Advertisement

ದುಬೈನಿಂದ ವಾಟ್ಸ್‌ಆ್ಯಪ್‌ನಲ್ಲೇ ಶಿವಮೊಗ್ಗದ ಪತ್ನಿಗೆ ತಲಾಖ್‌!

11:29 PM Sep 18, 2019 | Team Udayavani |

ಶಿವಮೊಗ್ಗ: 21 ವರ್ಷ ಸಂಸಾರ ನಡೆಸಿದ ಪತಿರಾಯ ಪತ್ನಿಗೆ ವಾಟ್ಸ್‌ಆ್ಯಪ್‌ನಲ್ಲೇ 3 ಬಾರಿ ತಲಾಕ್‌ ನೀಡಿದ್ದಾನೆ. ಇದರಿಂದ ನೊಂದ ಪತ್ನಿ ನ್ಯಾಯ ಕೊಡಿಸುವಂತೆ ಮಹಿಳಾ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ನಗರದ ಟ್ಯಾಂಕ್‌ ಮೊಹಲ್ಲಾ ನಿವಾಸಿಯಾಗಿರುವ ಆಯಿಶಾ ಸಿದ್ದಿಕಾ ಅದೇ ಬಡಾವಣೆಯ ಮುಸ್ತಫಾ ಬೇಗ್‌ ಜತೆ ಪ್ರೀತಿಯಾಗಿ 21 ವರ್ಷಗಳ ಹಿಂದೆಯೇ ಮದುವೆಯಾಗಿದ್ದರು.

Advertisement

ದುಬೈನಲ್ಲಿ ಸಿಸಿ ಕ್ಯಾಮೆರಾ, ಲ್ಯಾಪ್‌ಟಾಪ್‌ ಟೆಕ್ನಿಶಿಯನ್‌ ಆಗಿರುವ ಮುಸ್ತಫಾ ವರ್ಷಕ್ಕೆರಡು ಬಾರಿ ಪತ್ನಿ ಹಾಗೂ ದತ್ತು ಮಗಳನ್ನು ನೋಡಲು ಬರುತ್ತಿದ್ದ. ಜತೆಗೆ ಪ್ರತಿ ತಿಂಗಳು ಹಣ ಕಳುಹಿಸುತ್ತಿದ್ದ. ಈ ವರ್ಷ ಜನವರಿಯಲ್ಲಿ ಭಾರತಕ್ಕೆ ಬಂದು ವಾಪಸ್‌ ಹೋದ ಮೇಲೆ ವಾಟ್ಸ್‌ಆ್ಯಪ್‌ನಿಂದ ಪತ್ನಿಗೆ ತಲಾಖ್‌ ಸಂದೇಶ ಕಳುಹಿಸಿದ್ದಾನೆ. ಇದನ್ನು ಒಪ್ಪದ ಪತ್ನಿ ಮಾತು ಮುಂದುವರಿಸಲು ಪ್ರಯತ್ನಿಸಿದಾಗ ಮತ್ತೆರಡು ಬಾರಿ ತಲಾಖ್‌ ಸಂದೇಶ ಕಳಿಸಿದ್ದಾನೆ.

ತಲಾಖ್‌ ನೀಡಬೇಡಿ ಎಂದು ಪತಿಗೆ ಅಂಗಲಾಚಿದರೂ ಕೇಳಿಲ್ಲ ಎಂದು ಪತ್ನಿ ಈಗ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಮೋದಿ ತಲಾಖ್‌ ನಿಷೇಧ ಕಾನೂನು ಜಾರಿಗೆ ತಂದಿದ್ದು, ನಾನು ಅವರಿಗೆ ಟ್ವೀಟ್‌ ಮಾಡಿ, ಅವರನ್ನೂ ಭೇಟಿ ಮಾಡಿ, ನ್ಯಾಯಕ್ಕಾಗಿ ಕೇಳುವೆ ಎಂದು ಆಯಿಶಾ ಸಿದ್ದಿಕಾ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next