Advertisement

ಶಿರಸಿಯ ಭಜನಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳಿ; ಆಕರ್ಷಕ ಬಹುಮಾನವೂ ಉಂಟು!

03:27 PM Mar 11, 2023 | Team Udayavani |

ಶಿರಸಿ : ಪ್ರಜ್ವಲ ಟ್ರಸ್ಟ್‌ ವತಿಯಿಂದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಜಿಲ್ಲಾಮಟ್ಟದ ಭಜನಾ ಸ್ಪರ್ಧೆಯನ್ನು ಏ.02 ರಂದು ಆಯೋಜಿಸಲಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷೆ ಬಿಂದು ಹೆಗಡೆ ಹೇಳಿದರು.

Advertisement

ನಗರದ ಸಾಮ್ರಾಟ್‌ ಹೊಟೆಲ್‌ನಲ್ಲಿ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಬಂದಿರುವ ಪ್ರಜ್ವಲ ಟ್ರಸ್ಟ್‌ ಕೆಲವು ಉದ್ದೇಶ ಇಟ್ಟುಕೊಂಡು ಈ ಭಜನಾ ಕಾರ್ಯಕ್ರಮ ಆಯೋಜಿಸಿದೆ. ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಗಳಿಸಿದ ತಂಡಕ್ಕೆ 10 ಸಾವಿರ, ದ್ವಿತೀಯ ಬಹುಮಾನ 7 ಸಾವಿರ, ತೃತೀಯ ಬಹುಮಾನ 5 ಸಾವಿರ, ಪ್ರೋತ್ಸಾಹಕ ಬಹುಮಾನವಾಗಿ 3 ಸಾವಿರ ರೂ ನೀಡಲಾಗುತ್ತದೆ ಎಂದರು.

ತಂಡದಲ್ಲಿ ಪಕ್ಕ ವಾದ್ಯದವರನ್ನೂ ಸೇರಿ ಕನಿಷ್ಠ 5 ರಿಂದ 7 ಸದಸ್ಯರು ಇರಬೇಕು. ಪಕ್ಕವಾದ್ಯಗಳನ್ನು ಅಂಕ ಗಣನೆಗೆ ತೆಗೆದುಕೊಳ್ಳಾಗುವುದಿಲ್ಲ. ಯಾವದೇ ಭಜನೆ ಹೇಳಬಹುದಾಗಿದ್ದು, ಗುಂಪಿನ ಸದಸ್ಯರ ಸಹಭಾಗಿತ್ವ, ಸಮಯ, ಸ್ಪಷ್ಟ ಉಚ್ಛಾರ, ತಾಳ, ಲಯ ಇವುಗಳನ್ನು ಪರಿಶೀಲಿಸಿ ಅಂಕ ನೀಡಲಾಗುತ್ತದೆ. ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿದ್ದು, ಯಾವುದೇ ಚರ್ಚೆಗೆ ಅವಕಾಶ ಇಲ್ಲ. ಭಾಗವಹಿಸಲು ಇಚ್ಛಿಸುವವರು ಮಾ. 25 ಅಂತಿಮದಿನವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ತಂಡಗಳು ಭಾಗವಹಿಸಬೇಕು ಎಂದು ಕೋರಿದರು.

ತಂಡಗಳಿಗೆ ಪ್ರವೇಶ ಶುಲ್ಕ ಇಲ್ಲ.
ಸಂಪರ್ಕ ಸಂಖ್ಯೆ ; 9482111131 , 8073970447 7338498524

ಈ ಕಾರ್ಯಕ್ರಮದ ಜೊತೆಗೆ ತೆರೆಮರೆಯ ಸಾಧಕರಿಗೆ ಸನ್ಮಾನವೂ ನಡೆಯಲಿದ್ದು, ಬಹುಮಾನ ವಿತರಣೆಯ ನಂತರ ಉಸ್ತಾದ್‌ ಮೌಶಿನ್‌ ಖಾನ್‌, ಅವರಿಂದ ಸಿತಾರ ವಾದನ ಹಾಗೂ ಪಂ. ರಾಜೇಂದ್ರ ನಾಕೋಡ ಅವರಿಂದ ತಬಲಾ ವಾದನ ನಡೆಯಲಿದೆ. ಹಣತೆ ಬೆಳಕಿನಲ್ಲಿ ಸಾಮೂಹಿಕ ರಾಮರಕ್ಷಾ ಸ್ತೋತ್ರ ಪಠಣ, ನವೀನ್‌ ಆರ್‌ ಹೆಗಡೆ ಅವರಿಂದ ಕಥಕ್‌ ನೃತ್ಯ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸುಮಾ ಹೆಗಡೆ, ನಯನಾ ಹೆಗಡೆ, ರಾಘವೇಂದ್ರ ಹೆಗಡೆ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next