Advertisement
ಸೋಮವಾರ ಪಟ್ಟಣದ ತಾಪಂ ಸಭಾಂಗಣದಲ್ಲಿ ಕೊರೊನಾ ವೈರಸ್ ತಡೆಗಟ್ಟುವ ಸಂಬಂಧ ನಡೆದ ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳ ಹಾಗೂ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ವೈರಸ್ ಸಂಬಂಧ ಮೊದಲು ಅಧಿಕಾರಿಗಳು ತಿಳಿದುಕೊಂಡರೇ, ನಾಗರಿಕರಿಗೆ ಜಾಗೃತಿ ಮೂಡಿಸಲು ಸಾಧ್ಯವಾಗುತ್ತದೆ ಎಂದು ದಿಸೆಯಲ್ಲಿ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದರು.
Related Articles
Advertisement
ಎಲ್ಲರೂ ಎಚ್ಚರ ವಹಿಸಿ: ಉದ್ಯೋಗ, ಪ್ರವಾಸ ಸೇರಿದಂತೆ ಇತರೆ ವಿಷಯಗಳಿಗೆ ತಾಲೂಕಿನಿಂದ ದುಬೈ ಹಾಗೂ ಇತರೆ ದೇಶಗಳಿಗೆ ಹೋಗಿ ವಾಪಸ್Õ ಬರುವವರ ಹೆಸರುಗಳನ್ನು ಪಟ್ಟಿ ಮಾಡಿ ವೈರಸ್ ಸಂಬಂಧ ತಪಾಸಣೆಗೆ ಒಳಪಡಿಸಬೇಕೆಂದು ಆರೋಗ್ಯಾಧಿಕಾರಿಗೆ ಸೂಚಿಸಿದ ಶಾಸಕರು, ಅನಾವಶ್ಯಕವಾಗಿ ಬೆಂಗಳೂರಿಗೆ ಹೊಗುವುದನ್ನು ನಿಲ್ಲಿಸಿ ಎಂದು ಜನರಿಗೆ ಮನವಿ ಮಾಡಿದರು.
ಪ್ರಾಣಿ ಹಿಂಸೆ ನಿಷೇಧಿಸಿ: ಮಾಂಸ ಬೇಯಿಸಿ ತಿನ್ನುವುದರಿಂದ ಕೊರೊನಾ ಬರುವುದಿಲ್ಲ, ಆದರೆ ದೇವರ ಹೆಸರಿನಲ್ಲಿ ಪ್ರಾಣಿಗಳನ್ನು ಹಲ್ಲಿನಿಂದ ಸಿಗಿದು ಹಸಿ ಮಾಂಸ ತಿನ್ನುವುದರಿಂದ ವೈರಸ್ ಬರುವ ಸಾಧ್ಯತೆ ಇದೆ. ಹೀಗಾಗಿ ಇದನ್ನು ನಿಷೇಧಿಸಬೇಕೆಂದು ಡಾ.ರಂಗನಾಥ್ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ ಜಾತ್ರೆಗಳನ್ನು ಸರಳವಾಗಿ ಆಚರಣೆ ಮಾಡಲು ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ಜಾಗೃತಿ ಸಭೆ: ವೈರಸ್ ತಗಲಿ ಜನರಿಗೆ ಏನಾದರೂ ತೊಂದರೆ ಉಂಟಾದರೆ ಅದನ್ನು ಸಹಿಸಲು ನನ್ನಿಂದ ಸಾಧ್ಯವಾಗುವುದಿಲ್ಲ ಎಂದು ನೋವಿನಂದ ಹೇಳಿದ ಶಾಸಕರು ಈ ನಿಟ್ಟಿನಲ್ಲಿ ಗ್ರಾಪಂ ಅಧಿಕಾರಿಗಳು ಹಾಗೂ ಸ್ಥಳೀಯ ಜನ ಪ್ರತಿನಿಧಿಗಳು ಒಗ್ಗೂಡಿ ಗ್ರಾಮಗಳಲ್ಲಿ ಸಭೆ ಸೇರಿಸಿ ಅಲ್ಲಿ ವೈರಸ್ ತಡೆಗಟ್ಟುವ ಸಂಬಂಧ ಜನ ಜಾಗೃತಿ ಮೂಡಿಸಬೇಕು. ಜತೆಗೆ ಪಟ್ಟಣದ 23 ವಾರ್ಡ್ ಸೇರಿದಂತೆ ಗ್ರಾಮಗಳ ಸ್ವತ್ಛತೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕರು ಅಧಿಕಾರಿಗಳಿಗೆ ತಾಕೀತು ಮಾಡಿಸಿದರು.
ಶೇ.100 ರಲ್ಲಿ ಕೇವಲ ಶೇ.5 ರಷ್ಟು ಮಾತ್ರ ವೈರಸ್‌ನಿಂದ ಜನರು ಮೃತಪಟ್ಟಿದ್ದಾರೆ. 95 ಜನರು ರೋಗದಿಂದ ಮುಕ್ತರಾಗಿದ್ದಾರೆ ಇದನ್ನು ಜನರಿಗೆ ತಿಳಿ ಹೇಳಿ ಅವರಲ್ಲಿ ಧೈರ್ಯ ತುಂಬಬೇಕು ಎಂದು ಹೇಳಿದರು. ಸಭೆಯಲ್ಲಿ ತಾಪಂ ಇಒ ಶಿವರಾಜಯ್ಯ, ತಾಲೂಕು ಆರೋಗ್ಯಾಧಿಕಾರಿ ಜಗದೀಶ್, ಸಿಪಿಐ ನಿರಂಜನ್‌ಕುಮಾರ್, ಆಡಳಿತ ವೈದ್ಯಾಧಿಕಾರಿ ಗಣೇಶ್‌ಬಾಬು ಇತರರು ಇದ್ದರು.
ಕೋಳಿ ಅಂಗಡಿ ಬಂದ್‌ಗೆ ಸೂಚನೆ: ಮಾವಿನಕಟ್ಟೆ ಪಾಳ್ಯ ಗ್ರಾಮದಲ್ಲಿ ಇಬ್ಬರು ಮಕ್ಕಳ ಮೇಲೆ ನಾಯಿ ದಾಳಿ ನಡೆಸಿ ಗಾಯಗೊಳಿಸಿರುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರು, ಈ ಹಿಂದೆ ನಾಯಿ ದಾಳಿ ನಡೆಸಿ ಬಾಲಕಿಯನ್ನು ಸಾಯಿಸಿರುವ ಬೆನ್ನಲೆ ಮತ್ತೆ ಇಬ್ಬರು ಮಕ್ಕಳ ಮೇಲೆ ಬೀದಿ ನಾಯಿ ದಾಳಿ ನಡೆಸಿದೆ, ಇದಕ್ಕೆ ಕಾರಣವೇನು ಎಂದು ಶಾಸಕರು ಪಿಡಿಒ ಅವರನ್ನು ಪ್ರಶ್ನಿಸಿದರು,
ಪಟ್ಟಣದ ಕೋಳಿ ಅಂಗಡಿ ವ್ಯಾಪಾರಿಗಳು ಕೋಳಿ ತಾಜ್ಯವನ್ನು ದೊಡ್ಡಕೆರೆ ಏರಿ ಹಾಗೂ ಮಾವಿನಕಟ್ಟೆಪಾಳ್ಯದ ಹಾಸು ಪಾಸಿನಲ್ಲಿ ತಂದು ಹಾಕುತ್ತಿದ್ದಾರೆ. ಈ ತ್ಯಾಜ್ಯವನ್ನು ತಿನ್ನಲು ಬರುವ ನಾಯಿಗಳು ಮಕ್ಕಳ ಮೇಲೆ ದಾಳಿ ನಡೆಸುತ್ತಿವೆ ಎಂದು ಪಿಡಿಒ ತಿಳಿಸಿದರು, ಇದರಿಂದ ಕೆಂಡಾಮಂಡಲರಾದ ಶಾಸಕರು ಕೂಡಲೇ ಅಂಗಡಿ ವ್ಯಾಪಾರಿಗಳ ಸಭೆ ಕರೆದು ತಿಳಿವಳಿಕೆ ಹೇಳಬೇಕು, ತಪ್ಪಿದಲ್ಲಿ ಅಂಗಡಿಗಳನ್ನು ಮೂಲಾಜಿಲ್ಲದೆ ಮುಚ್ಚಿಸುವಂತೆ ತಹಶೀಲ್ದಾರ್ ವಿ.ಆರ್.ವಿಶ್ವನಾಥ್‌ಗೆ ಸೂಚಿಸಿದರು.