Advertisement

ಡೆಂಗ್ಯೂ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ : ಸಚಿವ ಅಂಗಾರ

11:47 PM May 16, 2022 | Team Udayavani |

ಕೊಲ್ಲೂರು: ಮುದೂರು ಮತ್ತು ಜಡ್ಕಲ್‌ ವ್ಯಾಪ್ತಿಯಲ್ಲಿ ಹೆಚ್ಚುತ್ತಿ ರುವ ಡೆಂಗ್ಯೂ ನಿಯಂತ್ರಿ ಸಲು ಅಗತ್ಯ ವಿರುವ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಅಂಗಾರ ಸೂಚನೆ ನೀಡಿದರು.

Advertisement

ಅವರು ಸೋಮವಾರ ಕೊಲ್ಲೂರು ವ್ಯಾಪ್ತಿಯ ಮುದೂರು ಮತ್ತು ಜಡ್ಕಲ್‌ನ ಡೆಂಗ್ಯೂ ಪೀಡಿತ ಮನೆಗಳಿಗೆ ಭೇಟಿ ನೀಡಿ ಮಾತನಾಡಿದರು.

ಆಶಾ-ಆರೋಗ್ಯ ಕಾರ್ಯಕರ್ತರು ಪ್ರತೀ ಮನೆಗೆ ಭೇಟಿ ನೀಡಿ, ಸ್ವಚ್ಛತೆ ಕಾಪಾಡುವ ಮತ್ತು ನೀರು ಶೇಖರ ವಾಗದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಬೇಕು. ಸೊಳ್ಳೆ ಪರದೆ ಮತ್ತು ಡಿಎಂಪಿ ತೈಲವನ್ನು ನೀಡುವಂತೆ, ನಿರಂತರ ಫಾಗಿಂಗ್‌ ಮಾಡುವಂತೆ ಸೂಚಿಸಿದರು.

ಇದನ್ನೂ ಓದಿ:ರಾಷ್ಟ್ರೀಯ ಡೆಂಗ್ಯೂ ದಿನ: ಕೀಟಜನ್ಯ ರೋಗ ಜಾಗೃತಿ

ಇಲ್ಲಿ ಜನವರಿಯಿಂದ ಡೆಂಗ್ಯೂ ಪ್ರಕರಣಗಳು ಕಂಡುಬರುತ್ತಿದ್ದು, 113 ಪ್ರಕರಣಗಳು ವರದಿಯಾಗಿವೆ. ಪ್ರಸ್ತುತ 47 ಸಕ್ರಿಯ ಪ್ರಕರಣಗಳಿವೆ. ಚಿಕಿತ್ಸೆಗಾಗಿ ಕುಂದಾಪುರ ತಾ. ಆಸ್ಪತ್ರೆಯಲ್ಲಿ ಒಟ್ಟು 60 ಬೆಡ್‌ಗಳ ವಿಶೇಷ ವಾರ್ಡ್‌ ತೆರೆಯಲಾಗಿದೆ.

Advertisement

ಶಾಸಕ ಸುಕುಮಾರ ಶೆಟ್ಟಿ, ಬ್ಲಾಕ್‌ ಬಿಜೆಪಿ ಅಧ್ಯಕ್ಷ ದೀಪಕ್‌ ಕುಮಾರ್‌ ಶೆಟ್ಟಿ, ಜಡ್ಕಲ್‌ ಗ್ರಾ.ಪಂ. ಅಧ್ಯಕ್ಷೆ ವನಜಾಕ್ಷಿ ಶೆಟ್ಟಿ, ಉಪಾಧ್ಯಕ್ಷ ಲಕ್ಷ್ಮಣ ಶೆಟ್ಟಿ, ಕುಂದಾಪುರ ಎಸಿ ರಾಜು, ತಹಸೀಲ್ದಾರ್‌ ಶೋಭಾಲಕ್ಷ್ಮೀ, ಅಧಿ ಕಾರಿಗಳಾದ ಡಾ| ಚಿದಾನಂದ ಸಂಜು, ಡಾ| ರಾಜೇಶ್ವರಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next