Advertisement

“ಕಿರು ಸಾಲ ಕಲ್ಪಿಸಲು ಕ್ರಮ ವಹಿಸಿ’

08:58 PM Nov 13, 2020 | Suhan S |

ಬೀದರ: ಪ್ರಧಾನಮಂತ್ರಿ ಸ್ವನಿಧಿ  ಯೋಜನೆಯಡಿ ಬೀದಿ ಬದಿವ್ಯಾಪಾರಿಗಳಿಗೆ ಕಿರುಸಾಲ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌ ಸೂಚಿಸಿದರು.

Advertisement

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಧಾನಮಂತ್ರಿ ಸ್ವನಿಧಿ ಪ್ರಗತಿಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿ, ಜಿಲ್ಲೆಯಲ್ಲಿಬೀದಿ ಬದಿ ವ್ಯಾಪಾರಸ್ಥರಿಂದ 1939 ಅರ್ಜಿ ಸಲ್ಲಿಕೆಯಾಗಿದ್ದು, 238 ಅರ್ಜಿಇತ್ಯರ್ಥವಾಗಿವೆ. ಬಾಕಿ ಉಳಿಅರ್ಜಿಗಳ ವಿಲೇವಾರಿಗೆ ಗಮನ ಹರಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶದ ಬೀದಿ ಬದಿ ವ್ಯಾಪಾರಿಗಳು ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಸಂಕಷ್ಟ ಎದುರಿಸಿದ್ದಾರೆ. ಅವರಿಗೆಸ್ಪಂದಿಸಬೇಕಿದೆ. ಹೀಗಾಗಿ ವಿವಿಧಬ್ಯಾಂಕ್‌ಗಳಲ್ಲಿ ಬಾಕಿ ಉಳಿದ ಅರ್ಜಿ ತ್ವರಿತಗತಿಯಲ್ಲಿ ಇತ್ಯರ್ಥಗೊಳಿಸಬೇಕು ಎಂದು ಬ್ಯಾಂಕ್‌ ಅಧಿಕಾರಿಗಳಿಗೆ ಸೂಚಿಸಿದರು.

ಬೀದರ ಡಿಯುಡಿಸಿಪಿಡಿ ಶರಣಬಸಪ್ಪ ಕೊಟಪ್ಪಗೋಳ ಮಾತನಾಡಿ, ನಗರ ಹಾಗೂ ಪಟ್ಟಣ ಪ್ರದೇಶದ ಸ್ಥಳೀಯ ಸಂಸ್ಥೆ ಮುಖ್ಯಾಧಿಕಾರಿಗಳು ಬ್ಯಾಂಕ್‌ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಅರ್ಜಿ ಹಾಕಿದ ಬೀದಿ ಬದಿ ವ್ಯಾಪಾರಿಗಳಿಗೆ ಕಿರು ಸಾಲ ಸೌಲಭ್ಯ ದೊರೆಯುವಂತೆ ನೋಡಿಕೊಳ್ಳಬೇಕು ಎಂದರು.

ಈ ವೇಳೆ ಸಹಾಯಕ ಆಯುಕ್ತೆ ಗರೀಮಾ ಪನ್ವಾರ್‌, ಲೀಡ್‌ ಬ್ಯಾಂಕ್‌  ವ್ಯವಸ್ಥಾಪಕ ಬಿ.ಎಂ. ಕಮತಗಿ, ಪೌರಾಯುಕ್ತ ರವಿಂದ್ರನಾಥ ಅಂಗಡಿ, ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಗೂ ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರು ಇದ್ದರು.

Advertisement

ಬೆಳೆ ದರ್ಶಕ ಆ್ಯಪ್‌ನಲ್ಲಿ ಮಾಹಿತಿ ಲಭ್ಯ :

ಬೀದರ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿನ ಬೆಳೆ ಸಮೀಕ್ಷೆ ಶೇ.99.65 ಪೂರ್ಣಗೊಂಡಿದೆ. ರೈತರು ಸ್ವತಃ ತಮ್ಮ ಜಮೀನಿನ ಬೆಳೆ ದಾಖಲಿಸಿರುವ ಹಾಗೂ ಸ್ಥಳಿಯ ನಿವಾಸಿಗಳು ದಾಖಲಿಸಿರುವ ಸಮೀಕ್ಷೆ ವಿವರ ರೈತರು ಪಡೆಯಲು ಇಲಾಖೆಯು ಬೆಳೆ ದರ್ಶಕ ಆ್ಯಪ್‌ ಬಿಡುಗಡೆ ಮಾಡಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ.ಎಚ್‌ ಹೇಳಿದ್ದಾರೆ.

ಬೆಳೆ ದರ್ಶ2020-21 ಹೆಸರಿನ ಈ ಮೊಬೈಲ್‌ ಆ್ಯಪ್‌ ಮೂಲಕ ರೈತರು ಅಪ್ಲೋಡ್‌ ಆಗಿರುವ ತಮ್ಮ ಬೆಳೆಗಳ ಮಾಹಿತಿ ಪಡೆಯಬಹುದು. ಅಲ್ಲದೇ ಅಪ್ಲೋಡ್‌ ಆದ ವಿವರಗಳು ಸರಿಯಾಗಿವೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿ ಕೊಳ್ಳಬಹುದು. ಆಕ್ಷೇಪಣೆಗಳಿದ್ದರೆ ನ.16ರೊಳಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಈ ಬೆಳೆ ಸಮೀಕ್ಷೆ ಮಾಹಿತಿಯಿಂದ ಕನಿಷ್ಟ ಬೆಂಬಲಬೆಲೆ, ಅತಿವೃಷ್ಟಿ, ಅನಾವೃಷ್ಟಿಯಿಂದ  ರೈತರಿಗೆ ಬೆಳೆ ಪರಿಹಾರ, ಸಬ್ಸಿಡಿ, ಬೆಳೆ ವಿಮೆ, ಬೆಳೆ ಸಾಲ ಹಾಗೂ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಯೋಜನೆಗಳ ಸೌಲಭ್ಯ ಪಡೆಯಲು ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next