ಕೆಯ್ಯೂರು: ಸುಳ್ಯ ತಾಲೂಕು ಮಂಡೇಕೋಲು ಗ್ರಾಮದ ಪೆರಜ ನಿವಾಸಿ ಗೋಪಾಲಕೃಷ್ಣ ಆಚಾರ್ಯ (82)ಅಸೌಖ್ಯದಿಂದ ಜ17 ರಂದು ನಿಧನರಾದರು.
ಮೃತರು 1995 ರಲ್ಲಿ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಡೆಪ್ಯುಟಿ ತಹಶೀಲ್ದಾರಾಗಿ ನಿವೃತ್ತಿ ಹೊಂದಿದರು , ಇವರು ವಂಶ ಪಾರಂಪರ್ಯವಾಗಿ ತಲಾಕಾವೇರಿ ದೇವಾಲಯದಲ್ಲಿ ಮೂಲ ಅರ್ಚಕರಾಗಿ ಸೇವೆ ಸಲ್ಲಿಸಿದ್ದಾರೆ, ಇವರು ಅನೇಕ ಸಂಘ ಸಂಸ್ಥೆಗಳಲ್ಲಿ ಗುರುತಿಸಿ, ಕೊಡುಗೈದಾನಿಯಾಗಿದ್ದರು.
ಮೃತರು ಪತ್ನಿ ಪದ್ಮಾವತಿ, ಪುತ್ರ ಪುತ್ತೂರು ಶಾಖೆಯ ಟಾಟ ಅರವಿಂದ ಮೋಟರ್ಸ್ ಕಂಪೆನಿಯ ಸರ್ವಿಸ್ ಮೆನೇಜರ್ ಕೃಷ್ಣ ಪ್ರಸಾದ್ ಆಚಾರ್ಯ, ವಿಟ್ಲ ಗ್ರಾಮೀಣ ಬ್ಯಾಂಕ್ ಪುತ್ತೂರು ಶಾಖೆಯ ವ್ಯವಸ್ಥಾಪಾಕಿ ಸವಿತಾ ನಾಗರಾಜ್, ಸಹಿತ ನಾಲ್ವರು ಪುತ್ರಿಯನ್ನು, ಅಪಾರ ಬಂಧು ಬಳಗವನ್ನು ಆಗಲಿದ್ದಾರೆ. ಮೃತರ ಮನೆಗೆ ಅನೇಕ ಗಣ್ಯ ವ್ಯಕ್ತಿಗಳು ಅಗಮಿಸಿ ಸಂತಾಪ ಸೂಚಿಸಿದರು.