Advertisement

ತೈವಾನ್‌ ದ್ವೀಪದ ಅಂತರ್ಜಾಲ ಕೇಬಲ್‌ ಕತ್ತರಿಸಿದ ಚೀನ !

10:38 PM Mar 08, 2023 | Team Udayavani |

ತೈಪೆ : ನೆರೆ ರಾಷ್ಟ್ರಗಳ ಜತೆಗೆ ಸದಾ ಕ್ಯಾತೆ ತೆಗೆಯುವ, ಭೂ ಅತಿಕ್ರಮಣಕ್ಕೆ ಹಪಾಹಪಿಸುವ ಚೀನಾ, ತೈವಾನ್‌ ಮೇಲಿನ ತನ್ನ ಉದ್ದೇಶಿತ ಕುತಂತ್ರ ಮುಂದುವರಿಸಿದ್ದು, ತೈವಾನ್‌ನ ದ್ವೀಪ ಪ್ರದೇಶದ ಜಲಾಂತರ್ಗಾಮಿ ಅಂತರ್ಜಾಲ ಸೇವೆಯ ಕೇಬಲ್‌ಗ‌ಳನ್ನು ಕತ್ತರಿಸಿಹಾಕಿದೆ.

Advertisement

14 ಸಾವಿರ ಮಂದಿ ವಾಸವಿರುವ ಮತ್ಸು ದ್ವೀಪವು 2 ಜಲಾಂತರ್ಗಾಮಿ ಅಂತರ್ಜಾಲ ಕೇಬಲ್‌ಗ‌ಳನ್ನು ಅವಲಂಬಿಸಿದ್ದು, ಚೀನಾದ ಕುತಂತ್ರದಿಂದ ಈಗ ಜನರು ಪರದಾಡುವಂತಾಗಿದೆ.

ಫೆ.2 ರಂದು ಚೀನ ಮೀನುಗಾರಿಕೆ ಹಡಗೊಂದು ದ್ವೀಪ ಪ್ರದೇಶದ 50 ಕಿ.ಮೀ. ಅಂತರದಲ್ಲಿ ಮೊದಲ ಕೇಬಲ್‌ ಕತ್ತರಿಸಿಹಾಕಿತ್ತು. ಈಗ ಮತ್ತೊಮ್ಮೆ ಚೀನ ತನ್ನ ಕುತಂತ್ರದಿಂದ ಫೆ.8ರಂದು 2ನೇ ಕೇಬಲ್‌ ಅನ್ನೂ ಚೀನಾದ ಸರಕು ಸಾಗಣೆ ಹಡಗೊಂದು ಕತ್ತರಿಸಿಹಾಕಿದೆ ಎಂದು ತೈವಾನ್‌ನ ಅತಿದೊಡ್ಡ ಸೇವಾ ಪೂರೈಕೆದಾರ ಚುಂಗ್ವಾ ಟೆಲಿಕಾಂ ಆರೋಪಿಸಿದೆ. ಕೇಬಲ್‌ಗ‌ಳ ಕಡಿತದಿಂದ ಜನರಿಗೆ ತೊಂದರೆಯಾಗಿರುವುದು ಮಾತ್ರವಲ್ಲದೆ, ಭದ್ರತಾ ವ್ಯವಸ್ಥೆ, ತಂತ್ರಜ್ಞಾನ, ಗುಪ್ತಚರ ಮಾಹಿತಿ ರವಾನೆಗೂ ಅಡಚಣೆಯಾಗಿದೆ.ಇನ್ನು ಚೀನ ಈ ರೀತಿ ಅಂತರ್ಜಾಲ ಕೇಬಲ್‌ ಕಡಿತಗೊಳಿಸಿ,ಉದ್ಧಟತನ ಮರೆಯುತ್ತಿರುವುದು ಇದು ಮೊದಲೇನಲ್ಲ.ಕಳೆದ 5 ವರ್ಷದಲ್ಲಿ 27 ಬಾರಿ ಇಂಥ ಕೃತ್ಯ ಎಸಗಿದೆ ಎಂದು ಟೆಲಿಕಾಂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next