ತೈಪೆ ಸಿಟಿ: ಮಹಿಳೆಯರಿಗೆ ಸ್ವಲ್ಪ ವಯಸ್ಸಾಗಿದ್ದರೂ ಅವರಿಗೆ ಆಂಟಿ ಎಂದು ಕರೆಯವುದು ಮಾಮೂಲಾಗಿಬಿಟ್ಟಿದೆ. ಆದರೆ ಈ ಪದದಿಂದ ಬೇಸತ್ತಿರುವ ತೈವಾನ್‌ನ ಮಹಿಳೆಯೊಬ್ಬರು ತಮ್ಮ ಹೋಟೆಲ್‌ನಲ್ಲಿ ಹಾಕಿರುವ ಬ್ಯಾನರ್ ಇದೀಗ ಎಲ್ಲೆಡೆ ಪ್ರಚಾರ ಗಿಟ್ಟಿಸಿಕೊಂಡಿದೆ.
ತೈವಾನ್‌ನ ಹೋಟೆಲ್ ಒಂದರ ಮಾಲಕಿ ತಮ್ಮ ಹೋಟೆಲ್ ಹೊರಗೆ ಬ್ಯಾನರ್ ಹಾಕಿದ್ದಾರೆ. “18 ವರ್ಷ ಮೇಲ್ಪಟ್ಟವರು ನನ್ನನ್ನು ಆಂಟಿ ಎಂದು ಕರೆದರೆ ಅವರ ಆರ್ಡರ್ ಕ್ಯಾನ್ಸಲ್ ಮಾಡಲಾಗುವುದು’ ಎಂದು ಅದರಲ್ಲಿ ಬರೆಯಲಾಗಿದೆ.
ಇತ್ತೀಚೆಗೆ ವ್ಯಕ್ತಿಯೊಬ್ಬ ಹೋಟೆಲ್‌ಗೆ ಹೋದಾಗ, ಮಾಲಕಿಯನ್ನು ಆಂಟಿ ಎಂದು ಕರೆದಿದ್ದ. ಇದರಿಂದ ಕ್ರುದ್ಧಗೊಂಡಿದ್ದ ಆಕೆ ವ್ಯಕ್ತಿ ಮಾಡಿದ ಆಹಾರದ ಆರ್ಡರ್ ರದ್ದು ಮಾಡಿದ್ದರು. ಈ ಅನುಭವವನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ನಂತರ ಅವರು, ಆ ಮಹಿಳೆಯನ್ನು “ಬ್ಯೂಟಿಫುಲ್ ಲೇಡಿ ಬಾಸ್’ ಎಂದು ಕರೆದಿದ್ದಾಗಿ ಬರೆದುಕೊಂಡಿದ್ದಾರೆ.
Related Articles