Advertisement

ಅಕ್ರಮ ಮದ್ಯ ಮಾರಾಟ ತಡೆಗೆ ಕ್ರಮ ಕೈಗೊಳ್ಳಿ

09:14 AM Feb 15, 2019 | Team Udayavani |

ಅಜ್ಜಂಪುರ: ತಾಲೂಕಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ತಡೆಯುಂತೆ ಸಾರ್ವಜನಿಕರು ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಮಾಡಿದರು.

Advertisement

ಅಜ್ಜಂಪುರದಲ್ಲಿ ಬುಧವಾರ ನಡೆದ ನಡೆದ ಜನಸಂಪರ್ಕ ಸಭೆಯಲ್ಲಿ ಈ ಮನವಿ ಮಾಡಲಾಯಿತು. ಕಾಟಿಗನೆರೆ ಗ್ರಾಮದ ಮಂಜಪ್ಪ ಮಾತನಾಡಿ,
ಅಜ್ಜಂಪುರದಲ್ಲಿ ಅಪಘಾತ ನಡೆದಿದ್ದು, ಯಾವುದೇ ನ್ಯಾಯ ಸಿಕ್ಕಿಲ್ಲ. ಮೃತರ ಕುಟುಂಬಕ್ಕೆ ನ್ಯಾಯ ದೊಕಿಸಿಕೊಡುವಂತೆ ಮನವಿ ಮಾಡಿದರು.

ವೆಂಕಟೇಶ್‌ ಮಾತನಾಡಿ, ಅಜ್ಜಂಪುರದಲ್ಲಿ ಸೋಮವಾರ ಟಿ.ಎಚ್‌. ರಸ್ತೆಯಲ್ಲಿ ವಾಹನ ನಿಲುಗಡೆಯಿಂದ ಸಂಚಾರಕ್ಕೆ ಅಡ್ಡಿ ಆಗಿದೆ. ಇನ್ನು ಬಸ್‌ ನಿಲ್ದಾಣದೊಳಗೆ ದ್ವಿಚಕ್ರ ವಾಹನ ನಿಲುಗಡೆಯಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ ಎಂದರು.

ನಂದೀಪುರ ಗ್ರಾಮದ ಗೋವಿಂದ ಮಾತನಾಡಿ, ತಾಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟ ತಡೆಯುವಲ್ಲಿ ಪೊಲೀಸ್‌ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿದರು. ಚೇತನ್‌ ಮಾತನಾಡಿ, ಪೊಲೀಸರು ಇರಿಸಿರುವ ಬ್ಯಾರಿಕೇಡ್ಗಳಿಗೆ ರಿಪ್ಲೆಕ್ಟರ್‌ ಅಳವಡಿಸುವಂತೆ ಆಗ್ರಹಿಸಿದರು.
ಲೋಕೇಶ್‌ ಮಾತನಾಡಿ, ಹ್ಯಾಲೋಜಿನ್‌ ಬಲ್ಫ್ ಬಳಸಿರುವ ವಾಹನಗಳ ಮಾಲೀಕರಿಗೆ ದಂಡ ವಿಧಿಸುವಂತೆ ಒತ್ತಾಯಿಸಿದರು.

ತಹಶೀಲ್ದಾರ್‌ ವಿಶ್ವೇಶ್ವರ ರೆಡ್ಡಿ ಮಾತನಾಡಿ, ತಾಲೂಕು ಕಚೇರಿ ಬಳಿ ಕುಡುಕರ ಹಾವಳಿ ವಿಪರೀತವಾಗಿದ್ದು, ಅವರನ್ನು ನಿಯಂತ್ರಿಸುವಂತೆ ಮನವಿ ಮಾಡಿದರು.

Advertisement

ಪೊಲೀಸ್‌ ವರಿಷ್ಠಾಧಿಕಾರಿ ಹರೀಶ್‌ ಪಾಂಡೆ ಮಾತನಾಡಿ, ಇಂದಿನ ಸಭೆಯಲ್ಲಿ ಅಕ್ರಮ ಮದ್ಯ ಮಾರಾಟದ ಬಗ್ಗೆ ಹೆಚ್ಚಿನ ದೂರುಗಳು ಬಂದಿದೆ. ಕಠಿಣ ಕ್ರಮ ಕೈಗೊಂಡಾಗ ಮಾತ್ರ ನಿಯಂತ್ರಣ ಸಾಧ್ಯ. ಈ ಬಗ್ಗೆ ಅ ಧಿಕಾರಿಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕರು ಸಹ ನಮ್ಮ ಜೊತೆ ಕೈಜೋಡಿಸಿದಾಗ ಅಕ್ರಮ ತಡೆಗಟ್ಟಬಹುದು ಎಂದು ತಿಳಿಸಿದರು. ಅಜ್ಜಂಪುರ ಪಿಎಸ್‌ಐ ರಫಿಕ್‌ ಮಾತನಾಡಿ, ಅಪರಾಧ ತಡೆ ಮಾಸಾಚರಣೆ ಹಿನ್ನೆಲೆಯಲ್ಲಿ ಕಾರ್ಯಕ್ರಮ
ಆಯೋಜಿಸಲಾಗಿದೆ. ಅಜ್ಜಂಪುರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಬಸ್‌ ನಿಲ್ದಾಣದ ಸಮೀಪ ಶೀಘ್ರವೇ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು. ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಅಪರಾಧ ತಡೆ ಹಾಗೂ ಕಾನೂನು ಅರಿವು ಕುರಿತ ಬೀದಿ ನಾಟಕ ಪ್ರದರ್ಶಿಸಿದರು.

ಡಿವೈಎಸ್‌ಪಿ ತಿರುಮಲೇಶ್‌, ಪ್ರಬಾರಿ ಡಿವೈಎಸ್‌ಪಿ ಉಮಾಶಂಕರ್‌, ತರೀಕೆರೆ ವೃತ್ತ ನೀರಿಕ್ಷಕ ರಾಮಚಂದ್ರ ನಾಯ್ಕ, ಅಜ್ಜಂಪುರ ಗ್ರಾಪಂ ಅಧ್ಯಕ್ಷೆ ಚೆನ್ನಬಸಮ್ಮ, ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next