Advertisement

ಶೂಟಿಂಗ್ ಮುಗಿಸಿದ ‘ಟಗರು ಪಲ್ಯ’: ಪೋಸ್ಟ್ ಪ್ರೊಡಕ್ಷನ್ ನತ್ತ ಡಾಲಿ ನಿರ್ಮಾಣದ ಚಿತ್ರ

04:50 PM Jun 02, 2023 | Team Udayavani |

“ಡಾಲಿ ಪಿಕ್ಚರ್’ ಬ್ಯಾನರ್‌ನಲ್ಲಿ ನಟ ಡಾಲಿ ಧನಂಜಯ್‌ ನಿರ್ಮಿಸುತ್ತಿರುವ “ಟಗರು ಪಲ್ಯ’ ಸಿನಿಮಾದ ಚಿತ್ರೀಕರಣ ಇತ್ತೀಚೆಗೆ ಪೂರ್ಣಗೊಂಡಿದೆ.

Advertisement

ನಿರ್ದೇಶಕ ಯೋಗರಾಜ್‌ ಭಟ್‌ ಸೇರಿದಂತೆ ಹಲವು ನಿರ್ದೇಶಕರ ಜೊತೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿರುವ ಉಮೇಶ್‌ ಕೆ. ಕೃಪ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಟಗರು ಪಲ್ಯ’ ಸಿನಿಮಾವನ್ನು ಮಂಡ್ಯ, ಮಳವಳ್ಳಿ, ಮುತ್ತತ್ತಿ, ಶಿಂಶ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.

“ಟಗರು ಪಲ್ಯ’ ಸಿನಿಮಾದ ಮೂಲಕ ನೆನಪಿರಲಿ ಪ್ರೇಮ್‌ ಪುತ್ರಿ ಅಮೃತಾ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ನಾಗಭೂಷಣ್‌ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ತಾರಾ, ಶರತ್‌ ಲೋಹಿತಾಶ್ವ, ರಂಗಾಯಣ ರಘು ಮೊದಲಾದವರು “ಟಗರು ಪಲ್ಯ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಔಟ್‌ ಆ್ಯಂಡ್‌ ಔಟ್‌ ಕಾಮಿಡಿ ಕಥಾಹಂದರ ಹೊಂದಿರುವ “ಟಗರು ಪಲ್ಯ’ ಸಿನಿಮಾದಲ್ಲಿ ಮಂಡ್ಯ ಹಳ್ಳಿಗಳಲ್ಲಿ ನಡೆಯುವ ಆಚರಣೆಗಳನ್ನು ತೆರೆಮೇಲೆ ತರಲಾಗುತ್ತಿದೆ ಎಂಬುದು ಚಿತ್ರತಂಡದ ಮಾತು.

“ಟಗರು ಪಲ್ಯ’ ಸಿನಿಮಾದ ಹಾಡುಗಳಿಗೆ ವಾಸುಕಿ ವೈಭವ್‌ ಸಂಗೀತ ಸಂಯೋಜಿಸಿದ್ದು, ಚಿತ್ರಕ್ಕೆ ಎಸ್‌. ಕೆ ರಾವ್‌ ಛಾಯಾಗ್ರಹಣವಿದೆ. ಕಳೆದ ನವೆಂಬರ್‌ನಲ್ಲಿ ಸೆಟ್ಟೇರಿದ “ಟಗರು ಪಲ್ಯ’ ಸಿನಿಮಾದ ಚಿತ್ರೀಕರಣ ಇದೀಗ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳತ್ತ ಚಿತ್ರತಂಡ ಮುಖ ಮಾಡಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ಅಕ್ಟೋಬರ್‌ ವೇಳೆಗೆ ಸಿನಿಮಾ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next