Advertisement

ಎಐಎಫ್ಎಫ್ ಕೊಡುಗೆಗೆ ಕೋಚ್‌ ಸ್ಟಿಮ್ಯಾಕ್‌ ಒಪ್ಪಿಗೆ

10:59 PM Sep 19, 2022 | Team Udayavani |

ಕೋಲ್ಕತಾ: ಪುರುಷರ ಫ‌ುಟ್‌ಬಾಲ್‌ ತಂಡವು ಏಷ್ಯನ್‌ ಕಪ್‌ ಕ್ವಾರ್ಟರ್‌ ಫೈನಲ್‌ಗೆ ತೇರ್ಗಡೆಯಾಗಲು ಮಾರ್ಗದರ್ಶನ ಮಾಡಿ ಅಥವಾ ವಜಾಗೊಳಿಸುವುದನ್ನು ಎದುರಿಸಿ ಎಂಬ ಕೊಡುಗೆಯನ್ನು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಶನ್‌ (ಎಐಎಫ್‌ಎಫ್‌) ಭಾರತೀಯ ತಂಡದ ಮುಖ್ಯ ಕೋಚ್‌ ಇಗೊರ್‌ ಸ್ಟಿಮ್ಯಾಕ್‌ ಅವರಿಗೆ ನೀಡಿದೆ.

Advertisement

ಒಪ್ಪಂದ ವಿಸ್ತರಿಸುವ ಈ ಪ್ರಸ್ತಾವಕ್ಕೆ ಸ್ಟಿಮ್ಯಾಕ್‌ ಒಪ್ಪಿಗೆ ಸೂಚಿಸಿದ್ದಾರೆ. ಸ್ಟಿಮ್ಯಾಕ್‌ ಸದ್ಯ ಕೋಲ್ಕತಾದಲ್ಲಿ ವಿಯೆಟ್ನಾಂ ಪ್ರವಾಸಕ್ಕೆ ತೆರಳುವ ತಂಡಕ್ಕೆ ನಡೆಯುತ್ತಿರುವ ಶಿಬಿರದಲ್ಲಿ ಆಟಗಾರರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next