ಶಾರ್ಜಾ: ಇಲ್ಲಿನ ಪಾಕಿಸ್ಥಾನ್ ಸೋಶಿಯಲ್ ಸೆಂಟರ್‌ನಲ್ಲಿ ಇತ್ತೀಚೆಗೆ ನಡೆದ ಹಿಂದಿ ಹಳೆಯ ಮಧುರಗೀತೆಗಳ ಕಾರ್ಯಕ್ರಮ “ಸುನೇರಿ ಯಾದೇಂ’ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಮ್ಮದ್ ರಫಿ ಎಂದೇ ಖ್ಯಾತರಾಗಿರುವ ಮಂಗಳೂರಿನ ಗಾಯಕ ಠಾಗೋರ್‌ದಾಸ್ ಅವರು ಹಳೆಯ ಹಿಂದಿ ಚಿತ್ರಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಕಲಾಭಿಮಾನಿಗಳ ಮನಸೂರೆಗೊಳಿಸಿದರು.
65ರ ಹರೆಯದ ಠಾಗೋರ್‌ದಾಸ್ ಅವರು ಸುಮಾರು 50 ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ದೇಶ-ವಿದೇಶಗಳಲ್ಲಿ 2,000ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. 700ಕ್ಕೂ ಅಧಿಕ ಹಳೆಯ ಹಾಡುಗಳು ಅವರಿಗೆ ಕಂಠಸ್ತವಾಗಿವೆ. ಗಾಯಕಿಯರಾದ ಅನಿತಾ ಮಂಗಳೂರು, ಡಾ| ಸ್ವರಲಯ ಹಾಗೂ ಸೂರ್ಯ ಅವರು ಠಾಗೋರ್ ಅವರಿಗೆ ಸಾಥ್ ನೀಡಿದರು.
ಸಾಹಿತಿ ಹನೀಫ್ ಪಲ್ಯì ಅವರು ಬಾಲಕಲಾವಿದೆ ಕಲ್ಯಾಣಿಯ ಜತೆಗೆ ಹಳೆಯ ಶ್ಯಾಮ ಹಾಗೂ ಸುರಯ್ನಾ ಅವರ ಹಾಡುಗಳನ್ನು ಹಾಡಿದರು. ಹಿಂದಿ ಚಲನಚಿತ್ರ ಗಾಯಕ ಶಬ್ಬೀರ್ ಕುಮಾರ್ ಅವರ ಪುತ್ರಿ ರುಬಿನಾ ಶಬ್ಬೀರ್ ಅವರೂ ಹಾಡಿ ರಂಜಿಸಿದರು.
ವೈದ್ಯಕೀಯ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿದ ಡಾ| ಆಸಿಫ್ ಇಕ್ಬಾಲ್ ಹಾಗೂ ಠಾಗೋರ್‌ದಾಸ್ ಅವರನ್ನು ಸಮ್ಮಾನಿಸಲಾಯಿತು.
ಡಾ| ಮಹಮ್ಮದ್ ಕಾಪು, ದಯಾ ಕಿರೋಡಿಯನ್, ಸೊಹಿಲ್ ಅಬ್ಟಾಸ್, ಪ್ರಭಾಕರ ಅಂಬಲತ್ತೆರೆ, ಲತೀಫ್ ಮೂಲ್ಕಿ, ದಿನೇಶ್ ಶೇರಿಗಾರ್, ದಾಸ್ ಕುಡ್ಲ, ಅಶೋಕ್ ಬೈಲೂರು, ದಿನೇಶ್ ದೊಡ್ಡಣಗುಡ್ಡೆ, ಮಹೇಶ್ ಅತ್ತಾವರ, ಅಶೋಕ್ ಅಂಚನ್ ಹಾಗೂ ದಿನೇಶ್ ದೇವಾಡಿಗ ಮುಖ್ಯ ಅತಿಥಿಗಳಾಗಿದ್ದರು.