಸಮಾಜದಲ್ಲಿ ಇಂದು ಹೆಣ್ಣು ಮಕ್ಕಳು ಎಲ್ಲದರಲ್ಲೂ ತಮ್ಮ ಚಾಪು ಮೂಡಿಸಿದ್ದಾರೆ. ಸಮಾಜದಲ್ಲಿ ತಾನು ಕೂಡ ಗುರುತಿಸಿಕೊಳ್ಳಬೇಕು ಎಂದು ಹಲವಾರು ಕಲೆಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಅದರಲ್ಲೂ ಈ ಹುಡುಗಿ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿ ಅದ್ಭುತವಾದ ವರ್ಣಚಿತ್ರಗಳನ್ನು ಬಿಡಿಸುತ್ತಾರೆ.
Related Articles
Advertisement
ಈಕೆಗೆ ಹೆಚ್ಚು ಆಸಕ್ತಿ ಮಂಡಲ ಕಲೆಯಲ್ಲಿ, ಇನ್ನು ಹೆಚ್ಚು ವಿಭಿನ್ನವಾಗಿ ರಚಿಸಬೇಕೆಂಬುದು ಇವರ ಆಶಯ. ಹಾಗೆಯೇ ಹೇರ್‌ಸ್ಟೈಲ್, ರಂಗು ರಂಗಿನ ರಂಗೋಲಿಯಲ್ಲೂ ಆಸಕ್ತಿ ಹೊಂದಿರುವ ಈಕೆ ಅದ್ಭುತವಾದ ಮಂಡಲ ಚಿತ್ರಗಳನ್ನು ರಚಿಸುತ್ತಾರೆ.
ಈಕೆಗೆ ಪೆನ್, ಪೆನ್ಸಿಲ್ ಶೀಟ್ ಪೇಪರ್‌ಕಂಡರೆ ಸಾಕು ಏನಾದರು ಡ್ರಾಯಿಂಗ್ ಬಿಡಿಸಬೇಕೇನ್ನುವ ಹಂಬಲ. ಈಕೆ ಮೂರನೇ ತರಗತಿಯಲ್ಲಿರುವಾಗ ಒಂದು ಗಣಪತಿಯ ಡ್ರಾಯಿಂಗ್ ಬಿಡಿಸಿದ್ದನ್ನು ಈಕೆಯ ಶಾಲೆಯ ಸರ್‌ನೊàಡಿ ಪೇಪರ್‌ನಲ್ಲಿ ಪ್ರಕಟ ಮಾಡಿದ್ದರು, ಅಲ್ಲಿಂದ ಈಕೆಗೆ ಚಿತ್ರ ಕಲೆಯಲ್ಲಿ ಇನ್ನು ಆಸಕ್ತಿ ಹೆಚ್ಚುತ್ತಲೇ ಹೋಯಿತು.
ಪ್ರಸ್ತುತ ಇವರು ಸಿ ಆರ್‌ಕ್ರಿಯೇಷನ್ ಎಂಬ ಯುಟ್ಯೂಬ್ ಚಾನೆಲ್ ಅಲ್ಲಿ ಸದಸ್ಯರಾಗಿದ್ದು, ಅದೇ ತಂಡದಿಂದ ಮುಂದೆ ಬರುವಂತಹ ಕಿರು ಚಿತ್ರಗಳಲ್ಲಿ ಅಭಿನಯಿಸುವ ಆಸಕ್ತಿ ಹೊಂದಿದ್ದಾರೆ.
ಕಲೆಗೆ ಆಸಕ್ತಿ ಇರುವುದರಿಂದ ಸಣ್ಣ ವಯಸ್ಸಿನಲ್ಲಿ ತಾನೇ ಚಿತ್ರಕಲೆಯನ್ನು ಬಿಡಿಸುತ್ತ ಬಂದವರು. ನವೋದಯ ಪ್ರೌಢ ಶಾಲೆಯಲ್ಲಿ ಐ. ಗೋಪಾಲಕೃಷ್ಣರಾವ್ ಅವರಿಂದ ಚಿತ್ರಕಲೆ ಅಭ್ಯಾಸ ಮಾಡಿದ್ದರು. ಚಿತ್ರಕಲೆಯಲ್ಲಿ ಹೆಚ್ಚಿನ ಆಸಕ್ತಿ ಇದ್ದ ಕಾರಣ ಮಂಡಲ ಚಿತ್ರ ಕಲೆಗೂ ಹೆಚ್ಚು ಒಲವು ಬಂತು ಎಂದು ಅನ್ವಿತಾ ಹೇಳುತ್ತಾರೆ. ಬಹಳ ಸುಂದರವಾಗಿ, ಚಿತ್ರ ರಚಿಸುತ್ತಾರೆ. ಆಸಕ್ತಿ ಇದ್ದರೆ ಯಾವ ಕೆಲಸಗಳನ್ನು ಮಾಡಬಹುದು. ನಮ್ಮಲ್ಲಿ ನಂಬಿಕೆ ಮತ್ತು ಆಸಕ್ತಿ ಇರಬೇಕು. ಈಕೆಯ ಸಾಧನೆ ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಆಶಿಸುವ.
ರಸಿಕಾ ಮುರುಳ್ಯ
ಪತ್ರಿಕೋದ್ಯಮ ವಿಭಾಗ,
ವಿವೇಕಾನಂದ ಕಾಲೇಜು ಪುತ್ತೂರು