Advertisement

ಇಂಡಿಯಾ ನಮ್ಮ ರೀಯಲ್‌ ಫ್ರೆಂಡ್‌: ವರ್ಷಾಂತ್ಯಕ್ಕೆ ಮೋದಿ ಅಮೆರಿಕಕ್ಕೆ? 

10:29 AM Jan 25, 2017 | Team Udayavani |

ಹೊಸದಿಲ್ಲಿ : ಭಾರತವೇ ಅಮೆರಿಕದ ನಿಜವಾದ ಮಿತ್ರ..ಹೀಗೆ ಹೇಳಿದ್ದು ಅಮೆರಿಕದ ನೂತನ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ . ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಂಗಳವಾರ ರಾತ್ರಿ ದೂರವಾಣಿ ಮೂಲಕ ಮಾತುಕತೆ ನಡೆಸಿದರು. 

Advertisement

ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಭಾರತ ಅಮೆರಿಕದ ನಿಜವಾದ ಸ್ನೇಹಿತ ಎಂದು ಟ್ರಂಪ್‌ ಹೇಳಿರುವುದಾಗಿ ವರದಿಯಾಗಿದೆ.

ಆರ್ಥಿಕತೆ ಮತ್ತೆ ಸೇನಾ ವಲಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ 2 ರಾಷ್ಟ್ರಗಳ ಬಾಂಧ್ಯವ್ಯ ವೃದ್ಧಿ ಮಾಡಿಕೊಳ್ಳಲು ಉಭಯ ನಾಯಕರು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. 

ದಕ್ಷಿಣ ಏಷ್ಯಾ ಮತ್ತು ಮಧ್ಯ ಏಷ್ಯಾ ಸಮಸ್ಯೆಗಳ ಕುರಿತಾಗಿಯೂ ಉಭಯ ನಾಯಕರು ಚರ್ಚೆ ನಡೆಸಿರುವುದಾಗಿ ಶ್ವೇತ ಭವನದ ಮೂಲಗಳು ತಿಳಿಸಿವೆ. 

ಭಯೋತ್ಪಾದನೆ ವಿರುದ್ಧ ಎರಡು ರಾಷ್ಟ್ರಗಳು ಒಗ್ಗೂಡಿ ಹೋರಾಡಲು ಮಾತುಕತೆಯ ವೇಳೆ ಪರಸ್ಪರ ಸಹಮತ ವ್ಯಕ್ತ ಪಡಿಸಿರುವುದಾಗಿ ವರದಿಯಾಗಿದೆ. 

Advertisement

ನಾನು ಮತ್ತು ಟ್ರಂಪ್‌ ಅವರು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ಬಲಪಡಿಸಲು ನಿರ್ಧರಿಸಿದ್ದೇವೆ ಎಂದು ಪ್ರಧಾನಿ ಮೋದಿ ಟ್ವಿಟ್‌ ಮಾಡಿದ್ದಾರೆ. 

ವರ್ಷಾಂತ್ಯಕ್ಕೆ ಮೋದಿ ಅಮೆರಿಕಕ್ಕೆ ? 

ಟ್ರಂಪ್‌ ಅವರು ಮೋದಿ ಅವರನ್ನು ವರ್ಷಾಂತ್ಯಕ್ಕೆ ಅಮೆರಿಕಕ್ಕೆ ಬರುವಂತೆ ಆಹ್ವಾನ ನೀಡಿರುವುದಾಗಿ ಶ್ವೇತ ಭವನದ ಮೂಲಗಳು ತಿಳಿಸಿವೆ. ಮೋದಿ ಅವರೂ ಟ್ರಂಪ್‌ ಅವರನ್ನು ಭಾರತಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ ಎಂದು ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.