Advertisement

ಯುದ್ಧ ಸನ್ನದ್ಧ ಸ್ಥಿತಿ ವೇಳೆ ತೈವಾನ್‌ನ ರಕ್ಷಣಾ ಅಧಿಕಾರಿ ಸಾವು

02:13 PM Aug 06, 2022 | Team Udayavani |

ತೈಪೆ : ದ್ವೀಪ ರಾಷ್ಟ್ರ ತೈವಾನ್‌ ಸುತ್ತಲೂ ಚೀನ ಸೇನಾ ಶಕ್ತಿ ಪ್ರದರ್ಶಿಸುತ್ತಿರುವ ವೇಳೆಯಲ್ಲೇ ತೈವಾನ್ ರಕ್ಷಣಾ ಸಚಿವಾಲಯದ ಸಂಶೋಧನೆ ಮತ್ತು ಅಭಿವೃದ್ಧಿ ಘಟಕದ ಉಪ ಮುಖ್ಯಸ್ಥ ಶನಿವಾರ ಬೆಳಗ್ಗೆ ಹೋಟೆಲ್ ಕೋಣೆಯಲ್ಲಿ ಸಾವನ್ನಪ್ಪಿದ್ದಾರೆ.

Advertisement

ಸೇನಾ ಒಡೆತನದ ನ್ಯಾಶನಲ್ ಚುಂಗ್-ಶಾನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯ ಉಪ ಮುಖ್ಯಸ್ಥ ಔ ಯಾಂಗ್ ಲಿ-ಹಸಿಂಗ್ ಅವರು ದಕ್ಷಿಣ ತೈವಾನ್‌ನ ಹೋಟೆಲ್ ಕೋಣೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಸಿಎನ್‌ಎ ವರದಿ ಮಾಡಿದೆ. ಅವರ ಸಾವು ಸಹಜವಾಗಿ ಅನುಮಾನಗಳಿಗೆ ಕಾರಣವಾದರೂ, 57 ವರ್ಷದ  ಯಾಂಗ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೋಟೆಲ್ ಕೊಠಡಿಗೆ ಯಾರೂ ಒಳನುಗ್ಗುವ ಯಾವುದೇ ಸಾಧ್ಯತೆಗಳಿಲ್ಲ ಎಂದು ಸಿಎನ್ಎ ತಿಳಿಸಿದೆ. ವರದಿಯ ಪ್ರಕಾರ ಅವರಿಗೆ ಹೃದಯ ಕಾಯಿಲೆ ಇತ್ತು ಮತ್ತು ಸ್ಟೆಂಟ್ ಅಳವಡಿಸಲಾಗಿತ್ತು ಎಂದು ಅವರ ಕುಟುಂಬ ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next