Advertisement
ಸರ್ಕಾರವೆನೋ ಗಜೇಂದ್ರಗಡವನ್ನು ತಾಲೂಕನ್ನಾಗಿ ಘೋಷಣೆ ಮಾಡಿ ಕೈ ತೊಳೆದುಕೊಂಡಿತು. ಆದರೆ ಕಚೇರಿಗೆ ಬೇಕಾದ ಕನಿಷ್ಠ ಮೂಲ ಸೌಕರ್ಯಗಳನ್ನು ನೀಡಿಲ್ಲ. ಹೀಗಾಗಿ ಜನ ತಮ್ಮ ಕೆಲಸ ಕಾರ್ಯಗಳಿಗೆ ಇನ್ನೂ ರೋಣ ಪಟ್ಟಣಕ್ಕೆ ಅಲೆಯುವುದು ತಪ್ಪಿಲ್ಲ. ಅತ್ತ ಪೂರ್ಣ ಅಧಿಕಾರವುಳ್ಳ ತಹಶೀಲ್ದಾರರೂ ಇಲ್ಲ. ಇತ್ತ ಸಮರ್ಪಕ ಸಿಬ್ಬಂದಿಯೂ ಇಲ್ಲವಾಗಿ, ಆರಕ್ಕೇರದ, ಮೂರಕ್ಕೂ ಇಳಿಯದ ಕರುಣಾಜನಕ ಸ್ಥಿತಿ ಗಜೇಂದ್ರಗಡ ತಹಶೀಲ್ದಾರ್ ಕಾರ್ಯಾಲಯಕ್ಕೆ ಬಂದೊದಗಿದೆ.
Related Articles
Advertisement
ಸಿಬ್ಬಂದಿಯಿಲ್ಲದ ತಾಲೂಕು ಕಚೇರಿ: ತಹಶೀಲ್ದಾರ್ ಕಚೇರಿಯಲ್ಲಿ ಒಬ್ಬ ತಹಶೀಲ್ದಾರ್, ಇಬ್ಬರು ಶಿರಸ್ತೇದಾರ, ಇಬ್ಬರು ಪ್ರಥಮ ದರ್ಜೆ, ನಾಲ್ವರು ದ್ವಿತೀಯ ದರ್ಜೆ ಸಹಾಯಕರ ಅಗತ್ಯವಿದೆ. ಆದರೆ ಗಜೇಂದ್ರಗಡ ತಹಶೀಲ್ದಾರ್ ಕಚೇರಿಯಲ್ಲಿ ಒಬ್ಬ ಪ್ರಥಮ ದರ್ಜೆ ಸಹಾಯಕರನ್ನು ಹೊರತುಪಡಿಸಿ, ಯಾವುದೇ ವರ್ಗದ ಅಧಿಕಾರಿಗಳು ಇಲ್ಲದ ಪರಿಣಾಮ ಸಿಬ್ಬಂದಿ ಕೊರತೆ ತಾಲೂಕು ಕಚೇರಿಗೆ ತೀವ್ರವಾಗಿ ಕಾಡುತ್ತಿದೆ. ಆದರೆ ಸರ್ಕಾರ ಮಾತ್ರ ಅಧಿಕಾರಿಗಳ ನೇಮಕಕ್ಕೆ ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.
ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಬೆಳೆಯುತ್ತಿರುವ ವಾಣಿಜ್ಯ ನಗರಿ ಖ್ಯಾತಿಯ ಗಜೇಂದ್ರಗಡ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿಸಬೇಕೆಂದು ಈ ಭಾಗದ ಜನರು ನಡೆಸಿದ ಹೋರಾಟಕ್ಕೆ ಸರ್ಕಾರವೇನೊ ತಾಲೂಕು ಕೇಂದ್ರ ಘೋಷಣೆ ಮಾಡಿತು. ಆದರೆ ತಾಲೂಕು ಕಚೇರಿಗೆ ಬೇಕಾದ ಪೂರ್ಣ ಪ್ರಮಾಣದ ತಹಶೀಲ್ದಾರ್ ಸೇರಿದಂತೆ ಇನ್ನಿತರ ಸಿಬ್ಬಂದಿ ಹಾಗೂ ಮೂಲ ಸೌಲಭ್ಯಗಳನ್ನು ಸರ್ಕಾರ ಶೀಘ್ರದಲ್ಲೇ ಒದಗಿಸದಿದ್ದರೆ ಮತ್ತೂಂದು ಹೋರಾಟಕ್ಕೆ ಜನತೆ ಅಣಿಯಾಗುವುದರಲ್ಲಿ ಸಂದೇಹವೇ ಇಲ್ಲ.
ಕಾಯಂ ತಹಶೀಲ್ದಾರ್ ಸೇರಿದಂತೆ ಗಜೇಂದ್ರಗಡ ತಾಲೂಕು ಕಚೇರಿಗೆ ಬೇಕಾದ ಸಿಬ್ಬಂದಿ ಜೊತೆ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಬೀದಿಗಿಳಿದು ಉಗ್ರ ಹೋರಾಟ ಮಾಡಲಾಗುವುದು.ಭೀಮಣ್ಣ ಇಂಗಳೆ,
ಜಯ ಕರ್ನಾಟಕ ಸಂಘಟನೆ ತಾಲೂಕಾಧ್ಯಕ್ಷ ಕಾಯಂ ತಹಶೀಲ್ದಾರ್ ಸೇರಿ ಮೂಲ ಸೌಲಭ್ಯ ಒದಗಿಸುವ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದ್ದು, ಗಜೇಂದ್ರಗಡ ತಾಲೂಕು ಕಚೇರಿಗೆ ಪ್ರಭಾರಿ ತಹಶೀಲ್ದಾರರನ್ನಾಗಿ ಆರ್. ಎಸ್. ಮದಗುಣಕಿ ಅವರನ್ನು ನೇಮಕ ಮಾಡಿದ್ದಾರೆ. ಆದರೆ ಇನ್ನೂ ಕರ್ತವ್ಯಕ್ಕೆ ಹಾಜರಾಗಿಲ್ಲ.
ವೀರಣ್ಣ ಅಡಗತ್ತಿ, ಕಂದಾಯ ನಿರೀಕ್ಷಕ ಡಿ.ಜಿ. ಮೋಮಿನ್