ವಾಷಿಂಗ್ಟನ್: ಒಂದು ಕಂಪನಿಯ ಕೆಲಸ ಬಿಟ್ಟು ಇನ್ನೊಂದು ಕಂಪನಿ ಸೇರಬೇಕೆಂದರೆ ನೋಟಿಸ್ ಪೀರಿಯಡ್ ಮುಗಿಸಲೇಬೇಕು. ಅಮೆರಿಕದ ಈ ಕಂಪನಿ ತಮ್ಮ ಕಂಪನಿಯಿಂದ ಬೇರೆ ಕಂಪನಿ ಸೇರುವ ಸಿಬ್ಬಂದಿಗೆ ಅವರ ನೋಟಿಸ್ ಪಿರಿಯೆಡ್‌ನಲ್ಲಿ ಹೆಚ್ಚು ವೇತನ ಕೊಡುವ ಮೂಲಕ ಎಲ್ಲರ ಗಮನ ಸೆಳೆದಿದೆ.
“ಗೊರಿಲ್ಲಾ’ ಹೆಸರಿನ ಮಾರ್ಕೆಟಿಂಗ್ ಕಂಪನಿ ಈ ರೀತಿಯ ನಿಯಮವನ್ನು ಜಾರಿಗೆ ತಂದಿದೆ. ಆ ಸಂಸ್ಥೆಯಿಂದ ಬೇರೆ ಯಾವುದೇ ಕಡೆ ಹೋಗುವ ಸಿಬ್ಬಂದಿಗೆ ಅವರ ನೋಟಿಸ್ ಪಿರಿಯೆಡ್‌ನಲ್ಲಿ ಶೇ.10 ಹೆಚ್ಚು ವೇತನ ಕೊಡಲಾಗುವುದು. ಸಿಬ್ಬಂದಿ ಕನಿಷ್ಠ 6 ವಾರಗಳಿಂದ ಗರಿಷ್ಠ 3 ತಿಂಗಳ ವರೆಗೆ ನೋಟಿಸ್ ಪೀರಿಯಡ್ ಅನ್ನು ಮಾಡಬೇಕು ಎಂದಿದೆ ಸಂಸ್ಥೆ.
“ನಮ್ಮ ಕಂಪನಿಯ ಸಿಬ್ಬಂದಿ ನಮ್ಮೊಂದಿಗೇ ಇರಬೇಕೆನ್ನುವುದು ನಮ್ಮ ಆಸೆ. ಆದರೆ ಆ ಸಿಬ್ಬಂದಿ ತಮ್ಮ ನಿವೃತ್ತಿವರೆಗೂ ನಮ್ಮಲ್ಲೇ ಇರುತ್ತಾರೆ ಎಂದುಕೊಳ್ಳುವುದು ಮೂರ್ಖತನವಾಗುತ್ತದೆ.
ಹಾಗಾಗಿ ನಾವು ನಮ್ಮ ಕಂಪನಿ ಕೆಲಸ ಇಷ್ಟವಾಗದೆ, ನಮ್ಮನ್ನು ಬಿಟ್ಟು ಹೋಗುವವರಿಗೂ ಅಷ್ಟೇ ಗೌರವ ಕೊಡುತ್ತೇವೆ. ಅವರ ಕಂಪನಿ ಬದಲಾವಣೆ ಸುಲಲಿತವಾಗಿರಲಿ ಎನ್ನುವ ಕಾರಣಕ್ಕೆ ಹೆಚ್ಚು ವೇತನ ಕೊಡುತ್ತೇವೆ. ಇದರಿಂದ ಅವರು ನಮ್ಮ ಕಂಪನಿಯನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುತ್ತಾರೆ’ ಎನ್ನುತ್ತಾರೆ ಗೊರಿಲ್ಲಾದ ಸಂಸ್ಥಾಪಕ ಜಾನ್ ಫ್ರಾಂಕೋ.