Advertisement

“ಕೋವಿಡ್ ಲಸಿಕೆ ಹಾಕಿಸಿ, ಟಿವಿ ಗೆಲ್ಲಿ’

12:25 AM Oct 18, 2021 | Team Udayavani |

ಇಂಫಾಲ್‌: “ಲಸಿಕೆ ಹಾಕಿಸಿಕೊಳ್ಳಿ, ಟಿವಿ, ಮೊಬೈಲ್‌, ಬ್ಲಾಂಕೆಟ್‌ ಗೆಲ್ಲಿ.’ ಈ ರೀತಿಯ ವಿಶೇಷ ಆಫ‌ರ್‌ವೊಂದನ್ನು ಮಣಿಪುರದ ಪಶ್ಚಿಮ ಇಂಫಾಲ್‌ನಲ್ಲಿ ನೀಡಲಾಗಿದೆ.

Advertisement

ಈ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಪಡೆದವರ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಂಥದ್ದೊಂದು ಯೋಜನೆಗೆ ಜಿಲ್ಲಾಡಳಿತ ಮುಂದಾಗಿದೆ.

ಜಿಲ್ಲೆಯ ಮೂರು ಪ್ರಮುಖ ಲಸಿಕಾ ಕೇಂದ್ರಗಳನ್ನು ಗುರುತಿಸಲಾಗಿದೆ. ಅಲ್ಲಿ ಅ.24, 31 ಮತ್ತು ನ.7ರಂದು ಲಸಿಕೆ ಪಡೆಯುವವರಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಿಯನ್ನು ಆಯ್ಕೆ ಮಾಡಿ, ಅವರಿಗೆ ಟಿವಿ, ಮೊಬೈಲ್‌, ಬ್ಲಾಂಕೆಟ್‌  ನೀಡಲಾಗುವುದು.

10 ಸಮಾಧಾನಕರ ಬಹುಮಾನವನ್ನೂ ನೀಡುವುದಾಗಿ ಹೇಳಲಾಗಿದೆ.

ಇದನ್ನೂ ಓದಿ:ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ

Advertisement

 

Advertisement

Udayavani is now on Telegram. Click here to join our channel and stay updated with the latest news.

Next