Advertisement

ರಜೆಯಲ್ಲಿ ತರಗತಿ ನಡೆಸಿ ಪಠ್ಯ ಪೂರ್ಣಗೊಳಿಸಿ: ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌

12:06 AM Oct 09, 2021 | Team Udayavani |

ಕೋಟ: ಕೋವಿಡ್‌ ಕಾರಣದಿಂದ ತರಗತಿ ಆರಂಭ ವಿಳಂಬವಾಗಿದ್ದರೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪಠ್ಯಕಡಿತ ಮಾಡುವ ಚಿಂತನೆ ಸರಕಾರದ ಮುಂದಿಲ್ಲ. ಮುಂದಿನ ವರ್ಷ ಶೈಕ್ಷಣಿಕ ವೇಳಾಪಟ್ಟಿಯಂತೆಯೇ ಪರೀಕ್ಷೆ, ತರಗತಿಗಳನ್ನು ಆರಂಭಿಸಬೇಕು ಎನ್ನುವ ಉದ್ದೇಶವಿದ್ದು, ಇದಕ್ಕಾಗಿ ಶನಿವಾರ, ರವಿವಾರ ಮತ್ತು ರಜಾ ದಿನಗಳಲ್ಲೂ ತರಗತಿ ಗಳನ್ನು ನಡೆಸಿ ಪಠ್ಯಕ್ರಮವನ್ನು ಆದಷ್ಟು ಶೀಘ್ರ ಪೂರ್ತಿಗೊಳಿಸಬೇಕು ಎಂದು ಶಿಕ್ಷಕ ಮಿತ್ರರಲ್ಲಿ ವಿನಂತಿಸಿ ಕೊಂಡಿದ್ದೇನೆ.ಶಿಕ್ಷಕರಿಂದಲೂ ಪೂರಕ ಪ್ರತಿಕ್ರಿಯೆ ಬಂದಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದರು.

Advertisement

ಕೋಟ ಮಣೂರು-ಪಡುಕರೆ ಸರಕಾರಿ ಸಂಯುಕ್ತ ಪ್ರೌಢಶಾಲೆಗೆ ಭೇಟಿ ನೀಡಿದ ಸಂದರ್ಭ ಮಾಧ್ಯಮ ಗಳೊಂದಿಗೆ ಅವರು ಮಾತನಾಡಿದರು. ಕೋವಿಡ್‌ ಪರಿಣಾಮದಿಂದಾಗಿ ಪಠ್ಯ ಚಟುವಟಿಕೆಗೆ ಸಾಕಷ್ಟು ಹಿನ್ನಡೆಯಾಗಿದೆ. ಹೀಗಾಗಿ ಪಿಯುಸಿ, ಪದವಿ ತರಗತಿಗಳಿಗೆ ದಸರಾ ರಜೆಯನ್ನು ನೀಡಬಾರದು ಎನ್ನುವುದು ಶಿಕ್ಷಣ ಇಲಾಖೆಯ ಬಯಕೆಯಾಗಿತ್ತು.

ಆದರೆ ಈಗ ಹಬ್ಬದಲ್ಲಿ ಭಾಗವಹಿಸಬೇಕು ಎನ್ನುವ ಬೇಡಿಕೆ ಕೇಳಿಬರುತ್ತಿರುವುದರಿಂದ ರಜೆಯನ್ನು ಈ ವಿಭಾಗಕ್ಕೂ ವಿಸ್ತರಿಸುವ ಚಿಂತನೆ ಇದೆ ಎಂದರು.

ಇದನ್ನೂ ಓದಿ:ಐಟಿ ದಾಳಿಗೆ ಮುಖ್ಯಮಂತ್ರಿ ಉತ್ತರದಾಯಿ: ಕಾಂಗ್ರೆಸ್‌ ಟ್ವೀಟ್‌

ಎನ್‌.ಇ.ಪಿ. ವಿಸ್ತರಣೆ
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈಗಾಗಲೇ ಪದವಿ ಹಂತದಲ್ಲಿ ಜಾರಿಗೆ ತರಲಾಗಿದೆ. ಇದನ್ನು ಪಿಯುಸಿ ಮತ್ತು ಪ್ರೌಢಶಾಲೆ ಮುಂತಾದ ಕೆಳಹಂತದ ವಿಭಾಗಗಳಿಗೂ ವಿಸ್ತರಿಸುವ ಉದ್ದೇಶವಿದೆ. ಈ ಬಗ್ಗೆ ಟಾಸ್ಕ್ ಪೋರ್ಸ್‌ಗಳನ್ನು ರಚಿಸಲಾಗಿದ್ದು, ಅವು ಸಾಧಕ-ಬಾಧಕಗಳನ್ನು ಅಧ್ಯಯನ ನಡೆಸಿ ಸರಕಾರಕ್ಕೆ ನೀಡಲಿವೆ. ಅನಂತರ ಕೆಳಹಂತಕ್ಕೂ ಇದನ್ನು ವಿಸ್ತರಿಸಲಾಗುತ್ತದೆ ಎಂದರು.

Advertisement

ದಸರಾ ಬಳಿಕ 1ನೇ ತರಗತಿ ಆರಂಭ
ದಸರಾ ಅನಂತರ 1ನೆಯಿಂದ ಎಲ್ಲರಿಗೂ ಭೌತಿಕ ತರಗತಿಗಳನ್ನು ಆರಂಭಿಸುವ ನಿರ್ಧಾರದಲ್ಲಿ ಬದಲಾವಣೆ ಇಲ್ಲ. ಬಿಸಿಯೂಟವನ್ನೂ ಆರಂಭಿಸ ಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next