ಕುಣಿಗಲ್: ನಾಡಪ್ರಭು ಕೆಂಪೇಗೌಡ ಅವರ ಜಯಂತೋತ್ಸವ ಮೆರವಣಿಗೆ ವೇಳೆಯಲ್ಲಿ ಆದ ಲೋಪದೋಷದ ಸಂಬಂಧ ತಹಶೀಲ್ದಾರ್, ನಾಡ ಹಬ್ಬಗಳ ಸಮಿತಿಯ ಅಧ್ಯಕ್ಷ ಮಹಬಲೇಶ್ವರ ಬೇಷರತ್ ಕ್ಷಮೆ ಕೋರಿದರು.
ಪಟ್ಟಣದಲ್ಲಿ ನಡೆದ ಕೆಂಪೇಗೌಡ ಅವರ ಭಾವಚಿತ್ರ ಮೆರವಣಿಗೆ ವೇಳೆಯಲ್ಲಿ ಆದ ಘಟನೆಯಿಂದ ಉದ್ಬವಿಸಿದ ವಿವಾದ ಸಂಬಂಧ ತಹಶೀಲ್ದಾರ್ ಮಹಬಲೇಶ್ವರ ಅವರ ನ್ಯಾಯಾಲಯದ ಅವರಣದಲ್ಲಿ ವಿವಿಧ ಸಮುದಾಯದ ಮುಖಂಡರ ಸಭೆ ಕರೆದು ಅಂದು ನಡೆದ ಘಟನೆ ಸಂಬಂಧ ಕಾರಣ ಕೇಳಿ ಪುರಸಭೆ ಮುಖ್ಯಾಧಿಕಾರಿಗೆ ನೋಟಿಸ್ ನೀಡಲಾಗಿದೆ ಎಂದು ಸಭೆಗೆ ತಿಳಿಸಿದರು.
ಲೋಪದೋಷಕ್ಕೆ ಕಾರಣರಾದವರನ್ನು ತಿಳಿಸುವಂತೆ ಮುಖಂಡರು ತಹಶೀಲ್ದಾರ್ ಅವರನ್ನು ಆಗ್ರಪಡಿಸಿದರು, ಕೆಂಪೇಗೌಡ ಜಯಂತಿ ಆಚರಣೆ ಸಂಬಂಧ ಶಾಸಕರು ಅಧ್ಯಕ್ಷತೆಯಲ್ಲಿ ಪೂರ್ವ ಭಾವಿ ಸಭೆ ಕರೆಯಲಾಗಿತ್ತು, ಆದರೆ ಅದೇ ದಿನ ಎಡಿಯೂರಿಗೆ ಮುಖ್ಯಮಂತ್ರಿಗಳು ಬಂದ ಕಾರಣ ಪೂರ್ವ ಭಾವಿ ಸಭೆಯಲ್ಲಿ ನಾನು ಇರಲಿಲ್ಲ, ಆಚರಣೆ ಸಂಬಂಧ ಒಂದೊಂದು ಇಲಾಖೆಗೆ ಒಂದೊಂದು ಕಾರ್ಯಕ್ರಮವನ್ನು ವಹಿಸಲಾಗಿತು, ಮೆರವಣಿಗೆಗೆ ವಾಹನ ಹಾಗೂ ಡೊಳ್ಳುಕುಣಿತ ಪುರಸಭಾ ಅಧ್ಯಕ್ಷರು ವಹಿಸಿಕೊಂಡಿದರು, ಪುರಸಭೆಯ ಕಸದ ವಾಹನದಲ್ಲಿ ಕೆಂಪೇಗೌಡರ ಭಾವಚಿತ್ರ ಪ್ಲೆಕ್ಸ್ ಕಟ್ಟಲಾಗಿದೆ ಎಂದು ತಿಳಿಯುತ್ತಿದಂತೆ ಸ್ಥಳಕ್ಕೆ ತೆರಳಿ ಕಸದ ವಾಹನದಲ್ಲಿ ಅಳವಡಿಸಿದ ಪ್ಲೆಕ್ಸ್ ನ್ನು ತೆಗಿಸಿ ಬೇರೆ ವಾಹನದಲ್ಲಿ ಪ್ಲೆಕ್ಸ್ ಹಾಕಿಸಿ ಮೆರವಣಿಗೆ ಮಾಡಲಾಯಿತು, ಕಸದ ವಾಹನದಲ್ಲಿ ಮಾಡಲಾಗಲಿಲ್ಲ ಎಂದು ಸ್ಪಷ್ಟಪಡಿಸಿದರು.
ತರಾಟೆ : ನಾಡ ಹಬ್ಬಗಳ ಸಮಿತಿಯ ಅಧ್ಯಕ್ಷರಾಗಿರುವ ನೀವು ಮುನ್ನೆಚ್ಚರಿಕೆ ವಹಿಸಬೇಕಾಗಿತ್ತು, ನಾಡಪ್ರಭು ಕೆಂಪೇಗೌಡ ಅವರಿಗೆ ಅಪಮಾನ ಮಾಡಲಾಗಿದೆ ಇದರ ಹೋಣೆಯನ್ನು ನೀವೆ ಹೊರಬೇಕು ಎಂದು ತರಾಟೆ ತೆಗೆದುಕೊಂಡ ಮುಖಂಡರು ತಪ್ಪಸ್ಥ ಅಧಿಕಾರಿಯನ್ನು ಕೂಡಲೇ ಸೇವೆಯಿಂದ ಅಮಾನತು ಪಡಿಸಬೇಕು ಇಲ್ಲವಾದಲ್ಲಿ ಎಲ್ಲಾ ಸಮುದಾಯದೊಂದಿಗೆ ಸೇರಿ ಉಗ್ರ ಹೋರಾಟ ಮಾಡಲಾಗುವುದೆಂದು ಮುಖಂಡರು ಎಚ್ಚರಿಕೆ ನೀಡಿದರು.
ಕೆಂಪೇಗೌಡರ ಬಗ್ಗೆ ಅಪಾರವಾದ ಗೌರವ ಇಟ್ಟುಕೊಂಡಿದ್ದೇನೆ ಯಾರು ಸಹಾ ಉದ್ದೇಶ ಪೂರಕವಾಗಿ ಅಪಮಾನ ಮಾಡಬೇಕೆಂಬ ಉದ್ದೇಶ ಇರಲಿಲ್ಲ ಆಕಸ್ಮಿಕವಾಗಿ ಆಗಿರುವ ಘಟನೆಯಿಂದ ಮನಸ್ಸಿಗೆ ನೋವಾಗಿದೆ ಎಂದು ಹೇಳಿದ ತಹಶೀಲ್ದಾರ್ ಇದಕ್ಕೆ ಕ್ಷೇಮೆ ಕೋರುತ್ತೇನೆ ಇನ್ನು ಮುಂದೆ ಈ ರೀತಿಯಾಗದಂತೆ ಎಚ್ಚರ ವಹಿಸಲಾಗುವುದು ಇಲ್ಲಿಗೆ ವಿವಾದವನ್ನು ಇಲ್ಲಿಗೆ ನಿಲ್ಲಿಸುವಂತೆ ಮನವಿ ಮಾಡಿದರು, ಈ ಸಂಬಂಧ ಮುಖಂಡರೊಂದಿಗೆ ಚರ್ಚಿಸಿ ನಾಳೆ ತಿಳಿಸುವುದ್ದಾಗಿ ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್.ಜಗದೀಶ್ ತಿಳಿಸಿದರು.
ಸಭೆಯಲ್ಲಿ ಪುರಸಭೆ ಮಾಜಿ ಅಧ್ಯಕ್ಷರಾದ ನಳಿನಾಬೈರಪ್ಪ, ಕೆ.ಎಲ್.ಹರೀಶ್, ಸದಸ್ಯ ಈ.ಮಂಜು, ಚುಂಚ ಶ್ರೀ ಮಹಿಳಾ ಸಂಘದ ಅಧ್ಯಕ್ಷೆ ಅನುಸೂಯ, ವಕೀಲ ಸಂಘದ ಅಧ್ಯಕ್ಷ ಬಾಬು, ವಕೀಲ ಸತೀಶ್, ಡಿಎಸ್‌ಎಸ್ ಸಂಚಾಲಕ ವಿ.ಶಿವಶಂಕರ್, ಮುಖಂಡರಾದ ಜಯರಾಮ್, ತರಿಕೆರೆ ಪ್ರಕಾಶ್, ಮಂಜುನಾಥ್, ಮೊದೂರು ಗಂಗಾಧರ್, ದೇವರಾಜ್, ಎನ್.ರಾಜೇಶ್ ಮತ್ತಿತರರು ಇದ್ದರು.