Advertisement

ಟೈಲರ್ ಕನ್ಹಯ್ಯಾ ಹತ್ಯೆ ಆರೋಪಿಗೆ ಕರಾಚಿಯ ಉಗ್ರ ಸಂಘಟನೆ ತರಬೇತಿ; ಪಾಕ್ ಹೇಳಿದ್ದೇನು?

08:38 AM Jun 30, 2022 | Team Udayavani |

ಹೊಸದಿಲ್ಲಿ: ರಾಜಸ್ಥಾನದ ಉದಯಪುರದಲ್ಲಿ ಹಿಂದೂ ಟೈಲರ್ ಕನ್ಹಯ್ಯಾ ಲಾಲ್ ಹತ್ಯೆಯಾದ ಒಂದು ದಿನದ ನಂತರ, ಪ್ರಕರಣದ ಇಬ್ಬರು ಆರೋಪಿಗಳಲ್ಲಿ ಒಬ್ಬನಾದ ಘೌಸ್ ಮೊಹಮ್ಮದ್ 2014 ರಲ್ಲಿ ಪಾಕಿಸ್ತಾನದ ಕರಾಚಿಗೆ ಹೋಗಿದ್ದ ಮತ್ತು ದಾವತ್-ಎ-ಇಸ್ಲಾಮಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಎಂದು ರಾಜಸ್ಥಾನ ಪೊಲೀಸರು ತಿಳಿಸಿದ್ದಾರೆ. ಆದರೆ, ಪಾಕಿಸ್ತಾನವು ಈ ವರದಿಯನ್ನು ಬುಧವಾರ ತಿರಸ್ಕರಿಸಿದೆ.

Advertisement

“ಭಾರತೀಯ ಮಾಧ್ಯಮಗಳಲ್ಲಿ ಉದಯಪುರದಲ್ಲಿ ನಡೆದ ಕೊಲೆ ಪ್ರಕರಣದ ತನಿಖೆಗಳನ್ನು ಉಲ್ಲೇಖಿಸಿ, ಆರೋಪಿಗಳು, ಭಾರತೀಯ ಪ್ರಜೆಗಳನ್ನು ಪಾಕಿಸ್ತಾನದ ಸಂಘಟನೆಯೊಂದಿಗೆ ಸಂಪರ್ಕಿಸಲು ಪ್ರಯತ್ನಿಸುತ್ತಿರುವ ವರದಿಗಳನ್ನು ನಾವು ನೋಡಿದ್ದೇವೆ. ಇಂತಹ ಪ್ರಚೋದನೆಗಳು ಬಿಜೆಪಿ-ಆರ್‌ಎಸ್‌ಎಸ್ ನ ‘ಹಿಂದುತ್ವ’ ಚಾಲಿತ ಭಾರತೀಯ ಆಡಳಿತವು ಪಾಕಿಸ್ತಾನದ ಕಡೆಗೆ ಬೆರಳು ತೋರಿಸುವ ಮೂಲಕ ಅವರ ಆಂತರಿಕ ಸಮಸ್ಯೆಗಳನ್ನು ಬಾಹ್ಯವಾಗಿ ಬಹಿರಂಗಪಡಿಸುವ ಮೂಲಕ ಪಾಕಿಸ್ತಾನವನ್ನು ಕೆಣಕುವ ಪ್ರಯತ್ನಗಳ ವಿಶಿಷ್ಟವಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರ ಅಸಿಮ್ ಇಫ್ತಿಕರ್ ಅಹ್ಮದ್ ಹೇಳಿದ್ದಾರೆ.

ಇದನ್ನೂ ಓದಿ:ಸಂಘಟನೆಗಳ ಮೇಲೆ ನಿಗಾ: ಉದಯಪುರ ಘಟನೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹೈಅಲರ್ಟ್‌

ಜೂನ್ 28 ರಂದು ಬಿಜೆಪಿ ಅಧಿಕಾರಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದ ಟೈಲರ್ ಕನ್ಹಯ್ಯಾ ಲಾಲ್ ಅವರ ಭೀಕರ ಹತ್ಯೆ ದೇಶವನ್ನು ಬೆಚ್ಚಿಬೀಳಿಸಿದೆ. ದುಷ್ಕರ್ಮಿಗಳಾದ ಮೊಹಮ್ಮದ್ ರಿಯಾಜ್ ಅಟ್ಟಾರಿ ಮತ್ತು ಘೌಸ್ ಮೊಹಮ್ಮದ್ ಸಿಕ್ಕಿಬಿದ್ದಿದ್ದಾರೆ. ಪಾಕಿಸ್ತಾನದ ದಾವತ್-ಎ-ಇಸ್ಲಾಮಿ ಸಂಘಟನೆಯೊಂದಿಗೆ ಆರೋಪಿಯೊಬ್ಬನ ಸಂಪರ್ಕದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

“ಆರೋಪಿಗಳಲ್ಲಿ ಒಬ್ಬನಾದ ಘೌಸ್ ಮೊಹಮ್ಮದ್ ಕರಾಚಿ ಮೂಲದ ಇಸ್ಲಾಮಿ ಸಂಘಟನೆ ದಾವತ್-ಎ-ಇಸ್ಲಾಮಿಯೊಂದಿಗೆ ಸಂಪರ್ಕ ಹೊಂದಿದ್ದಾನೆ. ಆತ 2014ರಲ್ಲಿ ಕರಾಚಿಗೆ ಭೇಟಿ ನೀಡಿದ್ದ. ಇದುವರೆಗೆ ಇಬ್ಬರು ಪ್ರಮುಖ ಆರೋಪಿಗಳು ಸೇರಿದಂತೆ ಐವರನ್ನು ವಶಕ್ಕೆ ಪಡೆದಿದ್ದೇವೆ” ಎಂದು ರಾಜಸ್ಥಾನ ಡಿಜಿಪಿ ಎಂ.ಎಲ್. ಲಾಥರ್ ಹೇಳಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next