Advertisement

ಭಾರತೀಯರಿಗೆ ತೈವಾನ್‌ ವಿಶೇಷ ನಮಸ್ತೇ

01:03 AM Oct 11, 2020 | mahesh |

ಹೊಸದಿಲ್ಲಿ: ಚೀನದ ಬುಡದಲ್ಲಿದ್ದೂ ಸ್ವಾತಂತ್ರ್ಯದ ರೆಕ್ಕೆ ಬಡಿಯುತ್ತಿರುವ ತೈವಾನ್‌ ಶನಿವಾರ “ರಾಷ್ಟ್ರೀಯ ದಿನ’ವನ್ನು ಹೆಮ್ಮೆಯಿಂದ ಆಚರಿಸಿಕೊಂಡಿದೆ. ಈ ವೇಳೆ ವಿಶೇಷವಾಗಿ ಭಾರತವನ್ನು ಸ್ಮರಿಸಿ, ಚೀನಕ್ಕೆ ಇನ್ನಷ್ಟು ಹೊಟ್ಟೆ ಉರಿಸಿದೆ.

Advertisement

“ನಮ್ಮ ಧ್ವಜ ಎತ್ತರದಲ್ಲಿ ಹಾರುತ್ತಿರುವುದನ್ನು ನೋಡಿ ಹೆಮ್ಮೆಯಾಗುತ್ತಿದೆ. ಈ ಧ್ವಜವನ್ನು ಇಡೀ ಜಗತ್ತು ಗುರುತಿಸುತ್ತಿದೆ. ನಮಗೆ ಶುಭಾಶಯ ಕೋರಿದ ಎಲ್ಲ ದೇಶಗಳಿಗೂ ಧನ್ಯವಾದಗಳು. ವಿಶೇಷವಾಗಿ ಭಾರತೀಯ ಗೆಳೆಯರಿಗೆ ಪ್ರೀತಿ ಪೂರ್ವಕ ನಮಸ್ತೇ!’ ಎಂದು ತೈವಾನ್‌ ಉಪಾ ಧ್ಯಕ್ಷ ಲಾಯಿ ಚಿಂಗ್‌-ಟೆ ಟ್ವೀಟ್‌ ಮಾಡಿದ್ದಾರೆ.

ಭಾರತ ಟಾಂಗ್‌: ತೈವಾನ್‌ ರಾಷ್ಟ್ರೀಯ ದಿನದಂದು ಯಾವುದನ್ನು ಸುದ್ದಿ ಮಾಡಬೇಕು, ಯಾವುದನ್ನು ಮಾಡ ಬಾರದು ಎಂದು ಆಜ್ಞೆ ಹೊರಡಿಸಿದ್ದ ಚೀನಕ್ಕೆ ಭಾರತ ಸರಿಯಾಗಿ ಟಾಂಗ್‌ ಕೊಟ್ಟಿದೆ. “ಭಾರ ತೀಯ ಮಾಧ್ಯಮ ಗಳಿಗೆ ಸ್ವತಂತ್ರ ಅಸ್ತಿತ್ವವಿದೆ.ಯಾವುದನ್ನು ರಿಪೋರ್ಟ್‌ ಮಾಡಬೇಕು ಎಂಬುದು ನಮ್ಮ ಪತ್ರಿಕೆಗಳಿಗೆ ಚೆನ್ನಾಗಿ ಗೊತ್ತಿದೆ’ ಎಂದು ವಿದೇಶಾಂಗ ಇಲಾಖೆ ಖಡಕ್ಕಾಗಿ ಹೇಳಿದೆ. ಇವೆಲ್ಲದರ ಮಧ್ಯೆ ಹೊಸದಿಲ್ಲಿಯ ಚಾಣಕ್ಯಪುರಿಯಲ್ಲಿರುವ ಚೀನ ರಾಯಭಾರಿ ಕಚೇರಿ ಕಟ್ಟಡದ ಮುಂಭಾಗ ತೈವಾನ್‌ ರಾಷ್ಟ್ರೀಯ ದಿನಕ್ಕೆ ಶುಭ ಕೋರುವ ಪೋಸ್ಟರ್‌ಗಳು ರಾರಾಜಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next