Advertisement

ತಲಾಖ್‌ಗೆ ವಿಪಕ್ಷಗಳ ಅಡ್ಡಿ

12:30 AM Jan 01, 2019 | |

ಹೊಸದಿಲ್ಲಿ: ವಿಪಕ್ಷಗಳ ಕೋಲಾಹಲದ ನಡುವೆ ಸೋಮ ವಾರ ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್‌ ನಿಷೇಧ ವಿಧೇಯಕ, ಮುಸ್ಲಿಂ ಮಹಿಳೆಯರ (ವಿವಾಹ ಹಕ್ಕು ರಕ್ಷಣೆ) ವಿಧೇಯಕ 2018ರ ಬಗ್ಗೆ ಚರ್ಚೆ ಆರಂಭಿಸಲು ಸಾಧ್ಯವೇ ಆಗಲಿಲ್ಲ. ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್‌ ಗದ್ದಲದ ನಡುವೆ ವಿಧೇಯಕ ಮಂಡಿಸಿದರು. ಕಾಂಗ್ರೆಸ್‌ ನೇತೃತ್ವದ ವಿಪಕ್ಷಗಳು ವಿಧೇಯಕವನ್ನು ಸಂಸತ್‌ನ ಆಯ್ಕೆ ಸಮಿತಿಗೆ ಒಪ್ಪಿಸಲೇಬೇಕೆಂದು ಪಟ್ಟು ಹಿಡಿದು ಗದ್ದಲ ಎಬ್ಬಿಸಿದವು. ಆದರೆ ಕೇಂದ್ರ ಸರಕಾರ ಮಾತ್ರ ವಿಪಕ್ಷಗಳ ಬೇಡಿಕೆಯನ್ನು ಒಪ್ಪಿಕೊಳ್ಳಲು ಸುತರಾಂ ಸಿದ್ಧವಿರಲಿಲ್ಲ. ಹೀಗಾಗಿ ಕಲಾಪವನ್ನು ಜ.2ರ ವರೆಗೆ ಮುಂದೂಡಲಾಯಿತು. ಇದಕ್ಕಿಂತ ಮೊದಲು ಬೆಳಗ್ಗಿನ ಅವಧಿಯಲ್ಲಿ ಮೇಲ್ಮನೆಯ ಕಲಾಪವನ್ನು ಇರಡು ಬಾರಿ ಮುಂದೂಡಲಾಗಿತ್ತು. ರಾಜ್ಯಸಭೆ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್‌ ಮಾತನಾಡಿ ಈ ವಿಧೇಯಕ ಮಹತ್ವವಾದದ್ದು, ಹೀಗಾಗಿ ಅದರ ಬಗ್ಗೆ ಮತ್ತಷ್ಟು ಪರಿಶೀಲನೆ ಅಗತ್ಯವಿದೆ. ಅರ್ಧಕ್ಕಿಂತ ಹೆಚ್ಚಿನ ಸದಸ್ಯರು ವಿಧೇಯಕವನ್ನು ಸಂಸತ್‌ನ ಆಯ್ಕೆ ಸಮಿತಿಗೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಹೇಳಿ ದ್ದಾರೆ. ಕೇಂದ್ರ ಸರಕಾರ ಆಯ್ಕೆ ಸಮಿತಿಗೆ ಕಳುಹಿಸುವ ಸಂಪ್ರದಾಯವನ್ನೇ ಮುರಿಯುತ್ತಿದೆ ಎಂದು ಆರೋಪಿಸಿದರು. ರಾಜ್ಯಸಭೆ ರಬ್ಬರ್‌ ಸ್ಟಾಂಪ್‌ ಅಲ್ಲ ಎಂದು ಕಾಂಗ್ರೆಸ್‌ನ ಮತ್ತೂಬ್ಬ ನಾಯಕ ಆನಂದ ಶರ್ಮಾ ಆರೋಪಿಸಿದ್ದಾರೆ.

Advertisement

ವಿಪಕ್ಷಗಳ ಆರೋಪಗಳಿಗೆ ಉತ್ತರ ನೀಡಿದ ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್‌ ಇದೊಂದು ಪ್ರಮುಖ ವಿಧೇಯಕ. ರಾಜ್ಯಸಭೆಯಲ್ಲಿ ಚರ್ಚಿಸಲು ಸಿದ್ಧರಿ ದ್ದೇವೆ. ಈ ನಿಟ್ಟಿನಲ್ಲಿ ಬರಲಿರುವ ಸಲಹೆಯನ್ನು ಸ್ವೀಕರಿಸು ಸಿದ್ಧರಿದ್ದೇವೆ. ಸುಗ್ರೀವಾಜ್ಞೆ ಜಾರಿಗೊಳಿಸಿದ ಬಳಿಕ ಭಾನುವಾರದ ವರೆಗೆ ತಲಾಖ್‌ ನೀಡುವ ಪ್ರಕರಣಗಳು ನಡೆದಿವೆ ಎಂದರು. ಸಚಿವರ ಮಾತುಗಳಿಗೆ ಸ್ಪಂದಿಸದ ವಿಪಕ್ಷಗಳು ವಿಧೇಯಕವನ್ನು ಆಯ್ಕೆ ಸಮಿತಿಗೆ ನೀಡುವ ಬಗ್ಗೆ ಪಟ್ಟು ಹಿಡಿದರು. ಈ ಹಿನ್ನೆಲೆಯಲ್ಲಿ ಉಪಸಭಾಪತಿ ಹರ್ಷವರ್ಧನ್‌ ಕಲಾಪವನ್ನು ಬುಧವಾರದವರೆಗೆ ಮುಂದೂಡಿದರು. 

ಬೇಕು 133 ಮತ: ಮೇಲ್ಮನೆಯಲ್ಲಿ ವಿಧೇಯಕ ಅಂಗೀ ಕಾರಕ್ಕೆ 244 ಸದಸ್ಯರ ಪೈಕಿ 133 ಸದಸ್ಯರ ಮತ ಬೇಕು. ಸೋಮ ವಾರ ಜೆಡಿಯು ಗೈರಾಗಿತ್ತು. ಸರಕಾರದ ಪರವಾಗಿ 90 ಮತಗಳು ಇದ್ದವು. ಉಳಿದಂತೆ ಬಿಜೆಡಿ, ವೈಎಸ್‌ಆರ್‌ ಕಾಂಗ್ರೆಸ್‌, ಶಿವಸೇನೆ ಗೈರಾಗಿದ್ದವು. 

ರಫೇಲ್‌ ಚರ್ಚೆಗೆ ಸಿದ್ಧ: ಇದೇ ವೇಳೆ ಲೋಕಸಭೆಯಲ್ಲಿ ರಫೇಲ್‌ ಡೀಲ್‌ ಬಗ್ಗೆ ಗದ್ದಲ ಮುಂದುವರಿದಿದೆ. ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಸಂಸತ್‌ನ ಜಂಟಿ ಸಮಿತಿಯಿಂದ ತನಿಖೆಗೆ ಒತ್ತಾಯಿಸುತ್ತಿದ್ದ ಕಾಂಗ್ರೆಸ್‌, ಲೋಕಸಭೆಯಲ್ಲಿ ಡೀಲ್‌ ಬಗ್ಗೆ ಬುಧವಾರ ಚರ್ಚಿಸಲು ಸಿದ್ಧ ಎಂದು ಪಕ್ಷದ ನಾಯಕ ಮಲ್ಲಿಕಾರ್ಜು ಖರ್ಗೆ ಹೇಳಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಜೇಟ್ಲಿ ಸವಾಲು ಹಾಕಿದ್ದಾರೆ. ಹೀಗಾಗಿ, ಚರ್ಚೆಗೆ ಸಮಯ ನಿಗದಿಪಡಿಸಿ ಎಂದಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಲೋಕಸಭೆ ಮತ್ತೆ ಸೇರಿದಾಗ ಖರ್ಗೆ ರಫೇಲ್‌ ಬಗ್ಗೆ ಜೆಪಿಸಿ ತನಿಖೆ ಮತ್ತು ಚರ್ಚೆಯಾಗಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿತ್ತ ಸಚಿವ ಅರುಣ್‌ ಜೇಟ್ಲಿ ಖರ್ಗೆಯವರೇ ಚರ್ಚೆ ಆರಂಭಿಸಲಿ. ಸರಕಾರ ಅದಕ್ಕೆ ಉತ್ತರ ಕೊಡಲಿದೆ. ಆದರೆ ಅವರು ಹಿಂದೇಟು ಹಾಕುತ್ತಿದ್ದಾರೆ ಎಂದರು. ಅದಕ್ಕೆ ಸವಾಲು ಎಂಬಂತೆ ಕಾಂಗ್ರೆಸ್‌ ಚರ್ಚೆಗೆ ಸಿದ್ಧವಿದೆ ಎಂದರು. ಕಲಾಪ ಮುಂದೂಡಿಕೆ ವೇಳೆ ಮತ್ತೆ ಈ ವಿಚಾರ ನೆನಪಿಸಿದಾಗ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಈ ಬಗ್ಗೆ ಪರಿಶೀಲನೆ ನಡೆಸಿ ಸಮಯ ನಿಗದಿ ಮಾಡುವುದಾಗಿ ಹೇಳಿದ್ದಾರೆ. ಇದೇ ವೇಳೆ ಮಾ. 31ರ ವರೆಗೆ ಹೆಚ್ಚುವರಿ ವೆಚ್ಚ 85, 948. 86 ಕೋಟಿ ರೂ. ಮೊತ್ತಕ್ಕೆ ಕೆಳಮನೆ ಅನು ಮೋದನೆ ನೀಡಿತು.

ಕ್ರಿಶ್ಚಿಯನ್‌ ಮೈಕೆಲ್‌ ಮತ್ತು ಗಾಂಧಿ ಕುಟುಂಬದ ನಡುವೆ ಗಾಢ ಮೈತ್ರಿ ಇದೆ. ಅದು ಈಗ ಪರೀಕ್ಷೆಗೆ ಸಿದ್ಧವಾಗುತ್ತಿದೆ. ಸಿಬಿಐ ತನ್ನನ್ನು ವಿಚಾರಣೆಗೆ ಒಳಪಡಿಸುತ್ತಿರುವ ವಿವರವನ್ನೂ ಕುಟುಂಬಕ್ಕೆ ಹಸ್ತಾಂತರಿಸಲು ಮುಂದಾಗಿದ್ದಾನೆ.
ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ

Advertisement

ಸೋನಿಯಾ ಅಥವಾ ರಾಹುಲ್‌ ರಫೇಲ್‌ ಡೀಲ್‌ನಲ್ಲಿ ಯಾವತ್ತೂ ಮಧ್ಯಪ್ರವೇಶ ಮಾಡಿರಲಿಲ್ಲ. ಬಿಜೆಪಿ ಸರಕಾರ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಸುಳ್ಳುಗಳನ್ನು ಸೃಷ್ಟಿಸುತ್ತಿದೆ. 
ಎ.ಕೆ. ಆ್ಯಂಟನಿ, ರಕ್ಷಣಾ ಖಾತೆ ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next