Advertisement

ಪಿಎಂಇಜಿಪಿ ಯೋಜನೆಯ ಸೌಲಭ್ಯ ಪಡೆದುಕೊಳ್ಳಿ; ಶ್ರೀನಿವಾಸ ರೆಡ್ಡಿ

06:19 PM May 27, 2022 | Team Udayavani |

ಕೋಲಾರ: ಭಾರತ ಸರ್ಕಾರ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಉದ್ಯೋಗ ಯೋಜನೆ ಮತ್ತು ಪ್ರಧಾನ ಮಂತ್ರಿ ರೋಜ್‌ಗಾರ್‌ ಯೋಜನೆಯನ್ನು ಒಂದುಗೂಡಿಸಿ ಹೊಸದಾಗಿ ಪ್ರಧಾನ ಮಂತ್ರಿಯವರ ಉದ್ಯೋಗ ಸೃಜನ ಯೋಜನೆಯಡಿ (ಪಿಎಂಇಜಿಪಿ) ಲಭ್ಯವಿರುವ ಸೌಲಭ್ಯಗಳನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನೀರ್ದೇಶಕ ಶ್ರೀನಿವಾಸ ರೆಡ್ಡಿ ತಿಳಿಸಿದರು.

Advertisement

ಜಿಲ್ಲಾ ಕೈಗಾರಿಕಾ ಕೇಂದ್ರದ ಸಭಾಂಗಣದಲ್ಲಿ, ಕೋಲಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಯಿಂದ ಹಮ್ಮಿಕೊಂಡಿದ್ದ, ಪ್ರಧಾನ ಮಂತ್ರಿಯವರ ಉದ್ಯೋಗ ಸೃಜನ ಯೋಜನೆಯಡಿ (ಪಿಎಂಇಜಿಪಿ) ಅರಿವು ಮೂಡಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿರುದ್ಯೋಗ ಯುವಕ-ಯುವತಿಯರಿಗೆ ಉದ್ಯೋಗ ನೀಡುವ ದೃಷ್ಟಿಯಿಂದ ಅವರ ಭವಿಷ್ಯ ರೂಪಿಸಿಕೊಳ್ಳಲು ಈ ಯೋಜನೆಯಡಿ ಸಾಲ ನೀಡಲಾಗುತ್ತದೆ.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲದೆ ಖಾಸಗಿ ಬ್ಯಾಂಕ್‌ ಗಳಿಂದಲೂ ಈ ಯೋಜನೆಯಡಿ ಸಾಲ ನೀಡಲಾಗುತ್ತದೆ. ಫಲಾನುಭವಿಗಳು ಯಾವುದೇ ತೊಂದರೆಗಳಿದ್ದರೆ ಅರ್ಜಿ ಮೂಲಕ ನೀಡಿದರೆ ಅಂಥ ಸಮಸ್ಯೆ ಬಗೆಹರಿಸಲಾಗುವುದು ಎಂದರು. ಫಲಾನುಭವಿಗಳು ಎಲ್ಲಿ ವ್ಯಾಪಾರ ಮಾಡಲು ಇಚ್ಚಿಸುತ್ತಿರೋ ಅದನ್ನು ಗುರುತಿಸಿ ನಿಮ್ಮ ದಾಖಲೆಗಳು ಸರಿಯಾಗಿದೆಯೆ ಎಂದು ತಿಳಿದು, ಮುಂದಿನ ಹಂತಕ್ಕೆ ಕಳುಹಿಸಲಾಗುತ್ತದೆ.

ಸಾಲ ಪಡೆಯುವ ಫಲಾನುಭವಿಗಳು ನೇರವಾಗಿ ಅರ್ಜಿಗಳನ್ನು ಆನ್‌ಲೈನ್‌ ಮುಖಾಂತರ ಸರಿಯಾದ ದಾಖಲೆಗಳೊಂದಿಗೆ ಸಲ್ಲಿಸಬೇಕು. ನಗರ ಪ್ರದೇಶದಲ್ಲಿ ನೀವು ಕೈಗಾರಿಕೆ ಮತ್ತು ಉದ್ದಿಮೆಯನ್ನು ಸ್ಥಾಪಿಸಲು ಜನಸಂಖ್ಯಾ ಮಾಹಿತಿ ಬೇಡ. ಆದರೆ ಗ್ರಾಮೀಣ ಪ್ರದೇಶದಲ್ಲಿ ಇದರ ಅವಶ್ಯಕತೆ ಇರುತ್ತದೆ. ದಲ್ಲಾಳಿಗಳ ಮೊರೆ ಹೋಗದೆ ಫಲಾನುಭವಿಗಳೆ ನೇರವಾಗಿ ಬಂದು ಅರ್ಜಿಗಳನ್ನು ಸಲ್ಲಿಸಬೇಕು.

ಉದ್ದಿಮೆ ಸ್ಥಾಪಿಸಲು ಬ್ಯಾಂಕ್‌ನಲ್ಲಿ ಸಾಲಕ್ಕೆ ಅರ್ಜಿ ಹಾಕಿದಾಗ ಶೇ. 25 ರಷ್ಟು ತೆರಿಗೆ ಪಾವತಿ ಮಾಡಬೇಕು. ಇಲಾಖೆಯ ಮೂಲಕ ಹೋದರೆ ನಿಮಗೆ ಅದು ಶೇ. 5 ರಷ್ಟು ತೆರಿಗೆ ಇರುವುದು. ಇದನ್ನು ಎಲ್ಲರೂ ಬಳಸಿಕೊಳ್ಳಿ ಮತ್ತು ಸಾಲ ಪಡೆಯಲು ಅವಶ್ಯವಿರುವ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ತಿಳಿಸಿದರು.

Advertisement

ಲೀಡ್‌ ಬ್ಯಾಂಕ್‌ನ ವ್ಯವಸ್ಥಾಪಕ ಪಿಚ್ಚಯ್ಯ ಮಾತನಾಡಿ, ಪಿಎಂಇಜಿಪಿ ಯೋಜನೆಯಡಿ ಯಾವ ಯಾವ ಸೌಲಭ್ಯಗಳು ನಿಮಗೆ ಸಿಗುತ್ತದೆ ಎಂಬುದನ್ನು ಈ ಅರಿವು ಕಾರ್ಯಕ್ರಮವನ್ನು ಏರ್ಪಡಿಸಿದ್ದು, ವ್ಯವಸ್ಥಾಪಕರಿಗೆ ನಿಮ್ಮ ಮೇಲೆ ನಂಬಿಕೆ ಬರುವಂತೆ ಅವರೊಂದಿಗೆ ವರ್ತಿಸಬೇಕು. ಸಾಲದ ಮೊತ್ತ 10 ಲಕ್ಷವಿದ್ದರೇ ಯಾವುದೇ ತೊಂದರೆಯಾಗುವುದಿಲ್ಲ, ಹೆಚ್ಚಿನ ಮೊತ್ತವಾದರೆ ನಿಮ್ಮ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದು ಸಾಲ ನೀಡುತ್ತಾರೆ. ಈ ಯೋಜನೆಯಡಿ ಕೈಗಾರಿಕಾ ಸ್ಥಾಪನೆಗೆ ನೀಡಲಾಗುವ ಹಣದ ಮಿತಿ 25 ಲಕ್ಷ ರೂ.ಗಳಾಗಿರುತ್ತದೆ ಎಂದು ತಿಳಿಸಿದರು. ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಸಿಬ್ಬಂದಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next