ಚಿಕ್ಕಮಗಳೂರು: ವಿವಾಹಿತನೊಂದಿಗೆ ರಿಜಿಸ್ಟರ್ ವಿವಾಹವಾದ ಎನ್.ಆರ್.ಪುರ ತಹಶಿಲ್ದಾರ್ ಗೀತಾಗೆ ಜಿಲ್ಲಾಧಿಕಾರಿ ನೋಟಿಸ್ ಕಳುಹಿಸಿದ ಘಟನೆ ನಡೆದಿದೆ.
ಈಗಾಗಲೇ ವಿವಾಹವಾಗಿದ್ದ ಗ್ರಾಮ ಲೆಕ್ಕಿಗ ಶ್ರೀನಿಧಿ ಎಂಬವರೊಂದಿಗೆ ತಹಶೀಲ್ದಾರ್ ಗೀತಾ ರಿಜಿಸ್ಟರ್ ವಿವಾಹವಾಗಿದ್ದರು. ಇದರಿಂದಾಗಿ ಶ್ರೀನಿಧಿ ಪತ್ನಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು.
ತಹಶೀಲ್ದಾರ್ ಗೀತಾ ಅವರು ಈಗಾಗಲೇ ಪತಿಯಿಂದ ವಿಚ್ಛೇದನ ಪಡೆದಿದ್ದಾರೆ. ಆದರೆ ಗ್ರಾಮ ಲೆಕ್ಕಿಗ ಶ್ರೀನಿಧಿ ಪತ್ನಿಯಿಂದ ವಿಚ್ಛೇದನ ಪಡೆದಿಲ್ಲ. ಇವರಿಬ್ಬರು ಜುಲೈ 19 ರಂದು ಎನ್.ಆರ್.ಪುರದಲ್ಲಿ ರಿಜಿಸ್ಟರ್ ವಿವಾಹವಾಗಿದ್ದರು.
ಇದನ್ನೂ ಓದಿ:ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಜೈಲಿನಿಂದ ಬಿಡುಗಡೆ
ಮದುವೆ ವೇಳೆ ತಹಶೀಲ್ದಾರ್ ಗೀತಾ ತಾನು ಅವಿವಾಹಿತೆ ಎಂದು ದಾಖಲೆ ತೋರಿಸಿದ್ದರು. ಆದರೆ ಶ್ರೀನಿಧಿ ಪತ್ನಿ ದೂರಿನ ಹಿನ್ನೆಲೆ ತಹಶೀಲ್ದಾರ್ ಗೀತಾಗೆ ಜಿಲ್ಲಾಧಿಕಾರಿಯವರು ನೋಟೀಸ್ ನೀಡಿದ್ದಾರೆ. 7 ದಿನಗಳ ಒಳಗೆ ಉತ್ತರ ನೀಡುವಂತೆ ನೋಟೀಸ್ ಜಾರಿ ಮಾಡಲಾಗಿದೆ.