Advertisement

ತೈವಾನ್‌-ಚೀನ ಶಕ್ತಿ ಪ್ರದರ್ಶನ; ಜಲಸಂಧಿಯಲ್ಲಿ ನೌಕಾಪಡೆಗಳ ಗಸ್ತು

02:12 PM Aug 08, 2022 | Shreeram Nayak |

ತೈಪೇ ಸಿಟಿ: ಅಮೆರಿಕ ಸಂಸತ್ತಿನ ಸ್ಪೀಕರ್‌ ನ್ಯಾನ್ಸಿಯವರ ತೈವಾನ್‌ ಭೇಟಿಯ ನಂತರ ಸಿಡಿದೆದ್ದಿರುವ ಚೀನ, ತೈವಾನ್‌-ಚೀನ ನಡುವಿನ ಜಲಸಂಧಿಯಲ್ಲಿ ಶನಿವಾರ ಯುದ್ಧ ಹಡಗುಗಳ ಗಸ್ತು ಏರ್ಪಡಿಸುವ ಮೂಲಕ ತನ್ನ ಶಕ್ತಿ ಪ್ರದರ್ಶನ ನಡೆಸಿದೆ. ಇದರ ಬೆನ್ನಲ್ಲೇ ತೈವಾನ್‌ ಕೂಡ ಅದೇ ಜಲಸಂಧಿಯಲ್ಲಿ ತನ್ನ ನೌಕಾಪಡೆಯ ಹಡಗುಗಳ ಶಕ್ತಿ ಪ್ರದರ್ಶನ ನಡೆಸಿದೆ.

Advertisement

ಎರಡೂ ಕಡೆಗಳಿಂದ ತಲಾ 10 ನೌಕಾಪಡೆಯ ಹಡಗುಗಳು ಜಲಸಂಧಿಯಲ್ಲಿ ಶನಿವಾರ ಹಾದುಹೋಗಿವೆ. ಇಂಥ ಸಂದರ್ಭದಲ್ಲಿ, ಚೀನದ ಕೆಲವು ಯುದ್ಧ ನೌಕೆಗಳು ಜಲಸಂಧಿಯಲ್ಲಿ ಎರಡೂ ರಾಷ್ಟ್ರಗಳ ಗಡಿ ರೇಖೆಯ ಸಮೀಪದದಿಂದಲೂ ಹಾದುಹೋಗಿವೆ. ಒಟ್ಟಿನಲ್ಲಿ ನಾವು ಜಗ್ಗುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ತೈವಾನ್‌ ಚೀನಕ್ಕೆ ರವಾನಿಸುತ್ತಿದೆ ಎನ್ನಲಾಗಿದೆ.

ಆಗಸದಲ್ಲಿ “ವೈಪರ್ಸ್‌’ ಹಾರಾಟ
ಆಗಸದಲ್ಲಿ ತೈವಾನ್‌ ತನ್ನಲ್ಲಿರುವ ಅತ್ಯಾಧುನಿಕ ವೈಪರ್ಸ್‌ ಯುದ್ಧ ವಿಮಾನಗಳ ಹಾರಾಟ ನಡೆಸಲಾರಂಭಿಸಿದೆ. ಅವುಗಳಲ್ಲಿ ಅತ್ಯಂತ ಅಪಾಯಕಾರಿಯಾದ ಹಾರ್ಪನ್‌ ಕ್ಷಿಪಣಿಗಳನ್ನು ಹೊತ್ತೂಯ್ಯಲಾಗುತ್ತಿದೆ. ಅದಷ್ಟೇ ಅಲ್ಲದೆ, ತೈವಾನ್‌ನ ಹುಯಾಲಿನ್‌ ವಾಯು ನೆಲೆಯಲ್ಲಿ ಎಫ್-16 ವಿ ಯುದ್ಧ ವಿಮಾನಗಳ ಸಮೂಹವನ್ನು ಸಜ್ಜಗೊಳಿಸಿ ನಿಲ್ಲಿಸಲಾಗಿದೆ ಎಂದು ಮತ್ತೂ ಕೆಲವು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next