Advertisement
ನಿಮ್ಮ ಆರ್ಥೂಡಾಂಟಿಸ್ಟ್ ಅವರಿಂದ ಬ್ರೇಸಸ್ ಹಾಕಿಸಿಕೊಂಡು ಆರೋಗ್ಯಯುತವಾದ ಸುಂದರ ನಗುವಿನತ್ತ ಪ್ರಯಾಣ ಆರಂಭಿಸಿರುವುದಕ್ಕೆ ಅಭಿನಂದನೆಗಳು. ಈ ಪ್ರಯಾಣವು ಪ್ರತಿಯೊಬ್ಬರಿಗೂ ಭಿನ್ನವಾಗಿರುತ್ತದೆ. ಆಥೊìಡಾಂಟಿಕ್ ಚಿಕಿತ್ಸೆಯ ಅವಧಿಯು 12 ತಿಂಗಳುಗಳಿಂದ ತೊಡಗಿ 3 ವರ್ಷಗಳ ವರೆಗೆ ಇರುತ್ತದೆ. ನಿಮ್ಮ ಚಿಕಿತ್ಸೆಯು ಯಶಸ್ವಿಯಾಗಲು ಮತ್ತು ನಿಮಗೆ ಉತ್ತಮ ಫಲಿತಾಂಶ ಸಿಗಲು ನೀವು ಅನುಸರಿಸಬೇಕಾದ ಕೆಲವು ಕ್ರಮಗಳಿವೆ.
Related Articles
- ಬ್ರೇಸ್‌ಗಳು ಮತ್ತು ಹಲ್ಲುಗಳ ಮೇಲ್ಮೆ„ಯನ್ನು ಉಜ್ಜುವಾಗ ಬ್ರಶ್ಶನ್ನು ಬ್ರೇಸ್‌ಗಳತ್ತ 45 ಡಿಗ್ರಿ ಕೋನದಲ್ಲಿ ಹಿಡಿದುಕೊಳ್ಳಿ.
- ಉಳಿದಂತೆ ಇತರ ಭಾಗಗಳನ್ನು ನೀವು ಯಾವತ್ತೂ ಉಜ್ಜುವಂತೆ ಉಜ್ಜಿ.
- ಬ್ರೇಸ್ ವೈರ್‌ಗಳ ತಳಭಾಗವನ್ನು ಉಜ್ಜುವುದಕ್ಕಾಗಿ ಇಂಟರ್‌ಡೆಂಟಲ್ ಬ್ರಶ್ ಉಪಯೋಗಿಸಿ, ಹಲ್ಲುಗಳ ಮೇಲ್ಮೆ„ಯನ್ನು ಉಜ್ಜುವಾಗ ಮೃದುವಾಗಿ ಮೇಲಕ್ಕೂ ಕೆಳಕ್ಕೂ ಬ್ರಶ್ ಆಡಿಸಿ.
Advertisement
ಶುಚಿಯಾಗಿಡಿ :
ಪ್ರತೀ ದಿನ ಕನಿಷ್ಠ 2 ಬಾರಿ ಹಲ್ಲುಜ್ಜುವ ಮೂಲಕ ನಿಮ್ಮ ಹಲ್ಲುಗಳು ಮತ್ತು ಬ್ರೇಸ್‌ಗಳನ್ನು ಶುಚಿಯಾಗಿ ಇರಿಸಿಕೊಳ್ಳಿ. ವೈರ್ ಮತ್ತು ವಸಡಿನ ಅಂಚುಗಳಲ್ಲಿ ಉಜ್ಜುವಾಗ ಎಚ್ಚರಿಕೆ ಇರಲಿ.
ತುರ್ತು ಸಂದರ್ಭಗಳು ಬ್ರೇಸ್ ವಸಡುಗಳು ನಡುವೆ :
ಘರ್ಷಣೆಯಿಂದ ಮೃದು ಅಂಗಾಂಶಗಳಲ್ಲಿ ಹುಣ್ಣು/ ಗಾಯ ಉಂಟಾದ ಸಂದರ್ಭದಲ್ಲಿ ಮೃದು ವ್ಯಾಕ್ಸ್ ನೀಡಲಾಗುತ್ತದೆ. ಬ್ರೇಸ್‌ಗಳು ತುಂಡಾದರೆ ಹಲ್ಲುಗಳು ಬಹಳ ಬೇಗನೆ ಪಂಕ್ತಿಯಿಂದ ಹೊರಜಾರಬಹುದಾಗಿದೆ. ಹೀಗಾಗಿ ಬ್ರೇಸ್ ತುಂಡಾದರೆ ತುರ್ತುಗಿ ಆಥೊìಡಾಂಟಿಸ್ಟರನ್ನು ಕಾಣಿರಿ. ನಿಮ್ಮ ಚಿಕಿತ್ಸೆಯಿಂದ ಉತ್ತಮ
ಫಲಿತಾಂಶ ದೊರೆಯುವುದಕ್ಕಾಗಿ ಮತ್ತು ಚಿಕಿತ್ಸೆಯು ಉದ್ದೇಶಿತ ಸಮಯದಲ್ಲಿ ಯಶಸ್ವಿಯಾಗಿ ಪೂರೈಸುವುದಕ್ಕಾಗಿ ಬ್ರೇಸ್‌ಗಳು ತುಂಡಾಗದಂತೆ ಕಾಪಾಡುವುದು ನಿಮ್ಮ ಹೊಣೆಯಾಗಿದೆ.
ನಾವು ಯಾವ ಆಹಾರಗಳನ್ನು ವರ್ಜಿಸಬೇಕು? :
- ಗಟ್ಟಿಯಾದ ಆಹಾರಗಳು ಘನ ಮತ್ತು ಗಟ್ಟಿಯಾದ ಆಹಾರಗಳು ಬ್ರೇಸ್‌ಗಳನ್ನು ತುಂಡುಮಾಡಬಹುದಾದ ಮತ್ತು ಹಾನಿಗೊಳಿಸಬಹುದಾದ ಸಾಧ್ಯತೆ ಇರುವುದರಿಂದ ಅವುಗಳನ್ನು ವರ್ಜಿಸಬೇಕು. ತಾಜಾ ತರಕಾರಿಗಳು ಮತ್ತು ಗಟ್ಟಿಯಾದ ಹಣ್ಣುಗಳನ್ನು ಸಣ್ಣ ತುಂಡುಗಳಾಗಿ ಮಾಡಿ ನಿಧಾನವಾಗಿ ಹಿಂಭಾಗದ ಹಲ್ಲುಗಳ ಮೂಲಕ ಜಗಿಯಬೇಕು.
- ಸಕ್ಕರೆ ಬೆರೆತ ಸಿಹಿಗಳು/ ಪಾನೀಯಗಳು ಇವುಗಳು ಹಲ್ಲುಗಳಿಗೆ ಹಾನಿ ಉಂಟು ಮಾಡಬಲ್ಲವು. ಹುಳುಕಾಗುವ ಕಲೆಗಳು ಎಂದು ಕರೆಯಲ್ಪಡುವ, ಹಲ್ಲುಗಳ ಮೇಲೆ ಬಿಳಿ ಅಥವಾ ಕಂದು ಕಲೆಗಳನ್ನು ಉಂಟು ಮಾಡುತ್ತವೆ. ಇವುಗಳನ್ನು ತೆಗೆದುಹಾಕಲು ಸಾಧ್ಯವಾಗುವುದಿಲ್ಲ ಮತ್ತು ಇವು ಹಲ್ಲು ಹುಳುಕಿಗೆ ಕಾರಣವಾಗುತ್ತವೆ. ಇವುಗಳ ಸೇವನೆ ಕನಿಷ್ಠ ಮಟ್ಟದಲ್ಲಿರಲಿ, ವಿಶೇಷವಾಗಿ ಎರಡು ಭೋಜನ/ ಉಪಾಹಾರಗಳ ನಡುವೆ ಸೇವನೆ ಬೇಡ.